ಡಿಕೆಶಿ ಡಿನ್ನರ್ ಮೀಟಿಂಗ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಕೌಂಟರ್..!

1 Min Read

ಬೆಂಗಳೂರು: ಸಿಎಂ ಕುರ್ಚಿ ಕದನದ ಮನಸ್ತಾಪ ಸರಿ ಮಾಡಿಕೊಳ್ಳುವುದಕ್ಕೆ ಸಿಎಂ ಹಾಗೂ ಡಿಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ ಆಗಿದೆ. ಇದೀಗ ಡಿಕೆ ಶಿವಕುಮಾರ್ ಮನೆಯಲ್ಲಿ ಡಿನ್ನರ್ ಮೀಟಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಯತೀಂದ್ರ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈಗ ನಾನು ಏನು ಹೇಳಬೇಕೋ ಅದೆಲ್ಲವನ್ನು ಹೇಳಿ ಆಗಿದೆ. ಈಗ ಬೇರೆಯವರು ಹೇಳಿಕೆಗೆ ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಕ್ಕೆ ಆಗಲ್ಲ‌. ಅವರು ಡಿನ್ನರ್ ಮೀಟಿಂಗ್ ಮಾಡಿದ್ರೆ ಅದಕ್ಕೆ ನಾನೇನು ಮಾಡಲಿ. ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಎಲ್ಲರು ಬರ್ತಾರೆ. ಶಾಸಕರು, ಸಚಿವರನ್ನು ಕರೆದು ಮೀಟಿಂಗ್ ಮಾಡ್ತಾ ಇರುತ್ತಾರೆ. ಡಿನ್ನರ್ ಕೊಡುತ್ತಾ ಇರುತ್ತಾರೆ. ಅದಕ್ಕೆ ನಾನೇನು ಮಾಡುವುದಕ್ಕೆ ಆಗುತ್ತೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರು, ಸಮಸ್ಯೆಗಳ ಬಗ್ಗೆಗಿಂತ ಸಿಎಂ ಕುರ್ಚಿ ಕದನ, ಸಿಎಂ ಬದಲಾವಣೆಯ ವಿಚಾರಗಳೇ ಜಾಸ್ತಿಯಾಗಿವೆ. ಚಳಿಗಾಲದ ಅಧಿವೇಶನ ಆರಂಭದಲ್ಲಿಯೇ ಸಿಎಂ ವಿಚಾರವನ್ನ ಯತೀಂದ್ರ ಅವರು ಪ್ರಸ್ತಾಪ ಮಾಡಿದ್ದರು. ನಮ್ಮ ತಂದೆಯೇ ಐದು ವರ್ಷ ಸಿಎಂ ಅಂದಿದ್ರು. ಇದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಎಂಸಿ ಸುಧಾಕರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಕೋಮಲ ದೊಡ್ಡಣ್ಣ ನವರ್ ಈ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಹೀಗಾಗಿ ಅವರ ಮನೆಗೆ ಕ್ಯಾಬಿನೆಟ್ ಮುಗಿಸಿ, ಊಟಕ್ಕೆ ಹೋಗಿದ್ದೆವು. ಇದರಲ್ಲಿ ಅಂಥ ವಿಶೇಷತೆ ಏನು ಇಲ್ಲ. ರಾಜಕೀಯವು ಇಲ‌್ಲ. ಇದೊಂದು ಖಾಸಗಿ ಊಟದ ವ್ಯವಸ್ಥೆ ಅಷ್ಟೇ ಎಂದು ಎಂಸಿ ಸುಧಾಕರ್ ಮಾಹಿತಿ ನೀಡಿದರು.

Share This Article