
ತಾಲ್ಲೂಕಿನ ನಿಟ್ಟೂರು ಹೋಬಳಿಯ ಕೊಂಡ್ಲಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷೆ ಸ್ಥಾನಕ್ಕೆ ಈ ಹಿಂದೆ ಇದ್ದ ಮೀನಾಕ್ಷಿ ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಶೋದಮ್ಮ 14 ಜನ ಸದಸ್ಯರ ಪೈಕಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಸರ್ವ ಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾದರು.

ನೂತನ ಉಪಾದ್ಯಕ್ಷೆ ಯಶೋದಮ್ಮ ಮಾತನಾಡಿ ಸರ್ವ ಸದಸ್ಯರ ಒಪ್ಪಿಗೆ ಪಡೆದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಚರಂಡಿ, ರಸ್ತೆ, ನೀರಾವರಿ ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇನೆ ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಸ್ವಚ್ಛತೆಯ ಕಡೆಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾ ಪಂ ಸದಸ್ಯ ಲೋಕೇಶ್ ಗೌಡ ಮಾತನಾಡಿ ಪಕ್ಷತೀತವಾಗಿ 14 ಜನ ಸದಸ್ಯರು ಒಟ್ಟಾಗಿ ಮಾದರಿ ಗ್ರಾಮ ಪಂಚಾಯಿತಿಯಾಗಿ ಮಾಡಲು ಶ್ರಮಿಸುತ್ತೇವೆ ತಾಲೂಕಿನ ಗಡಿಭಾಗದ ಪಂಚಾಯಿತಿಯಾಗಿದು ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಇದ್ದು ಸರ್ಕಾರ ಹೆಚ್ಚಿನ ಅನುದಾನ ನೀಡಿದರೆ ಸಮಸ್ಯೆ ಬಗೆಹರಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಚುನಾವಣಾ ಪ್ರಕ್ರಿಯೆಯನ್ನು ಬಿಇಒ ಸೋಮಶೇಖರ್ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಪಿಡಿಒ ರಂಗನಾಥ್, ಮುಖಂಡರುಗಳಾದ ತಾ. ಪಂ. ಮಾಜಿ ಸದಸ್ಯ ಬಸವರಾಜು, ಎಂಜಿ ವೆಂಕಟೇಶ್, ಸೀಗಯ್ಯ , ತಮ್ಮೇಗೌಡ, ಯೋಗೇಶ್, ಕಾರೆ ಕುರ್ಚಿ ಸತೀಶ್, ದಯಾನಂದ,ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
GIPHY App Key not set. Please check settings