ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆಯಲ್ಲಿ ಜೆಡಿಎಸ್ ನಾಯಕರ ಅಪಸ್ವರವೇ ಹೆಚ್ಚು ಕೇಳಿ ಬರುತ್ತಿದೆ. ಅದರಲ್ಲೂ ರಾಜ್ಯಾಧ್ಯಕ್ಷರಾಗಿರುವ ಸಿ ಎಂ ಇಬ್ರಾಹಿಂ ಹಾಗೂ ಜೆಡಿಎಸ್ ವರಿಷ್ಠರ ನಡುವೆಯೇ ನೇರಾ ಹಣಹಣಿ ಏರ್ಪಟ್ಟಿದೆ. ಒರಿಜಿನಲ್ ಜೆಡಿಎಸ್ ನಮ್ಮದೆ ಅಂತ ಇಬ್ತಾಹಿಂ ಹೇಳಿಕೊಂಡು ಓಡಾಡುತ್ತಿದ್ದರೆ, ಜೆಡಿಎಸ್ ವರಿಷ್ಠರು ತಿರುಗೇಟು ನೀಡಿದ್ದಾರೆ.
ಇತ್ತಿಚೆಗಷ್ಟೇ ಸಿ ಎಂ ಇಬ್ರಾಹಿಂ ಹೆಸರು ಮತ್ತು ಸಹಿ ಇರುವ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಾ ಇತ್ತು. ಆ ಪತ್ರದಲ್ಲಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಉಚ್ಛಾಟನೆ ಮಾಡಲಾಗಿತ್ತು. ಆದರೆ ಅ್ಉ ಸತ್ಯಕ್ಕೆ ದೂರವಾದ ಪತ್ರ ಎಂದೇ ಇಬ್ರಾಹಿಂ ಸ್ಪಷ್ಟನೆ ನೀಡಿದ್ದರು.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಪತ್ರ ಹರಿದಾಡುತ್ತಿದೆ. ಅದುವೆ, ಮಾಜಿ ಪ್ರಧಾನಿ ದೇವೇಗೌಡ ಅವರ ಸಹಿ ಇರುವ ಪತ್ರ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ಅವರನ್ನು ವಜಾಗೊಳಿಸಿರುವಂತ ಪತ್ರವದು. ಹೆಚ್ ಡಿ ದೇವೇಗೌಎ ಅವರು ಈ ಪತ್ರಿಕಾ ಪ್ರಕಟನೆ ಹೊರಡಿಸಿರುವಂತ ಪತ್ರ ವೈರಲ್ ಆಗಿದೆ.
ಈ ಪತ್ರ ನೋಡಿದಾಗ ಮೇಲ್ನೋಟಕ್ಕೆ ಇದೊಂದು ನಕಲಿ ಪತ್ರ ಎಂಬುದು ಗೊತ್ತಾಗಿದೆ. ಕುಮಾರಸ್ವಾಮಿ ಹಾಗೂ ನಿಖಿಲ್ ಅವರನ್ನು ಉಚ್ಛಾಟನೆ ಮಾಡಿದ್ದ ಪತ್ರ ವೈರಲ್ ಆದ ಬೆನ್ನಲ್ಲೇ ಈ ಪತ್ರ ಕೂಡ ವೈರಲ್ ಆಗುತ್ತಾ ಇದೆ. ಆದರೆ ಯಾರು ಈ ರೀತಿಯ ಲೆಟರ್ ಮಾಡಿದರು ಎಂಬುದು ಮಾತ್ರ ತಿಳಿದಿಲ್ಲ.