ಬೆಂಗಳೂರು; ಎತ್ತಿನಹೊಳೆ ಕಾಮಗಾರಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಹಾಗೂ ನೀರಾವರಿ ಇಲಾಖೆಯ ಜೊತೆಗೆ ಸಭೆ ನಡೆದಿದೆ. ಈ ಸಭೆಯ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾರ್ಚ್ 18ರಂದು ದೆಹಲಿಗೆ ತೆರಳುತ್ತಿದ್ದೇನೆ. ಅರಣ್ಯ ಇಲಾಖೆಗೆ ಅನುಮತಿ ಕೇಳಲು ಹೋಗುತ್ತೇನೆ ಎಂದಿದ್ದಾರೆ.

ಕೇಂದ್ರ ಸರ್ಕಾರದ ಅನುಮತಿ ದೊರೆಯದ ಕಾರಣ ಎತ್ತಿನಹೊಳೆ ಯೋಜನೆಯನ್ನು ಮುಂದುವತೆಸಲು ಕಷ್ಟ. 508 ಎಕರೆ 1 ಗುಂಟೆ ಅರಣ್ಯ ಭೂಮಿಯನ್ನ ಬಳಸಿಕೊಳ್ಳಲು ಭೇಟಿ ಮಾಡಿ ಚರ್ಚೆ ನಡೆಸಲಾಗುವುದು. ಎತ್ತಿನಹೊಳೆ ಯೋಜನೆಗೆ ಬಳಸಲಾಗುವ ಭೂಮಿಗೆ ಬದಲಿಯಾಗಿ ಬೇರೆ ಕಡೆ ಜಮೀನನ್ನ ನೀಡಲಾಗುವುದು. ಈ ಸಂಬಂಧ ಅರಣ್ಯ ಇಲಾಖೆ ಸ್ಪಷ್ಟನೆ ಕೇಳಿದ ಕಾರಣಕ್ಕೆ ಅರಣ್ಯ ಸಚಿವರಾದ ಈಶ್ಚರ್ ಖಂಡ್ರೆ ಹಾಗೂ ನಾನು ಅಧಿಕಾರಿಗಳ ಸಭೆ ನಡೆಸಿದೆವು. ತುಮಕೂರು ಹಾಗೂ ಹಾಸನ ಜಿಲ್ಲಾಧಿಕಾರಿಗಳು ಎಲ್ಲೆಲ್ಲಿ ಸರ್ಕಾರ ಜಮೀನುಗಳನ್ನ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಬಹುದೋ ಆ ಕೆಲಸವನ್ನ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುನಾರ್ ತಿಳಿಸಿದ್ದಾರೆ.

ಎಲ್ಲಾ ಅಡೆತಡೆಗಳನ್ನು ತಡೆದು ತುಮಕೂರು ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರು ತರಲಾಗುವುದು. ಕೆಲಸನಿಂತು ಹೋಗಿರುವ ಕಾರಣ ಸಭೆ ನಡೆಸಲಾಗಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಒಂದು ಲಕ್ಷ ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಾಗಿದೆ. ನಾಲ್ಕು ಲಕ್ಷ ಕೋಟಿಗೂ ಮೀರಿದ ಬಜೆಟ್ ನಲ್ಲಿ ನೀರಾವರಿ, ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದಿದ್ದಾರೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲುಗೆ ಭೇಟಿ ನೀಡಿದ ಬಳಿಕ ತೀರ್ಮಾನವಾಗಲಿದೆ.

