ಚಿತ್ರದುರ್ಗ, ಜುಲೈ.10: ಜೀವನದಲ್ಲಿ ಎದುರಾಗುವ ಒತ್ತಡ, ಸಮಸ್ಯೆಗಳನ್ನು ಎದುರಿಸಲು ಮಾನಸಿಕವಾಗಿ ಸಧೃಡವಾಗುವುದು ಅವಶ್ಯಕವಾಗಿದೆ. ಯೋಗ ಹಾಗೂ ಧ್ಯಾನ ನಮ್ಮ ಶಾರೀರಿಕ ಹಾಗೂ ಮಾನಸಿಕ ಸಧೃಡತೆಯನ್ನು ಹೆಚ್ಚಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾ ಪತಂಜಲಿ ಯೋಗ ಸಮಿತಿ ವತಿಯಿಂದ ಗುರು ಪೂರ್ಣಿಮಾ ನಿಮಿತ್ತ ಗುರುವಾರ ನಗರದ ಧವಳಗರಿ ಬಡಾವಣೆಯ ಜ್ಞಾನ ಭಾರತಿ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಉಚಿತವಾಗಿ ಯೋಗ ಹಾಗೂ ಧ್ಯಾನ ತರಬೇತಿಯನ್ನು ನೀಡುತ್ತಿರುವ ಯೋಗ ಶಿಕ್ಷಕರ ಕಾರ್ಯ ಉತ್ತಮವಾದುದು. ನಗರದ ಒತ್ತಡದ ಜೀವನ ಶೈಲಿಯಲ್ಲಿ ಯೋಗ ಹಾಗೂ ಧ್ಯಾನ ಎಲ್ಲರಿಗೂ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಮುರುಘಾ ಮಠದ ಬಸವಕುಮಾರ ಸ್ವಾಮೀಜಿ ಮಾತನಾಡಿ, ಎಲ್ಲಾ ವಿದ್ಯೆಗಳನ್ನು ಕಲಿಸಲು ಗುರುಗಳು ಇದ್ದಾರೆ. ಆದರೆ ಕಾರುಣ್ಯ ತುಂಬಿದ ಮನಸ್ಸು ಹೊಂದಿರುವ ಗುರುಗಳು ಮಾತ್ರ ಪೂಜನೀಯ ಸ್ಥಾನಗಳಿಸುತ್ತಾರೆ. ಗುರು ಪರಂಪರೆಗೆ ನಾಡಿನ ಸಂಸ್ಕøತಿಯಲ್ಲಿ ವಿಶೇಷ ಸ್ಥಾನವಿದೆ ಎಂದರು.
ಕಾರ್ಯಕ್ರಮದಲ್ಲಿ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿರುವ ತಲಾ 10 ಜನ ಯೋಗ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು. ಬಾಪೂಜಿ ವಿದ್ಯಾ ಸಂಸ್ಥೆಯ ವೀರೇಶ್, ಬ್ರಹ್ಮಕುಮಾರಿ ರಶ್ಮಿ ಅಕ್ಕ, ಹನುಮೇಶ್ ಪದಕಿ, ಅನಪಾನ ಧ್ಯಾನ ಸಂಸ್ಥೆಯ ಬಿ.ಎನ್.ರಶ್ಮಿ, ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್, ಯೋಗ ಶಿಕ್ಷಕರು, ಜಿಲ್ಲಾ ಪತಂಜಲಿ ಯೋಗ ಸಮಿತಿಯ ಎಮ್.ನಾಗರತ್ಮಮ್ಮ, ಸಿ.ಜಿ.ಶ್ರೀನಿವಾಸ, ಗಂಗಣ್ಣ, ದೇವಾನಂದ, ಶ್ರೀನಿವಾಸ ಗಿರಿಯಪ್ಪ, ಜೆ.ಎಸ್.ಗುರುಮೂರ್ತಿ, ಬಿ.ಟಿ.ಲವಕುಮಾರ್, ಕಾಂತರಾಜು, ಕಂಚವೀರಪ್ಪ, ಶಶಿಕಿರಣ್ ಗುಡೇಕೋಟೆ, ರವೀಂದ್ರನಾಥ್, ರಘು, ಶ್ರೀಕಾಂತ್, ಜಯಪ್ಪ, ನಾಗಮ್ಮ ಮುಂತಾದವರು ಉಪಸ್ಥಿರಿದ್ದರು.
