ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದಾ ಯಡಿಯೂರಪ್ಪ ಕುಟುಂಬದವರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಅದರಲ್ಲೂ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿಯಂತೂ ಸದಾ ವಿರೋಧ ಮಾಡುತ್ತಲೇ ಇದ್ರು. ಶಿಸ್ತು ಸಮಿತಿ ನೋಟೀಸ್ ಕೊಟ್ಟರು ಅದಕ್ಕೂ ಡೋಂಟ್ ಕೇರ್ ಎನ್ನುತ್ತಿರುವ ಯತ್ನಾಳ್ ಮತ್ತೆ ಮತ್ತೆ ಅದನ್ನೇ ಶುರು ಮಾಡಿದ್ದಾರೆ. ಇದೀಗ ಬಿ.ಎಸ್.ಯಡಿಯೂರಪ್ಪ ಅವರನ್ನ ನೀವೂ ಲಿಂಗಾಯತರೇ ಅಲ್ಲ ಅಂತ ಹೇಳುತ್ತಿದ್ದಾರೆ.

ಹೌದು ಯಡಿಯೂರಪ್ಪ ಅವರ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಯಡಿಯೂರಪ್ಪ ಅವರು ಲಿಂಗಾಯತರೇ ಅಲ್ಲ, ಬಂಗಾರ ಶೆಟ್ಟಿ ಸಮುದಾಯದವರು ಅಂತ ಶಾಕಿಂಗ್ ನ್ಯೂಸ್ ಹೇಳಿದ್ದಾರೆ. ಅಷ್ಟೇ ಅಲ್ಲ ಸಾಕ್ಷಿ ಸಿಗುವ ಜಾಗವನ್ನು ಹೇಳಿದ್ದಾರೆ. ಬೇಕಾದರೆ ಯಡಿಯೂರಪ್ಪ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆ ಹೋಗಿ ಕೇಳಿದರೆ ನಿಜ ಏನು ಎಂಬುದು ಗೊತ್ತಾಗುತ್ತದೆ. ಯಡಿಯೂರಪ್ಪ ಅವರು ಲಿಂಗಾಯತರು ಎಂದು ಹೇಳಿಕೊಂಡು ಪಕ್ಷವನ್ನ ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಇದೇ ರೀತಿ ಕಾಂಗ್ರೆಸ್ ನಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬ್ಲಾಕ್ಮೇಲ್ ಮಾಡ್ತಾ ಇದಾರೆ. ವಿರೇಂದ್ರ ಪಾಟೀಲ್ ಹಾಗೂ ಜೆ.ಹೆಚ್ ಪಾಟೀಲ್ ನಂತರದಲ್ಲಿ ಈ ಸಮುದಾಯದಲ್ಲಿ ಬೇರೆ ಯಾವ ನಾಯಕರು ಇಲ್ಲ.

ಆಗ ಅನಿವಾರ್ಯವಾಗಿ ಯಡಿಯೂರಪ್ಪ ಅವರನ್ನ ಜನ ಒಪ್ಪಿಕೊಂಡರು. ಆದರೂ ಯಡಿಯೂರಪ್ಪ ಅವರು ಪಂಚಮಸಾಲಿ ಹಾಗೂ ವೀರಶೈವ ಸಮುದಾಯಕ್ಕೆ ಮೀಸಲಾತಿ ನೀಡದೆ ಮೋಸ ಮಾಡಿದ್ದಾರೆ. ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ತಪ್ಪಿಸಿದ್ದೇ ಈ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ. ಹಾಗಾಗಿ ಅವರ ನಾಯಕತ್ವವನ್ನು ವೀರಶೈವ ಲಿಂಗಾಯತ ಸಮುದಾಯ ಎಂದಿಗೂ ಒಪ್ಪುವುದಿಲ್ಲ ಎಂದಿದ್ದಾರೆ.

