ವಿಜಯಪುರ : ಮೂರನೇ ಪೀಠದ ಉದ್ದೇಶ ಏನು ? ಪೀಠಗಳನ್ನು ಯಾಕೆ ಮಾಡ್ತೀರಾ..? ಯಾವುದಾದರೊಂದು ಉದ್ದೇಶ ಬೇಕಲ್ವಾ. ನೀವೇನೂ ಸಮಾಜದ ಉದ್ಧಾರಕ್ಕೆ ಮಾಡ್ತಿರೋ. ಹರಿಹರ ಸ್ವಾಮೀಜಿ ಏನೋ ಹೇಳ್ತಾನೆ. ಲಗ್ನ, ಮುಹೂರ್ತ, ಸತ್ತಲ್ಲಿ ಹೋಗುವುದಕ್ಕೆ ನಮಗೆ ಟೈಮ್ ಸಿಗುವುದಿಲ್ಲ. ಅದಕ್ಕೆ ಅಂತ ಅಲ್ಲಲ್ಲಿ ಒಂದು ಪೀಠ ಆಗಿ ಎಲ್ಲದಕ್ಕೂ ಹೋಗಬೇಕು ಅನ್ನೋದು ಶಾಸಕ ಯತ್ನಾಳ್ ಅವರ ಪ್ರಶ್ನೆ.

ತುಮಕೂರು ಸಿದ್ದಗಂಗಾ ಮಠ, ಸುತ್ತೂರು, ಧಾರವಾಡದ ಮುರುಘಾ ಮಠ, ಮೂರು ಸಾವಿರ ಮಠ, ಚನ್ನಬಸಪ್ಪ ಅಪ್ಪೋರು, ಸಿದ್ದಾರೂಢ ಮಠ ಅಲ್ಲಲ್ಲೆ ಸಾಕಷ್ಟು ಮಠಗಳಿದ್ದಾವೆ. ಭಕ್ತರು ಅಲ್ಲೆಲ್ಲಾ ಹೋಗಿ ಬರುತ್ತಾರೆ. ನಮ್ಮ ಪಂಚಮಸಾಲಿ ಸಮುದಾಯವನ್ನು ನಿರಾಣಿಯ ಅಡಿಯಲ್ಲಿ ಅವನ ಪರವಾಗಿ ದಿಲ್ಲಿಗೆ ಲಾಭ ಮಾಡಲು ಮಾಡಿದಂತದ್ದು ಅಷ್ಟೆ.

ದೆಹಲಿಗೆ ಅವರು ದಿನ ಹೋಗ್ತಾರೆ. ಅವರ ಕೆಲಸ ಏನು ಅಂದ್ರೆ ನಿರಾಣಿಗೆ ಮಂತ್ರಿ ತೆಗಿಬೇಡ್ರಿ, ನಿರಾಣಿ ಅವರನ್ನು ಮುಖ್ಯಮಂತ್ರಿ ಮಾಡ್ರಿ, ಅಲ್ಲಿ ಬೊಮ್ಮಾಯಿ ಬಳಿ ನೀವೇನಾದರೂ ನಮ್ಮ ಮಠಕ್ಕೆ ರೊಕ್ಕ ಕೊಡದೆ ಹೋದರೆ, ಅಂತ ಹೇಳಿ ಅವರಿಗೆ ಬ್ಲಾಕ್ ಮೇಲ್ ಮಾಡ್ತಾರೆ.
ಹಾನಗಲ್ ನಲ್ಲಿ 50 ಸಾವಿರ ಪಂಚಮಸಾಲಿಯವರಿದ್ದಾರೆ. ಎಲ್ಲರ ಬಳಿಯಿಂದ ವೋಟ್ ಹಾಕಿಸ್ತೀವಿ ಅಂತ ಹೇಳಿ, ಅವರ ಕೈಗೆ ರೊಕ್ಕ ಕೊಟ್ಟು ಬಂದಿದ್ದಾರೆ. ಬೊಮ್ಮಾಯಿ ಅವರಿಗೂ ಹೇಳಿದ್ದೀನಿ ಆ ಸ್ವಾಮಿ ನಂಬಿದರೆ ಏನು ಆಗಲ್ಲ ಅಂತೇಳಿದ್ದೀನಿ. ನೀವು ಆ ಸ್ವಾಮೀಜಿ ಹಿಂದೆ ಬೆನ್ನು ಹತ್ತಬೇಡಿರಿ ಬೊಮ್ಮಾಯಿ ಸಾಹೇಬ್ರೆ. ಅವನ ಹಿಂದೆ ವೋಟು ಇಲ್ಲ ಏನು ಇಲ್ಲ ಅಂತಾನೆ ಹೇಳಿದ್ದೀನಿ.
ಯಡಿಯೂರಪ್ಪಗೆ ಹಿಂಗೆ ಬ್ಲಾಕ್ ಮೇಲ್ ಮಾಡಿ 10 ಕೋಟಿ ತಗೊಂಡವನೆ. ಈಗ ಅದೇನೋ ತುಂಗಾರತಿ ಅಂತೇಳಿ ಅದಕ್ಕೊಂದು 35 ಕೋಟಿ ರೂಪಾಯಿ. ನಾನು ಕೇಳಿದೆ. ಆ 35 ಕೋಟಿ ಯಾಕೆ ಕೊಟ್ಟಿರಿ ಅಂತ. ಇಲ್ಲ ನಮ್ಮ ಸರ್ಕಾರದಿಂದ ಮಾಡ್ತಿದ್ದೀವಿ ಅಂದ್ರು. ಕಥೆ ಹೇಳಬೇಡಿ ಅವನ ಕೈಗೆ ಕೊಟ್ಟಿದ್ದೀರಿ ಅಂತಾನೆ ಕೇಳಿದ್ದೀನಿ ಎಂದು ವಚನಾನಂದ ಸ್ವಾಮೀಜಿ ವಿರುದ್ಧ ಗರಂ ಆಗಿದ್ದಾರೆ.

