ಸಿದ್ದರಾಮಯ್ಯ ಅವರ ಗೌರವವವನ್ನು ಅವರೇ ಹಾಳು ಮಾಡಿಕೊಳ್ಳುತ್ತಾರೆ : ಯಡಿಯೂರಪ್ಪ

1 Min Read

 

ಬೆಳಗಾವಿ : ರಾಜ್ಯಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷವನ್ನು ಸದೆಬಡಿಯಲು ಜೆಡಿಎಸ್ ನಮಗೆ ಬೆಂಬಲ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ರೆ, ಜೆಡಿಎಸ್ ನಾಯಕರು ಕೂಡ ಅದನ್ನೇ ಹೇಳುತ್ತಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ನವರು ಮನಬಂದಂತೆ ಮಾತನಾಡುತ್ತಾರೆ. ಚುನಾವಣೆಯಲ್ಲಿ ಸೋಲು ನಿಶ್ಚಿತ ಅಂತ ಅವರಿಗೆ ಗೊತ್ತಾಗಿದೆ.

RSS ಬಗ್ಗೆ ಹಗುರವಾಗಿ ಮಾತನಾಡುವಂತದ್ದು, ಬೇರೆ ಬೇರೆ ವಿಷಯಕ್ಕೆ ಹಗುರವಾಗಿ ಮಾತನಾಡುವಂಥದ್ದು ಅವರಿಗೊಂದು ಚಟ ಆಗಿದೆ. ಇದರಿಂದ ಅವರಿಗೇನು ಲಾಭ ಆಗಲ್ಲ. ಅದರ ಬಗ್ಗೆ ವಿರೋಧ ಪಕ್ಷದ ನಾಯಕರ ಮೇಲಿನ ಗೌರವ, ಒಬ್ಬ ಮಾಜಿ ಮುಖ್ಯಮಂತ್ರಿಗಳಾಗಿ ಈ ರೀತಿ ಮಾತನಾಡುವುದ‌ನ್ನು ನೋಡಿದ ಜನ ಈಗಾಗಲೇ ಬೇಸತ್ತಿದ್ದಾರೆ. ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿ, ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಪ್ರವಾಸ ಮಾಡುವುದಕ್ಕೆ ಅವರಿಗೆ ಸಂಪೂರ್ಣ ಸ್ವತಂತ್ರವಿದೆ. ಅವರ ಪಕ್ಷ ಬಲಪಡಿಸಲು ಅವರು ಪ್ರಯತ್ನ ಮಾಡುತ್ತಾರೆ ಎಂದಿದ್ದಾರೆ. ಇಲ್ಲಿ ಮುಖಂಡತ್ವದ ಪ್ರಶ್ನೆ ಇಲ್ಲ. ಸಾಮೂಹಿಕ ನೇತೃತ್ವದಲ್ಲಿ ಎಲ್ಲಾ ಕಡೆ ಪ್ರವಾಸ ಮಾಡುತ್ತೇವೆ. ಎಲ್ಲಾ ಚುನಾವಣೆಯಲ್ಲೂ ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮತದಾರರು ಮೋದಿ ಮತ್ತು ಬಿಜೆಪಿ ಜೊತೆಗಿರುವ ಕಾರಣ ನಮ್ಮ ಮುಂದಿನ ಚುನಾವಣೆಯ ಗೆಲುವಿಗೆ ಅಡ್ಡಿ ಆತಂಕವಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *