ಶಿವಮೊಗ್ಗ: ಮಾಜಿ ಸಚಿವ ರೇಣುಕಾಚಾರ್ಯ ಆಗಾಗ ಯಡಿಯೂರಪ್ಪ ಅವರ ಪರ ಯಾವಾಗಲೂ ಬ್ಯಾಟ್ ಬೀಡುತ್ತಾ ಇರುತ್ತಾರೆ. ಇದೀಗ ಮತ್ತೊಮ್ಮೆ ಯಡಿಯೂರಪ್ಪ ಅವರ ವಿಚಾರವಾಗಿ ಮಾತನಾಡಿದ್ದಾರೆ. ಅವರ ಕಣ್ಣೀರೆ ಇಂದು ಬಿಜೆಪಿಗೆ ಸೋಲಾಗಿದೆ ಎಂದಿದ್ದಾರೆ. ಜೊತೆಗೆ ಬಿಜೆಪಿಗೆ ನಿಮ್ಮ ಕೊಡುಗೆ ಏನು ಎಂಬ ಪ್ರಶ್ನೆಯನ್ನು ಮಾಡಿದ್ದಾರೆ. ಅದನ್ನು ಪರೋಕ್ಷವಾಗಿ ಬಿ ಎಲ್ ಸಂತೊಷ್ ಅವರಿಗೆ ಕೇಳಿದ್ದಾರೆ ಎನ್ನಲಾಗಿದೆ.

ಬಿಎಸ್ ಯಡಿಯೂರಪ್ಪ ಅವರು ಬಸ್, ಕಾರು, ಸೈಕಲ್ ಮೂಲಕ ಊರುರು ಸುತ್ತಿ ಪಕ್ಷ ಸಂಘಟನೆ ಮಾಡಿದ್ದಾರೆ. 2005-06 ರಲ್ಲಿ ಬಿಜೆಪಿ ಕಚೇರಿಗೆ ಬಂದು ಪಕ್ಷ ನಿತಂತ್ರಿಸುತ್ತಿದ್ದೀರಿ..? ಬಿಜೆಪಿಗೆ ನಿಮ್ಮ ಕೊಡುಗೆ ಏನು..? ನೀವೇನು ಪಕ್ಷ ಕಟ್ಟಿ ಬೆಳೆಸಿದ್ದೀರಾ..? ಜೈಲಿಗೆ ಎಷ್ಟು ಬಾರಿ ಹೋಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ರಾಜಕೀಯವಾಗಿ ಯಡಿಯೂರಪ್ಪ ಅವರನ್ನು ಮುಗಿಸಿದರಲ್ಲ. ಈಗ ನಾಯಕತ್ವ ಎಲ್ಲಿದೆ. ಆತ್ಮವಲೋಕನ ಮಾಡಿಕೊಳ್ಳಿ. ರಟಜಕಾರಣದಲ್ಲಿ ಯಾವತ್ತು ಸರ್ವಾಧಿಕಾರಿ ಧೋರಣೆ ಮಾಡಬೇಡಿ ಎಂದಿದ್ದಾರೆ.

ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನ ನಿರ್ಲಕ್ಷ್ಯ ಮಾಡಿದರೆಬಿಜೆಪಿ ಇನ್ನಷ್ಟು ನೆಲಕಚ್ಚಲಿದೆ. ನೀವೂ ಒಂದು ಗ್ರಾಮವನ್ನು ಗೆಲ್ಲುವುದಕ್ಕೆ ಆಗಲ್ಲ. ಕರ್ನಾಟಕ ಕೋರ್‌ಕಮಿಟಿಯಲ್ಲಿ ನಿರ್ಧಾರ ಆಗುವುದೇ ಒಂದು ದೆಹಲಿಗೆ ಹೋದಾಗ ನಿರ್ಧಾರ ಆಗುವುದೇ ಇನ್ನೊಂದು. ದೆಹಲಿಗೆ ಮಾಜಿ ಸಿಎಂ ಕುಮಾರಸ್ವಾಮಿ ಹೋದಾಗ ಬಹಳ ಸುಲಭವಾಗಿ ಭೇಟಿಗೆ ಅವಕಾಶ ಸಿಗುತ್ತದೆ. ಆದರೆ ನಮ್ಮ ನಾಯಕರಾದ ಯಡಿಯೂರಪ್ಪ ಅವರು ಹೋದಾಗ ಯಾವ ರೀತಿ ನಡೆಸಿಕೊಂಡರು ಎಂಬುದು ಗೊತ್ತಿದೆ. ಬಿಜೆಪಿ ಪಕ್ಷಕ್ಕಾಗಿ ಯಡಿಯೂರಪ್ಪ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಹೋರಾಟದ ಹಾದಿಯಿಂದ ಬಂದವರು ಅವರು, ಒಬ್ಬ ಶಿಲ್ಪಿಯಿದ್ದಂತೆ ಎಂದಿದ್ದಾರೆ.

