Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗುರುವಿನ ಸ್ಥಾನವನ್ನು ಅಪವಿತ್ರ ಮಾಡಿದ್ದು ವೈ.ಎ.ನಾರಾಯಣಸ್ವಾಮಿ : ಬಿ.ಎನ್.ಚಂದ್ರಪ್ಪ ಆರೋಪ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ ಮೇ. 29 :  ನಮ್ಮ ಸಮಾಜದಲ್ಲಿ ಗುರುವಿನ ಸ್ಥಾನ ಬಹಳ ಪವಿತ್ರವಾದದು, ಅದನ್ನು ಆಪವಿತ್ರ ಮಾಡಿದವರು ಈಗಿನ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿಯವರು ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಆರೋಪಿಸಿದ್ದಾರೆ.

ಜೂ.3 ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಚಿತ್ರದುರ್ಗ ನಗರದ ಡಾನ್ ಬಾಸ್ಕೋ ಕಾಲೇಜಿನಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಶಿಕ್ಷಕರನ್ನು ಗೌರವದಿಂದ ಕಾಣುವ ಸಂಸ್ಕೃತಿ ನಮ್ಮದಾಗಿದೆ ಆದರೆ ಈ ವ್ಯಕ್ತಿ ಶಿಕ್ಷಕರುಗಳಿಗೆ ಆವಮಾನ ಮಾಡಿದ್ದಾರೆ, ಸದನದಲ್ಲಿ ಶಿಕ್ಷಕರ ಬಗ್ಗೆ ಯಾವ ಸಮಸ್ಯೆಯನ್ನು ಪರಿಹಾರ ಮಾಡಿಲ್ಲ ಸುಮಾರು 18 ವರ್ಷ ಕಾಲಹರಣವನ್ನು ಮಾಡಿದ್ದಾರೆ ಇಂತಹವರನ್ನು ಮತ್ತೆ ಆಯ್ಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಆಯ್ಕೆಯನ್ನು ಮತದಾರರಿಗೆ ಬಿಟ್ಟರು.

ಶಿಕ್ಷಕರನ್ನು ರಾಜಕೀಯವಾಗಿ ಬಳಸಿಕೊಂಡ ಈ ವ್ಯಕ್ತಿ ಅವರಿಗೆ ಯಾವ ಸಹಾಯವನ್ನು ಸಹಾ ಮಾಡಿಲ್ಲ ಇದರ ಬದಲಿಗೆ ಅಧಿಕಾರವನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗ ಮಾಡಿ ಶಿಕ್ಷಕರಿಗೆ ಸಹಾಯವನ್ನು ಮಾಡಿಲ್ಲ, ಕ್ಷೇತ್ರವನ್ನು ಅಲೋಲ ಕಲ್ಲೋಲ ಮಾಡಿದ್ದಾರೆ. ಕ್ಷೇತ್ರವನ್ನು ಆಪವಿತ್ರ ಮಾಡಿದ್ದಾರೆ. ಸಮಾಜದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆಪಾರವಾದ ಮಾನ್ಯತೆ ಇದೆ ಆದರೆ ಇದನ್ನು ಇವರು ಹಾಳು ಮಾಡಿದ್ದಾರೆ. ಶಿಕ್ಷಕರಲ್ಲಿ ಕೋಮುವಾದವನ್ನು ಭಿತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೋಮುವಾದವನ್ನು ರಾಜ್ಯದಲ್ಲಿ ಹೊಡೆದೊಡಿಸಲಾಗಿದೆ. ಶಾಂತಿಯನ್ನು ನೆಲೆಯೂರಲು ಪ್ರಯತ್ನವನ್ನು ಮಾಡಿದೆ. ಈ ಚುನಾವಣೆಯಲ್ಲಿ ಬದಲಾವಣೆಯನ್ನು ಮಾಡಲು ಈ ಕ್ಷೇತ್ರದ 5 ಜಿಲ್ಲೆಯ ಮತದಾರರು ತೀರ್ಮಾನ ಮಾಡಿದ್ದಾರೆ. ಹಣಕ್ಕಾಗಿ ರಾಜಕಾರಣವನ್ನು ಮಾಡುವವರೆಗೆ ಮತವನ್ನು ಹಾಕ ಬೇಡಿ, ನಿಮ್ಮ ಸಮಸ್ಯೆಗಳಿಗೆ ಸ್ಫಂದಿಸುವವರು ನಿಮ್ಮ ಬೇಡಿಕೆಯನ್ನು ಈಡೇರಿಸುವವರಿಗೆ ಮತವನ್ನು ನೀಡಿ ನಾವು ಮುಂದಿನ 4 ವರ್ಷ ಅಧಿಕಾರದಲ್ಲಿ ಇರುತೇವೆ ಸರ್ಕಾರ ನಮ್ಮದಿದೆ ಶ್ರೀನಿವಾಸ್ ರವರನ್ನು ಆಯ್ಕೆ ಮಾಡಿದರೆ ನಿಮ್ಮ ಹಲವಾರು ಬೇಡಿಕೆಗಳು ಈಡೇರುತ್ತೇವೆ ಎಂದು ಚಂದ್ರಪ್ಪ ಭರವಸೆ ನೀಡಿದರು.

ಮಾಜಿ ಶಾಸಕಿ ಶ್ರೀಮತಿ ಪೂರ್ಣೀಮ ಶ್ರೀನಿವಾಸ್ ಮಾತನಾಡಿ, ನಮ್ಮ ತಂದೆ, ನಮ್ಮ ಪತಿ ಶಿಕ್ಷಣದ ಬಗ್ಗೆ ಆಪಾರವಾದ ಕಾಳಜಿ, ಪ್ರೀತಿಯನ್ನು ಹೊಂದಿದ್ದಾರೆ ಅಲ್ಲದೆ ನಾವು ಸಹಾ ಹಲವಾರು ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದ್ದೇವೆ ಶಿಕ್ಷಕರ ಸಮಸ್ಯೆಯ ಬಗ್ಗೆ ನಮಗೆ ಅರಿವು ಇದೆ, ಅವುಗಳನ್ನು ಬಗೆಹರಿಸುವ ಸಂಬಂಧ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಇಂದಿನ ವಿಧಾನ ಪರಿಷತ್ ಸದಸ್ಯರು ತಮ್ಮ ಮತದಾರರಿಗೆ ಆಸೆ, ಆಮಿಷಗಳನ್ನು ನೀಡುವುದರ ಮೂಲಕ ಗೆಲುವು ಸಾಧಿಸಿದ್ದಾರೆ ಇದರಿಂದ ಆವರು ಶಿಕ್ಷಕರ ಕ್ಷೇತ್ರದಲ್ಲಿ ಯಾವ ಕೆಲಸವನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿಲ್ಲ ಎಂದು ದೂರಿದರು.

ನಮಗೆ ಶಿಕ್ಷಕರ ಮತ್ತು ಮಕ್ಕಳ ಸಮಸ್ಯೆ ಏನು ಎಂಬುದು ಅರಿವು ಇದೆ, ಇದನ್ನು ನಿವಾರಣೆ ಮಾಡಲು ನಾವು ಮುಂದಾಗುತ್ತವೆ, ನಮ್ಮ ಮೇಲೆ ನಂಬಿಕೆ ಇಡಿ ಶ್ರೀನಿವಾಸ್ ರವರಿಗೆ ಈ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ಯದ ಮತವನ್ನು ನೀಡುವುದರ ಮೂಲಕ ಗೆಲುವನ್ನು ಸಾಧಿಸಲು ಸಹಾಯ ಮಾಡಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಯಾವುದೆ ರೀತಿಯ ಭದ್ರತೆ ಇಲ್ಲ ನಿವೃತ್ತಿಯಾದರೆ ಪೆನ್ಷನ್ ಸಹಾ ಬರುವುದಿಲ್ಲ ಇದರ ಬಗ್ಗೆ ನಮಗೆ ಅರಿವು ಇದೆ ನಾವು ಗೆದ್ದರೆ ನಿಮ್ಮ ಪರವಾಗಿ ಹೋರಾಟವನ್ನು ಮಾಡಿ ಕೊಡಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಭರವಸೆಯನ್ನು ನೀಡಿದರು.

ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್ ಮಾತನಾಡಿ, ಸರ್ಕಾರಿ ಶಾಲಾ ಶಿಕ್ಷಕರುಗಳಿಗೆ ಸರ್ಕಾರ ನೋಡಿಕೊಳ್ಳುತ್ತಿದ್ದರೆ ಖಾಸಗಿ ಶಾಲಾ ಶಿಕ್ಷಕರಿಗೆ ಯಾವುದೇ ರೀತಿಯ ಭದ್ರತೆ ಇಲ್ಲವಾಗಿದೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವನ್ನು ಸಾಧಿಸಿದರೆ ಇದನ್ನು ಪರಿಹಾರ ಮಾಡಲಾಗುವುದು, ವಿಧಾನ ಸಭೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿದಂತೆ ಈ ಚುನಾವಣೆಯಲ್ಲಿಯೂ ಸಹಾ ಬೆಂಬಲವನ್ನು ನೀಡಿ ಕಾಂಗ್ರೆಸ್ ಸರ್ಕಾರ ಶಿಕ್ಷಕರ ಪರವಾಗಿ ಇದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷರಾದ ತಾಜ್ಪೀರ್, ಮಾಜಿ ಅಧ್ಯಕ್ಷರಾದ ಫಾತ್ಯರಾಜನ್, ಪ್ರಧಾನ ಕಾರ್ಯದರ್ಶಿಗಳಾದ ಮೈಲಾರಪ್ಪ, ಲಕ್ಷ್ಮೀಕಾಂತ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ನಂದಿನಿ ಗೌಡ, ಪ್ರಕಾಶ್ ಓಬಿಸಿ ವಿಭಾಗದ ಅಧ್ಯಕ್ಷರಾದ ಎನ್.ಡಿ.ಕುಮಾರ್ ತಿಪ್ಪೇಸ್ವಾಮಿ, ಆಸಿಫ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಟ್ಟಿ ಭಾಗ್ಯ ಕೊಡಲಿಕ್ಕೆ ವಾಲ್ಮೀಕಿ ನಿಗಮದ ದುಡ್ಡೇ ಬೇಕಿತ್ತಾ ? ಸಿಎಂ ವಿರುದ್ಧ ಮಾಜಿ ಶಾಸಕ ತಿಪ್ಪೇಸ್ವಾಮಿ ವಾಗ್ದಾಳಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಚಳ್ಳಕೆರೆ, ಜುಲೈ. 03 :  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಬಿಟ್ಟಿಭಾಗ್ಯಗಳನ್ನು ಕೊಟ್ಟು ಖಜಾನೆ ಖಾಲಿ ಮಾಡಿಕೊಂಡಿದೆ. ಸಿದ್ದರಾಮಯ್ಯನವರೇ ಬಿಟ್ಟಿ

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಜಾಗೃತಿ ಮೂಡಿಸಿ : ಪಿಡಿಒಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್

ಚಿತ್ರದುರ್ಗ. ಜುಲೈ.03:  ಮಳೆಗಾಲ ಆರಂಭವಾಗಿದ್ದು, ಕಲುಷಿತ ನೀರು ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಸ್ವರೂಪದ ಪರಿಣಾಮಗಳು ಬೀರುವ ಸಾಧ್ಯತೆಗಳಿರುವುದರಿಂದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಾಗೃತಿ ಮೂಡಿಸುವ ಕೆಲಸ

120 ವರ್ಷಗಳ ಇತಿಹಾಸ ಇರುವ ರೋಟರಿ ಸಂಸ್ಥೆಯ ಮೂಲ ಉದ್ದೇಶ ಸೇವೆ : ರೊ.ಪಿ.ಹೆಚ್.ಎಫ್. ಎಂ.ಕೆ.ರವೀಂದ್ರ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜುಲೈ.03 : : ಕೇವಲ ನಾಲ್ಕು ಸದಸ್ಯರಿಂದ 1905 ರಲ್ಲಿ ಆರಂಭಗೊಂಡ ರೋಟರಿ ಸಂಸ್ಥೆ 119

error: Content is protected !!