ಬಾಗಲಕೋಟೆ: ಕಾಂಗ್ರೆಸ್ ನಾಯಕರು ಅಂದುಕೊಂಡಂತೆ ಜನವರಿ 9ರಿಂದ ಮೇಕೆದಾಟುನಿಂದ ಪಾದಯಾತ್ರೆ ಶುರು ಮಾಡಿದ್ದಾರೆ. ಆದ್ರೆ ಮೊದಲ ದಿನವೇ ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಾಕಷ್ಟು ಸುಸ್ತಾಗಿದ್ದರು. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಕೆರೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಹೆಚ್ಚಾಗುತ್ತಿರುವ ಸಮಯದಲ್ಲಿ ಪಾದಯಾತ್ರೆ ಮಾಡದೆ ಇರೋದು ತುಂಬಾ ಒಳ್ಳೆಯದು. ನಾವೂ ಕೂಡ ಅದನ್ನೇ ಹೇಳಿದ್ದೀವಿ. ಈ ಸಮಯದಲ್ಲಿ ರಾಜಕೀಯ ಬದಿಗೊತ್ತಿ ಯೋಚಿಸಬೇಕು.
ನಾವೂ ಈ ಹಿಂದೆ ಭೀಮೆಯಿಂದ ಪಾದಯಾತ್ರೆ ಮಾಡಿದ್ವಿ. ಆಗ ನಾವೆಲ್ಲಾ ಹೊಲದಲ್ಲಿ ಮಲಗುತ್ತಿದ್ದೆವು. ಜನರು ಕೊಟ್ಟ ಆಹಾರ ತಿನ್ನುತ್ತಿದ್ದೆವು. ಆದ್ರೆ ಈ ಪಾದಯಾತ್ರೆಯಲ್ಲಿ ದಾರಿಯುದ್ಧಕ್ಕೂ ಕಬಾಬ್ ಸೆಂಟರ್ ಗಳೇ ಇದಾವೆ. ಅಷ್ಟೇ ಅಲ್ಲ ರಾತ್ರಿಯಾದ ಮೇಲೆ ತೂರಾಡುತ್ತಾ ನಡೆಯೋದು. ರಸ್ತೆಯ ಆ ದಂಡೆಯಿಂದ ಈ ದಂಡೆಗೆ ಹೋಗೋದು ಪಾದಯಾತ್ರೆಯಲ್ಲ ಎಂದು ವ್ಯಂಗ್ಯವಾಡಿದ್ದಾರೆ.