ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಒಂದನ್ನು ಬರೆದಿದ್ದರು. ಈ ಪತ್ರದಲ್ಲಿ ತನ್ವೀರ್ ಹಶ್ಮಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದನ್ನು ಪ್ರಶ್ನಿಸಿ, ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಈ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಯತ್ನಾಳ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ತನ್ವೀರ್ ಹಶ್ಮಿ ಜೊತೆಗೆ ನನಗೆ ಬಹಳ ವರ್ಷಗಳಿಂದಲೂ ಸಂಬಂಧವಿದೆ. ಆಗೆಲ್ಲಾ ಯತ್ನಾಳ್ ಯಾಕೆ ಸುಮ್ಮನೆ ಇದ್ದರು. ಈ ಯತ್ನಾಳ್ ಗೆ ದ್ವೇಷದ ರಾಜಕಾರಣ ಮಾಡುವುದೇ ಕೆಲಸ. ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಮಾಡುವ ರಾಜಕಾರಣ ಮಾಡುತ್ತಾರೆ. ಚುನಾವಣೆ ಗೆಲ್ಲಲು ಈ ರೀತಿ ಮಾಡಬಾರದು. ಯತ್ನಾಳ್ ಒಬ್ಬ ಮಹಾನ್ ಸುಳ್ಳುಗಾರ. ರಾಜ್ಯಾಧ್ಯಕ್ಷ, ವಿಪಕ್ಷ ಸ್ಥಾನ ಸಿಗದೆ ಯತ್ನಾಳ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈಗ ಹಶ್ಮಿಯವರು ಹೇಳಿದ್ದಾರೆ. ಅವರ ಮೇಲಿನ ಆರೋಪವನ್ನು ಸಾಬೀತು ಮಾಡಲಿ ಎಂದಿದ್ದಾರೆ. ಕೇಂದ್ರದಲ್ಲಿ ಒಂದೇ ಸರ್ಕಾರವಿದೆಯಲ್ಲ..? ಸಾಬೀತು ಮಾಡಲಿ ಎಂದಿದ್ದಾರೆ.
ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆಯಲ್ಲ, ಮತ್ತೆ ಏನು ಮಾಡುತ್ತಾ ಇದ್ದರು ಇಷ್ಟು ವರ್ಷ..? ಬರೀ ಆರೋಪ ಮಾಡುವುದಲ್ಲ. ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನ ಸಿಗದೆ ಇರುವ ಕಾರಣಕ್ಕೆ ಯತ್ನಾಳ್ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.