ಬೆಂಗಳೂರು: ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆದೇಶ ನೀಡಿದ್ದೆ ತಡ, ಬಂಜಾರ ಸಮುದಾಯದವರು ರೊಚ್ಚಿಗೆದ್ದಿದ್ದಾರೆ. ಶಿಕಾರಿಪುರದಲ್ಲೆಲ್ಲಾ ಪ್ರತಿಭಟನೆಯ ಕಾವು ಜೋರಾಗಿದೆ. ಇಂದು ಕೂಡ ಬಂಜಾರ ಸಮುದಾಯದವರ ಆಕ್ರೋಶ ಮುಂದುವರೆದಿದೆ.
ನಿನ್ನೆಯೆಲ್ಲಾ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬಂಜಾರ ಸಮುದಾಯದವರಿಗೆ ಬಯ ಪಡುವ ಅಗತ್ಯವಿಲ್ಲ. ನೀವೂ ಎಸ್ಸಿ ಮೀಸಲಾತಿ ಅಡಿಯಲ್ಲೆ ಇರುತ್ತೀರಾ ಎಂದು ಹೇಳಿದ್ದರು. ಆದರೂ ಬಂಜಾರ ಸಮುದಾಯದವರ ಪ್ರತಿಭಟನೆ ಮುಂದುವರೆದಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪ ಅವರು ಸರ್ಕಾರದ ಪ್ರತಿನಿಧಿಯಾಗಿ ಭಾಗಿಯಾಗಿಲ್ಲ. ಮೀಸಲಾತಿ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಅವರು ದೊಡ್ಡ ಗೊಂದಲ ಸೃಷ್ಟಿಸಿದ್ದಾರೆ ಎಂದಿದ್ದಾರೆ.
ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ಹೊಡೆಯುತ್ತಾರೆ ಅಂದ್ರೆ ಅದಕ್ಕೆ ಕಾರಣವೇನು..? ಇದು ಬಿಜೆಪಿಯ ಆಂತರಿಕ ಕುತಂತ್ರ. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮುಗಿಸಬೇಕು, ರಾಜಕೀಯದಲ್ಲಿ ಮುಗಿಸಬೇಕು ಅಂತ ಹೀಗೆ ಮಾಡಿದ್ದಾರೆ. ಅದಾಗಲೇ ಅವರನ್ನ ಪಕ್ಷದಲ್ಲಿ ಸೈಡ್ ಲೈನ್ ಮಾಡಿದ್ದರು. ಆದ್ರೆ ಅಮಿತ್ ಶಾ ಬಂದು ಬೆನ್ನು ತಟ್ಟಿ, ಮತ್ತೆ ಪ್ರೋತ್ಸಾಹಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮನೆ ಮೇಲೆ ಕಲ್ಲು ಹೊಡೆದಿದ್ದರೆ ಅದು ಒಂದು ಲೆಕ್ಕಚಾರ. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಅಂದ್ರೆ ಒಂದು ಬಿಜೆಪಿ ಒಳಗಿನ ಫೈಟ್, ಆಂತರಿಕ ಅಸಮಾಧಾನವೇ ಕಾರಣ ಎಂದಿದ್ದಾರೆ.