Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಾಲೆಗಳಲ್ಲಿ ದೇವರ, ದಿಂಡಿರ ಆಚರಣೆ ನಿಷಿದ್ಧ : ಬಂಜಗೆರೆ ಜಯಪ್ರಕಾಶ್

Facebook
Twitter
Telegram
WhatsApp

ಸುದ್ದಿಒನ್, ಹೊಸದುರ್ಗ, ಸೆಪ್ಟೆಂಬರ್. 06 : ಯಾವುದೇ ಸಾರ್ವಜನಿಕ ಇಲಾಖೆ, ಶಾಲೆಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಬಾರದೆಂಬ ನಿಯಮವಿದೆ. ಆದರೂ ಕೂಡ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲರೂ ಕೂಡ ಶಾರದಾ ಪೂಜೆ, ಗಣೇಶ ಹಬ್ಬ ಆಚರಿಸುತ್ತಿದ್ದೀರಿ. ಇದೆಲ್ಲ ಗೊತ್ತಿದ್ದು ಜ್ಞಾನಿಗಳ ಆಗಿದ್ದು ಕೂಡ ದಾರಿ ತಪ್ಪುತ್ತಿರುವುದು ಬೇಸರದ ಸಂಗತಿ. ಜನಕ್ಕೆ ಬೇಕಾದ ಭಕ್ತಿಭಾವದ ಧಾರ್ಮಿಕ ಆಚರಣೆಯನ್ನು ಬೇಕಿದ್ದರೆ ಅವರ ಮನೆಯಲ್ಲಿ ಮಾಡಿಕೊಳ್ಳಲಿ. ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡಿ, ಗಾಂಧಿ ಜಯಂತಿ ಆಚರಿಸಿ. ರಾಷ್ಟ್ರಕ್ಕೆ ಉಪಯುಕ್ತ ಸಂದೇಶ ಕೊಡುವ ಆಚರಣೆ ಮಾಡಿ. ನಮ್ಮ ಸಂವಿಧಾನದ ಆಶಯದ ಹೊರತಾಗಿ ಯಾವ ಆಚರಣೆಯೂ ಬೇಕಿಲ್ಲ ಎಂದು ಸಾಹಿತಿ, ಚಿಂತಕ, ವಿಮರ್ಶಕ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಹೊಸದುರ್ಗ ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಒಂದು ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು. ರಾಧಾಕೃಷ್ಣನ್ ಅವರಿಗೆ ತತ್ವಶಾಸ್ತ್ರದಲ್ಲಿ ಹೆಚ್ಚಿನ ಪಾಂಡಿತ್ಯವಿತ್ತು. ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಶಿಕ್ಷಣಕ್ಕಾಗಿ ಹೋರಾಟ ಮಾಡಬೇಕಾಗಿ ಬಂತು. ಇಂದು ಸಾಕಷ್ಟು ಜನ ಶಿಕ್ಷಕರಾಗಿದ್ದರು. ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ. ಅವರು ಶಿಕ್ಷಣ ಕಲಿಸಲು ಹೋಗುತ್ತಿದ್ದಾಗ ಅವರನ್ನು ಸಗಣಿಯಲ್ಲಿ ಹೊಡೆಯಿರಿ ಅಂತ ಹೇಳಿಕೊಡುತ್ತಿದ್ದರು. ಶಿಕ್ಷಣ ಕಲಿಸಿದ ತಪ್ಪಿಗೆ ಸಗಣಿಯಲ್ಲಿ ಒಡೆಸಿಕೊಂಡು ಎಷ್ಟು ಅವಮಾನ ಅನುಭವಿಸಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಂದು ಸಾವಿರಾರು ಜನ ಶಿಕ್ಷಕರು ಇದ್ದಾರೆ. ಹಿಂದೆ ರಾಜರ ಆಸ್ಥಾನದಲ್ಲಿ ಇದ್ದವರಿಗೆ ಮಾತ್ರ ಶಿಕ್ಷಕರಗಳಿಕ್ಕೆ ಅವಕಾಶವಿತ್ತು. ಈ ದೇಶ ವೈವಿಧ್ಯಮಯವಾದ ಭಾಷೆ ಸಂಸ್ಕೃತಿಯನ್ನು ಹೊಂದಿದೆ. ಈ ಹಿಂದೆ ಯಾವುದೇ ಅವಕಾಶಗಳು ಸಮಾನವಾಗಿ ಎಲ್ಲರಿಗೂ ಸಿಗದಿರುವುದರಿಂದ ಬಡವರು, ಹಿಂದುಳಿದವರು ಇದ್ದಾರೆ. ಅಜ್ಞಾನ ಬದಲಿಸಿ ವಿಜ್ಞಾನ ತಂದು ಕೊಡುಬೇಕು. ಜನರ ನಡುವಿನ ದ್ವೇಷ ಬದಲಿಸಿ, ಸ್ನೇಹ, ಸಹಕಾರ ತಂದಿಡಬೇಕು. ಆಗ ನಾವು ಪ್ರಪಂಚಕ್ಕೆ ವಿಶ್ವಗುರು ಆಗುತ್ತೇವೆ. ವಿಶ್ವಗುರು ಆಗಲಿಕ್ಕೆ ಬದಲು ಒಳ್ಳೆಯ ಶಿಕ್ಷಣ ನೀಡುವ ಗುರುವಾಗಿ ಕರ್ತವ್ಯ ನಿರ್ವಹಿಸಬೇಕು. ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಅದರ ಪೆಟ್ಟು ಸಮಾಜ ತಿನ್ನಬೇಕಾಗುತ್ತದೆ. ಹೊಸ ಸಮಾಜ ಕಟ್ಟಲಿಕ್ಕೆ ಹಗಲು ರಾತ್ರಿ ಎಲ್ಲರೂ ಶ್ರಮಿಸಬೇಕು. ಶಿಕ್ಷಕರಾದ ಮೇಲೆ ಧರ್ಮ, ಜಾತಿ, ಪ್ರದೇಶ ಮರೆತು ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಮುನ್ನಡೆಯಬೇಕು. ಅಭಿವೃದ್ಧಿಗೆ ಪೂರಕ ಮೌಲ್ಯಗಳನ್ನು ಬೆಳೆಸಬೇಕು. ಬರೀ ಸುಳ್ಳು, ಮೋಸ, ವಂಚನೆ, ಲಂಚ ಪಡೆಯುವ ಬಗ್ಗೆ ಹೇಳುವುದು ಮೌಲ್ಯವಲ್ಲ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಪೂರ್ಣ ಸಾಕ್ಷರತೆ ಇನ್ನೂ ಬಂದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಹರೇ ಶಿಕ್ಷಣ ವ್ಯವಸ್ಥೆ ಇಂದಿಗೂ ಇದೆ. ಪದವಿ ಪಡೆದ ಶಿಕ್ಷಕರು ನಾವು ಪಡೆದ ಶಿಕ್ಷಣಕ್ಕೆ ಎಷ್ಟು ಅರ್ಹತೆ ಹೊಂದಿದ್ದೇವೆ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕು. ಜೀವನದ ಗುರಿ, ಉದ್ದೇಶ ಕಲಿಸುವುದು, ಗುರು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದೊಯ್ಯುವವನೇ ಗುರು. ಅಜ್ಞಾನದಲ್ಲಿ ಇದ್ದವರಿಗೆ ಆಧುನಿಕ ವಿಜ್ಞಾನದ ಕಡೆಗೆ ಕಳೆದುಕೊಂಡು ಬಂದಿದ್ದೆ ಶಿಕ್ಷಣ. ಆರಂಭಿಕ ಶಿಕ್ಷಣ ಸರಿಯಾದ ರೀತಿ ಮಕ್ಕಳಿಗೆ ಶಿಕ್ಷಣ ಸಿಕ್ಕರೆ ಏನು ಬೇಕಾದರೂ ಸಾಧನೆ ಮಾಡಬಹುದು. ರಾಷ್ಟ್ರ ನಿರ್ಮಾಣದ ಕೆಲಸವನ್ನು ನಾವಿನ್ನು ಪೂರೈಸಿಲ್ಲ. ಸರ್ವರಿಗೂ ಸಮಪಾಲು ಸಮಬಾಳು ತತ್ವದಡಿ
ಗುಣಮಟ್ಟದ ಶಿಕ್ಷಣ ಸಿಗಬೇಕು. ಹೊಸ ರಾಷ್ಟ್ರ ಕಟ್ಟುತ್ತಿದ್ದೇವೆ ಎಂಬುದನ್ನು ಎಲ್ಲರೂ ಬರೆಯಬೇಕು. ಸನಾತನ ಸಂಸ್ಕೃತಿಯನ್ನು ಕಟ್ಟಲಿಕ್ಕೆ, ಭಾರತದ ಗತಕಾಲದ ಹೆಮ್ಮೆಯನ್ನು ಕಟ್ಟಲಿಕ್ಕೆ ಹೊರಟಿಲ್ಲ. ನಾವು ಭವಿಷ್ಯತ್ಕಾಲದ ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಹೊರಟಿದ್ದೇವೆ ಎಂಬುದನ್ನು ಎಲ್ಲರೂ ಅರಿತುಕೊಂಡು ಜಾತ್ಯಾತೀತ ಮನೋಭಾವದೊಂದಿಗೆ ಎಲ್ಲಾ ಮಕ್ಕಳನ್ನು ಪ್ರೀತಿ ವಿಶ್ವಾಸದೊಂದಿಗೆ ಕಾಣುವ ಮೂಲಕ ಉತ್ತಮ ಶಿಕ್ಷಣ ನೀಡು ವ ಸತ್ಪ್ರಜೆಗಳ ನಿರ್ಮಾಣ ಮಾಡಿದ್ದಲ್ಲಿ ಉತ್ತಮ ವಿದ್ಯಾರ್ಥಿಗಳು ರಾಷ್ಟ್ರ ಬಲಿಷ್ಠವಾದ ಸಾಧ್ಯವಾಗುತ್ತದೆ. ಶ್ರಮ ಗೌರವಿಸುವ ಮೌಲ್ಯ ಮಕ್ಕಳಿಗೆ ಕಲಿಸಿ. ಸಮಸ್ಯೆಯಲ್ಲಿ ಸಿಲುಕಿರುವ ವ್ಯಕ್ತಿಯ ನೋವು ಸ್ವೀಕರಿಸುವ ಗುಣ ಬೆಳೆಸಬೇಕು. ವ್ಯಕ್ತಿಗೆ ಫಲ ಕೊಡದ ಶಿಕ್ಷಣ ಪವಿತ್ರವಾಗಲಾರದು ಎಂದು ತಿಳಿಸಿದರು

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ
ಶಾಸಕರಾದ ಬಿ.ಜಿ.ಗೋವಿಂದಪ್ಪ ಮಾತನಾಡಿ, ದೇಶದ ಅತೀ ಮುಖ್ಯವಾದ ಸಂಪತ್ತು ಶಿಕ್ಷಣ. ದೇಶದ ಸಂಪತ್ತು ರೂಪಿಸುವ ಕೆಲಸ ಶಿಕ್ಷಕರ ಮೇಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೆಚ್ಚು ವೇತನ ಕೊಟ್ಟು ಬುನಾದಿ ಶಿಕ್ಷಣ ಬಲಪಡಿಸಬೇಕು ಎಂದು ಬಂಜಗೆರೆ ತಿಳಿಸಿದ್ದಾರೆ. ಪ್ರಾಥಮಿಕ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ಅಕ್ಷರ, ಸಂಸ್ಕಾರ ಎರಡನ್ನೂ ಸಮಾನವಾಗಿ ಕಲಿಸಬೇಕು. ಪ್ರಾಥಮಿಕ ಶಿಕ್ಷಣ ಪ್ರಮುಖವಾದ ಘಟ್ಟ. ಶಾಲೆಯಲ್ಲಿ ಮಕ್ಕಳು ಅನ್ನುತೀರ್ಣರ್ದಾರೆ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂಬ ಕಾರಣಕ್ಕೆ ಪಾಸ್ ಮಾಡಿ ಅಂತ ಹೇಳಿದೆ. ಆದರೆ ಶಿಕ್ಷಕರು ಇದನ್ನು ತಾತ್ಸಾರ ಮಾಡಿದರೆ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಶಿಕ್ಷಕರು ತಮ್ಮ ಪಾಲಿನ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಎಲ್ಲಾ ಮಕ್ಕಳ ಕಲಿಕೆಯ ತಪ್ಪುಗಳನ್ನು ಗುರುತಿಸಿ, ಸರಿಯಾದ ಸಲಹೆ, ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು. ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಹೆಚ್ಚು ಕಾಳಜಿ ವಹಿಸಬೇಕು. ಶಿಕ್ಷಕರಿಗೆ ಸಿಗುವ ಗೌರವ ಯಾವ ಇಲಾಖೆಯ ಅಧಿಕಾರಿಗೂ ಸಿಗಳಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಅತ್ಯಂತ ಶ್ರದ್ಧೆಯಿಂದ ಶಿಕ್ಷಣ ಕಲಿಸಬೇಕು. ಪುಸ್ತಕ ತೆರೆಯದೇ ಓದದೇ ತರಗತಿ ಹೋಗಿ ಮಕ್ಕಳನ್ನು ಕೇಳಿ ಪಾಠ ಮಾಡುವ ಪ್ರವೃತ್ತಿ ಕೈಬಿಡಬೇಕು. ತಮ್ಮ ವೈಯಕ್ತಿಕ ಸಮಸ್ಯೆ ಏನೇ ಇದ್ದರೂ ಮಕ್ಕಳ ಕಲಿಕೆಗೆ ದ್ರೋಹ ಮಾಡಬಾರದು. ಸರಕಾರ ಶಿಕ್ಷಣಕ್ಕೆ ಸಾಕಷ್ಟು ಹಣ ವಿನಿಯೋಗಿಸುತ್ತಿರುವ ಉದ್ದೇಶ ಅರಿತು ಶಿಕ್ಷಕರು ಕೆಲಸ ಮಾಡಬೇಕು. ಸರಕಾರಿ ಶಾಲೆಗಳ ದಾಖಲಾತಿ ಕುಸಿತ ಆಗುತ್ತಿದ್ದರೂ ತಡೆಗಟ್ಟಲು ಶಿಕ್ಷಕರು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಲಿಷ್ಠವಾಗಿ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಬರುತ್ತದೆ. ನಾನು ಪ್ರತಿದಿನ ಹೋಗುವ ಮಾರ್ಗದಲ್ಲಿ ಬರುವ ಶಾಲೆಗೆ ಬರುತ್ತೇನೆ. ಪರಿಶೀಲಿಸುತ್ತೇನೆ. ನಿಮ್ಮ ಸಮಯವನ್ನು ಹೆಚ್ಚು ಶಾಲೆಯಲ್ಲಿ ಕಳೆಯಿರಿ. ಕರ್ತವ್ಯ ಎಸಗದಂತೆ ಕೆಲಸ ಮಾಡಿ. ಸಂಜೆ ಬೇಗನೆ ಮನೆಗೆ ಹೋಗಬೇಡಿ. ರಾಷ್ಟ್ರೀಯ ಹಬ್ಬಗಳನ್ನು ಪ್ರತಿಶಾಲೆಯಲ್ಲಿ ನೀಟಾಗಿ ಆಚರಿಸಬೇಕು. ಮಕ್ಕಳ ಮೌಲ್ಯಮಾಪನ ಕಡ್ಡಾಯವಾಗಿ ಮಾಡಲೇಬೇಕು ಎಂದು ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸೇವಾ ಅವಧಿಯಲ್ಲಿ ನಿಧನರಾದ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಉತ್ತಮ ಶಾಲೆಗಳಿಗೆ ಪುರಸ್ಕಾರ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಸಿದ್ದರಾಮೇಶ್ವರ ಸಮುದಾಯ ಭವನದವರೆಗು ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ರಾಧಾಕೃಷ್ಣನ್ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ಜರುಗಿತು.

ಸಮಾರಂಭದಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಗಂಗಾಧರಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಾಂತಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ಬಡ್ತಿ ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಧ್ಯಕ್ಷ ಗುತ್ತಿಕಟ್ಟೆ ಪ್ರಕಾಶ್, ಬಡ್ತಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಶೇಖರಪ್ಪ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎನ್.ಓ.ಪ್ರಕಾಶ್, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ್, ತಾಲೂಕು ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪೇಶಪ್ಪ, ಎಂ.ಆರ್.ಶಾಂತಪ್ಪ, ಮುಖಂಡರಾದ ಕೆ.ಸಿ.ನಿಂಗಪ್ಪ, ಪುರಸಭೆ ಸದಸ್ಯರಾದ ರಾಮಚಂದ್ರಪ್ಪ, ದೊಡ್ಡಯ್ಯ, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬುಕ್ ಮೈ ಶೋ ನಲ್ಲಿ 24ಘಂಟೆಗಳಲ್ಲಿ ಅತಿ ಹೆಚ್ಚು ಟಿಕೇಟ್ ಬುಕ್ ಆದ ಮೊದಲ ಸಿನಿಮಾ ARM’

  ಬೆಂಗಳೂರು: ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್‌ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ಎಆರ್‌ಎಂ ಸಿನಿಮಾವನ್ನು ನಿರ್ಮಿಸಿದ ARM ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿದೆ. ಬಿಡುಗಡೆಯಾದ 4

ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿ ಆರಂಭ..!

  ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 47 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಸಂಗ್ರಹಣೆ ಸಲಹೆಗಾರ, ಪರಿಸರ ಸಲಹೆಗಾರ, ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು

ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ : ರಾಜ್ಯಾಧ್ಯಕ್ಷರ ಮೇಲೆ ಕಿಡಿಕಾರಿದ ರಮೇಶ್ ಜಾರಕಿಹೊಳಿ

  ಬೆಳಗಾವಿ: ಯಡಿಯೂರಪ್ಪ ಅವರಿಗೆ ನಾನು ವಿರೋಧಿಯಲ್ಲ. ಯಡಿಯೂರಪ್ಪ ಅವರು ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ ವಿಜಯೇಂದ್ರ ನಮ್ಮ‌ ಪಕ್ಷದ ನಾಯಕನಲ್ಲ. ಬಿಜೆಪಿಯಲ್ಲಿಯೇ ಭ್ರಷ್ಟ

error: Content is protected !!