ಸಿಎಂ, ಡಿಸಿಎಂ ಹಾಗೂ ಸರ್ಕಾರದ ವಿರುದ್ಧ ಕೇರಳದಲ್ಲಿ ಯಾಗ : ಅಷ್ಟಕ್ಕೂ ಏನಿದು ಶತ್ರು ಭೈರವನ ಯಾಗ..?

suddionenews
1 Min Read

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಹೊಸ ಶಾಕಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ನನ್ನ ವಿರುದ್ಧ ಸಿಎಂ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಕೇರಳದಲ್ಲಿ ಶತ್ರು ಭೈರವಿಯಾಗ ನಡೆಯುತ್ತಿದೆ ಎಂದಿದ್ದಾರೆ. ಈ ವಿಚಾರ ಹೇಳಿ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.

ನನ್ನ ವಿರುದ್ಧ, ಸಿಎಂ ವಿರುದ್ಧ, ಸರ್ಕಾರದ ವಿರುದ್ಧವೇ ಯಾಗ ಮಾಡಿಸಲಾಗುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಯಾಗ ನಡೆಯುತ್ತಿದೆ. ಉತ್ತರ ಭಾರತದಿಂದ ಬಂದಿರುವ ಅಘೋರಿಗಳ ತಂಡವೊಂದು ಈ ಯಾಗವನ್ನು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಈ ಯಾಗದಲ್ಲು ಪಂಚ ಬಲಿಯನ್ನು ನೀಡಲಾಗುತ್ತಿದೆ. ಈ ಯಾಗವನ್ನು ಯಾರು ಮಾಡಿಸುತ್ತಿದ್ದಾರೆ. ಯಾಗದಲ್ಲಿ ಯಾರೆಲ್ಕಾ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನನಗೆ ಗೊತ್ತಿದೆ. ಕೆಟ್ಟದು ಮಾಡಿದವರು ಮಾಡಲಿ, ನನಗೆ ನಮ್ಮ ದೇವರ ಮೇಲೆ ನಂಬಿಕೆ ಇದೆ. ದೇವರು ನಮ್ಮನ್ನು ಕಾಪಾಡುತ್ತವೆ ಎಂದಿದ್ದಾರೆ.

ಅಷ್ಟಕ್ಕು ಏನಿದು ಶತ್ರು ಭೈರವ ಯಾಗ..?

ಶತ್ರು ಯಾಗ ಎಂದರೆ ಹೆಸರೇ ಹೇಳುವಂತೆ ಶತ್ರುಗಳನ್ನು ನಾಶಪಡಿಸುವ ಅಥವಾ ಶತ್ರುಗಳ ಬಾಧೆಯಿಂದ ಹಿರಬರುವಂತ ಯಾಗ ಇದಾಗಿದೆ ಎಂದು ಧಾರ್ಮಿಕ ವಲಯದ ಹಲವರು ಹೇಳುತ್ತಾರೆ. ಕಾಲ ಭೈರವಿ ಎಂಬ ಹೆಸರು ಹೇಳಿದರೇನೆ ಹಲವರು ಬೆಚ್ಚಿಬೀಳುವುದು ಉಂಟು. ಇಂಥದ್ದೊಂದು ಯಾಗವನ್ನು ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ದೇಗುಲದಲ್ಲಿ ಈ ಯಾಗ ನಡೆಯುತ್ತಿದ್ದು, 21 ಮೇಕೆ, 3 ಎಮ್ಮೆ, 21‌ ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತ್ತಿದ್ದಾರೆ. ಅವರ ಪ್ರಯತ್ನ ಅವರು ನಡೆಸುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *