ಬೆಂಗಳೂರು: ಮತದಾನವೇನೋ ಮುಗಿದಿದೆ. ಆದರೆ ಫಲಿತಾಂಶ ಕಳೆದ ಬಾರಿಯಂತೆ ಮತ್ತೆ ಅತಂತ್ರವೇ ಆಗುವ ಸಾಧ್ಯತೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಮತ್ತೆ ಜೆಡಿಎಸ್ ಬಾಗಿಲು ತಟ್ಟುವ ಸಾಧ್ಯತೆ ದಟ್ಟವಾಗಿದೆ. ಚುನಾವಣೆಗೂ ಮುನ್ನ ಕೂಡ ಕುಮಾರಸ್ವಾಮಿ ಅವರು ಹೇಳಿದ್ದರು, ಜೆಡಿಎಸ್ ಇಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ ಅಂತ ಚಾಲೆಂಜ್ ಹಾಕಿದ್ದರು. ಈಗ ಅಂಥದ್ದೆ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ.
ಮತ ಎಣಿಕೆಗೆ ಒಂದೇ ದಿನ ಬಾಕಿ ಇರುವುದು. ಈ ಬಾರಿಯೂ ಮತದಾರರು ಸಂಪೂರ್ಣವಾಗಿ ಯಾವೊಂದುಂದು ಪಕ್ಷಕ್ಕೂ ಮತ ನೀಡಿಲ್ಲ. ಕೆಲವೊಂದು ಸರ್ವೆಗಳ ಪ್ರಕಾರ ಆದರೆ ಈ ಬಾರಿಯೂ ಅತಂತ್ರವಾಗಲಿದೆ. ಸರ್ಕಾರ ರಚಿಸಬೇಕೆಂದರೆ ಜೆಡಿಎಸ್ ಜೊತೆ ಕೈ ಜೋಡಿಸಲೇಬೇಕಾಗುತ್ತದೆ. ಒಂದು ಕಡೆ ಇದು ಜೆಡಿಎಸ್ ಗೆ ಪ್ಲಸ್ ಪಾಯಿಂಟ್ ಆದರೆ ಮತ್ತೊಂದು ಕಡೆ ಆತಂಕ ಕಾಡುತ್ತಿದೆಯಂತೆ.
ಯಾಕಂದ್ರೆ ಕಳೆದ ಬಾರಿ ಕಾಂಗ್ರೆಸ್ ಜೊತೆ ಕೈಜೋಡಿಸಿದಾಗ ಮಧ್ಯದಲ್ಲಿಯೇ ಸಮ್ಮಿಶ್ರ ಸರ್ಕಾರ ಉರುಳಿ ಬಿದ್ದಿತ್ತು. ಈ ಬಾರಿಯೂ ಒಂದು ವೇಳೆ ಕಾಂಗ್ರೆಸ್ ಜೊತೆಗೆ ಮಾಡಿದರೆ ಸಿಎಂ ಸ್ಥಾನವೇನೋ ಸಿಗುತ್ತೆ. ಆದರೆ ಮತ್ತೆ ಏನಾದರೂ ಬಿಜೆಪಿ ಆಪರೇಷನ್ ಕಮಲ ಮಾಡಿದರೆ, ಮತ್ತೆ ಸರ್ಕಾರ ಬೀಳುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಕಡೆಗೆ ಕುಮಾರಸ್ವಾಮಿ ಒಲವು ತೋರುತ್ತಿದ್ದಾರೆ ಎಂಬ ಮಾತು ಜೋರಾಗಿಯೇ ಹರಿದಾಡುತ್ತಿದೆ. ಸಿಎಂ ಸ್ಥಾನಕ್ಕೆ ಕಾಂಪ್ರೂಮೈಸ್ ಆಗಲೇಬೇಕಾಗಿರುತ್ತದೆ. ಹೀಗಾಗಿ ದೇವೇಗೌಡ ಅವರು ಇದಕ್ಕೆ ಒಪ್ಪುತ್ತಾರಾ..? ಜೆಡಿಎಸ್ ಮತ್ತೆ ಬಿಜೆಪಿ ಜೊತೆಗೇನೆ ಕೈಜೋಡಿಸುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಇದೆ.