ಮಂಡ್ಯ: ಸಿಎಂ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರ ಮಾತಿಗೆ ಪಕ್ಷದಲ್ಲಿಯೇ ಒಂದಷ್ಟು ವಿರೋಧಗಳು ವ್ಯಕ್ತವಾಗ್ತಾ ಇದೆ. ಅದರಲ್ಲೂ ನಮ್ಮ ತಂದೆಯೇ ಐದು ವರ್ಷ ಸಿಎಂ ಎಂಬ ಹೇಳಿಕೆಗೆ ಡಿಕೆಶಿ ಬೆಂಬಲಿಗರು ಗರಂ ಆಗಿದ್ದಾರೆ. ಇದೀಗ ಶಾಸಕ ಗಣಿಗ ರವಿಕುಮಾರ್ ಅವರು ಯತೀಂದ್ರ ಅವರೇ ನಮ್ಮ ಹೈಕಮಾಂಡ್ ಅಂತ ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಈ ಬಗ್ಗೆ ಮಾತನ್ನಾಡಿದ್ದು, ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್. ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಅದನ್ನೇ ನಾನು ಉಚ್ಛರಿಸುತ್ತೇನೆ. ನಮಗೆ ಹೈಕಮಾಂಡ್ ನೋಟೀಸ್ ಕೊಡಬಹುದು. ಆದರೆ ಹೈಕಮಾಂಡ್ ಗೆ ನಾವೂ ನೋಟೀಸ್ ಕೊಡಲು ಸಾಧ್ಯವಿಲ್ಲ. ಅವರು ನಮ್ಮ ಹೈಕಮಾಂಡ್ ಅನ್ನೋದನ್ನ 100% ಪರ್ಸೆಂಟ್ ಒಪ್ಪಿಕೊಳ್ಳುತ್ತೇವೆ. ಯಾರೂ ಸ್ಟೇಟ್ಮೆಂಟ್ ಕೊಡಬೇಡಿ ಅಂತ ನಾಲ್ಕು ಬಾರಿ ಹೇಳಿದರು. ಆದರೂ ಸ್ಟೇಟ್ಮೆಂಟ್ ಕೊಡುತ್ತಿದ್ದಾರೆ ಅಂದ್ರೆ ಅವರು ಸುಪ್ರೀಂ. ಖರ್ಗೆಯವರಿಗಿಂತ ಜಾಸ್ತಿ. ಡಿಕೆ ಅವರಿಗಿಂತ ಕಡಿಮೆ ಅಂತ ಹೇಳುವುದಕ್ಕೆ ಆಗಲ್ಲ.
ಮಾತನ್ನಾಡಬೇಡಿ ಎಂದರೂ ಮಾತನ್ನಾಡುತ್ತಿದ್ದಾರೆ ಅಂದ್ರೆ ಅವರು ಪವರ್ ಫುಲ್ ಮ್ಯಾನ್. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೇ ಬೇಕು. ಅವರು ಸಿಎಂ ಆಗುವುದನ್ನ ಯಾರೂ ಕೂಡ ತಪ್ಪಿಸೋದಕ್ಕೆ ಆಗಲ್ಲ. ಡಿಕೆಶಿ ರಾಜಕಾರಣವನ್ನು ಅರೆದು ಕುಡಿದಿದ್ದಾರೆ. ಯಾವಾಗ, ಯಾವ ಪ್ಲ್ಯಾನ್ ಮಾಡಿದರೆ ಗೇಮ್ ಗೆಲ್ಲಬಹುದು ಅಂತ ಅವರಿಗೆ ಗೊತ್ತಿದೆ. ರಾಜಕೀಯ ತಂತ್ರಗಾರಿಕೆ, ಚಾಣಾಕ್ಷತನ ಅವರಿಗಿದೆ. ಗೆಲ್ಲುವ ಬುದ್ಧಿವಂತಿಕೆ ಇರುವುದಕ್ಕೇನೆ ನಿಧಾನವಾಗಿ ಕಾಯಿನ್ ಮೂವ್ ಮಾಡ್ತಾ ಇದ್ದಾರೆ. ರಾಜಕಾರಣ ಅಂದಮೇಲೆ ಆಟ ಇರಲೇಬೇಕು ಅಲ್ವಾ ಎಂದು ಡಿಕೆಶಿಯನ್ನ ಹೊಗಳಿದ್ದಾರೆ.


