ಬೆಂಗಳೂರು: ಇಂದು ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಫೈನಲ್ ಆಗಲಿದೆ. ಕೇಂದ್ರದಿಂದ ವೀಕ್ಷಕರು ಬಂದಿದ್ದಾರೆ. ವಿಪಕ್ಷ ನಾಯಕರ ಆಕಾಂಕ್ಷೆಯ ರೇಸ್ ನಲ್ಲಿ ಬಿಜೆಪಿಯ ಹಲವರಿದ್ದಾರೆ. ಅದರಲ್ಲಿ ಶಾಸಕ ಬಸನಗೌಡ ಯತ್ನಾಳ್ ಕೂಡ ಒಬ್ಬರು. ಇಂದು ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಯತ್ನಾಳ್ ಮನೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪ್ರಕಾಶ್ ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಶಾಸಕ ಯತ್ನಾಳ್ ಕೇಂದ್ರದಿಂದ ಬಂದಿದ್ದಂತ ವೀಕ್ಷಕರಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ. ಇಂದು ವಿಕ್ಷನ ನಾಯಕನ ಆಯ್ಕೆ ಮಾಡುವ ಹಿನ್ನೆಲೆ ವೀಕ್ಷಕರು ಕೂಡ ಸೂಕ್ತವಾದವರನ್ನು ಆಯ್ಕೆ ಮಾಡಲಿದ್ದಾರೆ.
ಈ ಸಂಬಂಧ ಮಾತನಾಡಿರುವ ಶಾಸಕ ಯತ್ನಾಳ್, ಪ್ರಧಾನಿ ಮೋದಿ, ನಡ್ಡಾ ಮಾತುಗಳನ್ನು ತಪ್ಪದೆ ಪಾಲಿಸುತ್ತೇನೆ. ನಾನು ಯಾವುದೇ ಕಾರಣಕ್ಕೂ ಥರ್ಡ್ ಕ್ಲಾಸ್ ರಾಜಕಾರಣ ಮಾಡಲ್ಲ. ಕೆಲಸ ಇಲ್ಲದೆ ಇದ್ದಾಗ ಸಂಪರ್ಕ ಮಾಡುತ್ತಾರೆ. ಮುಂದೆ ತುಳಿಯಬೇಕಾದಾಗ ತುಳಿಯುತ್ತಾರೆ. ಕೇಂದ್ರದ ನಾಯಕರಿಗೆ ಎಲ್ಲಾ ಮಾಹಿತಿಯನ್ನು ತಿಳಿಸಿದ್ದೇನೆ.
ಕೆಲವೊಂದಿಷ್ಟು ಮಂದಿ ಮಾತನಾಡುವುದಕ್ಕೆ ಹೆದರುತ್ತಾರೆ. ಆದರೆ ನಾನು ಎಲ್ಲವನ್ನು ಹೇಳುತ್ತೇನೆ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಡಬೇಕು ಯಾಕೆ ಕೊಡುವುದಿಲ್ಲ. ಬಹಳಷ್ಟು ಶಾಸಕರು ನನ್ನ ಜೊತೆಗೆ ಇದ್ದಾರೆ. ಲೋಕಸಭಾ ಚುನಾವಣೆಗೆ ಪ್ರಯತ್ನ ಮಾಡುತ್ತಿದ್ದಾರೆ. 2024ಕ್ಕೆ ಪ್ರಧಾನಿ ಮೋದಿ ಅವರ ಅವಶ್ಯಕತೆ ಇದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬರದೆ ಇದ್ದಲ್ಲಿ ಭಾರತ ಉಳಿಯುತ್ತಿರಲಿಲ್ಲ. ನಿನ್ನೆ ಒಬ್ಬ ಏಜೆಂಟ್ ಬಂದಿದ್ದ, ಅವನಿಗೆ ಹೇಳಿದ್ದೀನಿ ನನ್ನನ್ನು ಖರೀದಿಸಲು ಸಾಧ್ಯವಿಲ್ಲ ಎಂದು. ಇವರ ಬಣ್ಣ ಬಯಲು ಮಾಡಿದ್ದೇನೆ ಯತ್ನಾಳ್ ಯಾರ ಮುಲಾಜಿನಲ್ಲೂ ಇಲ್ಲ. ನಿನ್ನಂಥವರನ್ನು 10 ಮಂದಿ ಖರೀದಿಸುತ್ತೇನೆ ಎಂದು ಹೇಳಿ ಕಳುಹಿಸಿದ್ದೀನಿ ಎಂದಿದ್ದಾರೆ.