ದಾವಣಗೆರೆ: ಕೆಲವು ದಿನಗಳ ಹಿಂದೆ ಅಜಯ್ ದೇವಗನ್ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ ಅಂತ ಹೇಳಿ ಎಲ್ಲರಿಂದ ಪಾಠ ಮಾಡಿಸಿಕೊಂಡಿದ್ದರು. ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಕೂಡ ಸರಿಯಾಗಿಯೇ ಉತ್ತರ ಕೊಟ್ಟಿದ್ದರು. ಆದರೆ ಇದೀಗ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಕೂಡ ಹಿಂದಿ ರಾಷ್ಟ್ರ ಭಾಷೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕನ್ನಡವೇ ಮೊದಲು ಎಂದಿದ್ದಾರೆ.
ಜಿಲ್ಲೆಯ ಕೋಲ್ಕುಂಟೆ ಗ್ರಾಮದಲ್ಲಿ ನಡೆದ ಮೈಸೂರು ವಂಶಸ್ಥರ ಶಿಲಾಶಾಸನಪ್ರತಿಕೃತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯದುವೀರ್ ಅವರು, ಕರುನಾಡಿನಲ್ಲಿ ಕನ್ನಡವೇ ಮೊದಲು. ಕನ್ನಡವನ್ನೇ ಮೊದಲಾಗಿರುವಂತೆ ನೋಡಿಕೊಳ್ಳಬೇಕು. ಭಾರತದಲ್ಲಿ ಕನ್ನಡ ಹೇಗೆ ಒಂದು ಭಾಷೆಯೋ ಹಿಂದಿಯೂ ಅದೇ ರೀತಿ ಒಂದು ಭಾಷೆಯಷ್ಟೆ. ಎಲ್ಲಾ ಭಾಷೆಗೂ ಸಮಾನತೆ ನೀಡಬೇಕು ಎಂದಿದ್ದಾರೆ.
ಕೆಲವು ದಿನಗಳಿಂದ ಹಿಂದಿ ರಾಷ್ಟ್ರ ಭಾಷೆ ವಿಚಾರಕ್ಕೆ ಸದ್ದು ಗದ್ದಲ ಬರುತ್ತನೆ ಇದೆ. ಅಜಯ್ ದೇವಗನ್ ವಿಚಾರಕ್ಕೆ ಪರಭಾಷೆಯವರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಕಿಚ್ಚನುಗೆ ಬೆಂಬಲ ನೀಡಿದ್ದಾರೆ. ಆಯಾ ಸ್ಥಳೀಯ ಭಾಷೆಗಳು ಅವರವರ ರಾಜ್ಯಗಳಿಗೆ ಪ್ರಮುಖ ಭಾಷೆ. ಸದ್ಯ ಯಾವ ಭಾಷೆಯನ್ನು ಅಧಿಕೃತ ರಾಷ್ಟ್ರ ಭಾಷೆಯನ್ನಾಗಿಸಿಲ್ಲ. ಈ ಬಗ್ಗೆ ತಿಳಿಯದೆ ಹೀಗೆ ನಾತಾಡಿರುವುದು ಅಜಯ್ ದೇವಗನ್ ಅವರ ಜ್ಞಾನ ತೋರಿಸುತ್ತದೆ ಎಂದು ಹಲವರು ಕಿಡಿಕಾರಿದ್ದಾರೆ.