ಹೊಸ ವರ್ಷಕ್ಕೆ ವಿಶ್ ಮಾಡಿ ಬರ್ತ್ ಡೇ ಅಪ್ಡೇಟ್ ನೀಡಿದ ಯಶ್ : ಈ ಬಾರಿ ಸಿಕ್ತಾರಾ ಅಭಿಮಾನಿಗಳಿಗೆ..?

ನೆಚ್ಚಿನ ನಟರ ಹುಟ್ಟುಹಬ್ಬ ಬಂತು ಅಂದ್ರೆ ಸಾಕು ಅಭಿಮಾನಿಗಳು ಹಬ್ಬ ಮಾಡೋದಕ್ಕೆ ಕಾದು ಕುಳಿತಿರುತ್ತಾರೆ. ಪೋಸ್ಟರ್, ಬ್ಯಾನರ್ ಹಾಕಿ, ಹಾಲು ಅಭಿಷೇಕ ಮಾಡಿ, ಹಾರ ತುರಾಯಿ ತಂದು, ಕೇಕ್ ಕಟ್ ಮಾಡಿಸಿ ಸಂಭ್ರಮಿಸುತ್ತಾರೆ. ಆದರೆ ಸ್ಟಾರ್ ಗಳು ಹೆಚ್ಚಿನ ಸಮಯ ಅಭಿಮಾನಿಗಳ ಒಟ್ಟಗೆ ಸಮಯ ಕಳೆಯುವುದಕ್ಕೆ ಆಗಲ್ಲ ಎಂಬುದೇ ಅವರ ಬೇಸರ. ಜನವರಿ ಬಂತು ಯಶ್ ಅಭಿಮಾನಿಗಳಿಗೂ ಅದೇ ನಿರಾಸೆ ಮೂಡಿದೆ.

ರಾಕಿಂಗ್ ಸ್ಟಾರ್ ಯಶ್ ಈಗ ಬರೀ ಚಂದನವನದ ನಟನಷ್ಟೇ ಅಲ್ಲ, ವರ್ಲ್ಡ್ ವೈಡ್ ಫೇಮಸ್ ಆಗಿದ್ದಾರೆ. ಎಲ್ಲಿಯೇ ಹೋದರು ಅವರ ಅಭಿಮಾನಿಗಳು ಕಾಣಿಸುತ್ತಾರೆ. ಜನವರಿ 8 ಯಶ್ ಅವರ ಹುಟ್ಟುಹಬ್ಬ. ಆದರೆ ಈ ಬಾರಿ ಹುಟ್ಟುಹಬ್ಬಕ್ಕೆ ಊರಲ್ಲಿ ಇರುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ‘ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ.

ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್ ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್’ ಎಂದು ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ಕೂಡ ಯಶ್ ಸಿನಿಮಾದಲ್ಲಿ ಬ್ಯುಸಿ ಇದ್ದರು. ಆದರೆ ಅಭಿಮಾನಿಗಳು ಬ್ಯಾನರ್ ಕಟ್ಟಲು ಹೋಗಿ ಮೂವರು ಸಾವನ್ನಪ್ಪಿದ್ದರು. ಈ ಘಟನೆ ಇಂದಿಗೂ ಯಶ್ ಅವರಿಗೆ ಭಯ ಹುಟ್ಟಿಸುತ್ತದೆ. ಅಂದು ಎಲ್ಲಾ ಅಭಿಮಾನಿಗಳಲ್ಲು ಮನವಿ ಮಾಡಿಕೊಂಡಿದ್ದರು. ಇಂದು ಕೂಡ ಪತ್ರದಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!