ನೊಂದ ಜೀವಿಗಳಿಗೆ ಯೋಗ ಒಂದು ವರದಾನ : ಮಹದೇವಿ.ಎಂ. ಮರಕಟ್ಟಿ

1 Min Read

 

ಸುದ್ದಿಒನ್, ಚಿತ್ರದುರ್ಗ, ಜೂನ್.22 : ನೊಂದ ಜೀವಿಗಳಿಗೆ ಯೋಗ ಒಂದು ವರದಾನವಾಗಿದೆ. ಧ್ಯಾನಾಸಕ್ತ ಚಟುವಟಿಕೆಗಳು ಮನಸ್ಸಿಗೆ ಏಕಾಗ್ರತೆ, ನೆಮ್ಮದಿ, ಶಾಂತಿಯನ್ನು ನೀಡುತ್ತದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಮಹದೇವಿ.ಎಂ. ಮರಕಟ್ಟಿ ತಿಳಿಸಿದರು.


ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಹತ್ತು ದಿನಗಳ ಯೋಗ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಲ್ಕು ಗೋಡೆಗಳ ಬಂಧನದಿಂದ ಬೇಸತ್ತು ಕಾಲನೂಕುತ್ತಿರುವ ಖೈದಿ ಬಂಧುಗಳಿಗೆ ಗುಣಮಟ್ಟದ ಕೌಶಲ್ಯಾಧಾರಿತ ಉತ್ತಮ ಜೀವನಮೌಲ್ಯ ಬಿತ್ತುವ ಸರಳ ಆಸನಗಳ ಅಭ್ಯಾಸಗಳು ಮನಸ್ಸಿನ ಸದೃಢತೆಯನ್ನು ಗಟ್ಟಿಗೊಳಿಸುತ್ತವೆ. ಈ ಸಂದರ್ಭದಲ್ಲಿ ಪಡೆದ ಯೋಗ ತರಬೇತಿಯನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆಯಿತ್ತರು.

ಸಹಾಯಕ ಜೈಲರ್ ರಾಮಣ್ಣ ಹೇರ್‍ಕಲ್, ಶಿಕ್ಷಕ ಶ್ರೀರಾಮರೆಡ್ಡಿ ಹಾಗೂ ಮತ್ತಿತರ ಕಾರಾಗೃಹದ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ರಾಜ್ಯಾತ್ಸವ ಪ್ರಶಸ್ತಿ ಪುರಸ್ಕøತ ಹಾಗೂ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಮುರುಳಿ ನಿರ್ದೇಶನದಲ್ಲಿ ನೂರಕ್ಕೂ ಹೆಚ್ಚು ಖೈದಿ ಬಾಂಧವರು ಯೋಗಾಸನದ ಮಹತ್ವವನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರು.

ಫೋಟೋ ಮತ್ತು ವರದಿ ಕೃಪೆ
ಕೆಪಿಎಂ ಗಣೇಶಯ್ಯ, ಚಿತ್ರದುರ್ಗ
ಮೊ: 9448664878

Share This Article
Leave a Comment

Leave a Reply

Your email address will not be published. Required fields are marked *