ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಅತ್ಯಧಿಕವಾಗಿ ಸುರಿದ ಪರಿಣಾಮ ಈ ಬಾರಿ ಚಳಿಯೂ ಜಾಸ್ತಿ ಇರಲಿದೆ. ಕಳೆದ ವರ್ಷಕ್ಕಿಂತ ಅತ್ಯಧಿಕವಾಗಿರಲಿದೆ. ಈಗಾಗಲೇ ಚಳಿಗಾಲ ಶುರುವಾಗಿದೆ ಕೂಡ. ಚಳಿಗಾಲದಲ್ಲಿ ಮನೆಯೆಲ್ಲಾ ತಂಪಾಗಿರುತ್ತದೆ. ಕೆಲವೊಬ್ಬರಿಗೆ ಅದರಲ್ಲೂ ಅಸ್ತಮ ಇರುವವರಿಗೆ ಚಳಿಗಾಲ ತುಂಬಾ ಡೇಂಜರ್. ಚಳಿಗಾಲದಿಂದ ಬಚಾವ್ ಆಗುವುದಕ್ಕೆ ರೂಮ್ ಹೀಟರ್ ಹಾಕಿಕೊಳ್ಳುತ್ತಾರೆ. ರೂಮ್ ಹೀಟರ್ ಬಳಸದೆಯೂ ರೂಮನ್ನ ಬಿಸಿಯಾಗಿಡಬಹುದು. ಅದಕ್ಕೆ ಇಲ್ಲಿದೆ ಉಪಾಯ.
* ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಕಡಿಮೆ. ಬರುವ ಕಿರಣಗಳಲ್ಲಿಯೇ ಮನೆಯನ್ನ ಬಿಸಿ ಮಾಡಬಹುದು. ಸೂರ್ಯನ ಕಿರಣಗಳು ಬಂದಾಗ ಬಾಗಿಲು, ಕಿಟಕಿಯನ್ನು ತೆರೆದಿಡಿ. ಸಂಜೆಯಾಗುತ್ತಲೇ ಕ್ಲೋಸ್ ಮಾಡಿ. ಆಗ ಬಿಸಿ ಮನೆಯಲ್ಲಿ ಉಳಿಯುತ್ತದೆ.
* ನೆಲದ ಮೇಲೆ ಗಟ್ಟಿಯಾದ ಮ್ಯಾಟ್ ಗಳನ್ನು ಹರಡಿ. ಇದರಿಂದ ನೆಲ ತಂಪಾಗುವುದು ತಪ್ಪುತ್ತದೆ. ಚಳಿ ಮನೆಯೊಳಗೆ ಕಡಿಮೆಯಾಗುತ್ತದೆ.
* ಕಿಟಕಿ, ಬಾಗಿಲಿಗೆ ದಪ್ಪವಾದ ಕರ್ಟನ್ ಗಳನ್ನು ಹಾಕಿ. ಇದರಿಂದ ಶೀತಗಾಳಿ ಒಳನುಸುಳುವುದು ತಪ್ಪುತ್ತದೆ.
* ತಾಪನ ಪ್ಯಾಡ್ ಗಳನ್ನ ಬಳಸಬಹುದು. ಅಥವಾ ಬಿಸಿ ನೀರಿನ ಬಾಟೆಲ್ ಗಳನ್ನು ತುಂಬಿಸಿ ದಿಂಬು, ಹಾಸಿಗೆ ಬಳಿ ಇಟ್ಟುಕೊಳ್ಳುವುದರಿಂದ ಬಿಸಿ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ನೆಮ್ಮದಿಯ ನಿದ್ರೆ ಬರಲಿದೆ.
* ಕಾಟನ್ ತುಂಬಿದ ಹಾಸಿಗೆಗಳು ಕೂಡ ಈ ಚಳಿಗಾಲಕ್ಕೆ ಸೇಫ್ ಆಗಿದೆ. ಹೀಗಾಗಿ ಸಾಧ್ಯವಾದಷ್ಟು ಮಲಗುವ ಕೋಣೆಯಲ್ಲಿ ಹತ್ತಿ ತುಂಬಿದ ಹಾಸಿಗೆಗಳನ್ನೇ ಹಾಕಿಕೊಳ್ಳಿ.
* ಆರಂಭದಲ್ಲಿಯೇ ಚಳಿ ಜೋರಾಗಿದೆ. ಮನೆಯೆಲ್ಲಾ ಕೊರೆಯುವುದಕ್ಕೆ ಶುರು ಮಾಡಿದೆ. ಬೆಳಗ್ಗೆನೆ ಎದ್ದು ಕೆಲಸಕ್ಕೆ ಹೋಗುವವರಿಗಂತು, ಮೈ ಕೈ ಬಿಡುವುದಕ್ಕೆ ಆಗದಷ್ಟು ಚಳಿ ಕಾಣಿಸುತ್ತಿದೆ. ಇದರಿಂದ ನಡುಗಿಕೊಂಡೆ ಕೆಲಸ ಆರಂಭಿಸುತ್ತಿದ್ದಾರೆ.