77 ವರ್ಷಗಳ ಬಳಿಕ ನಾಪಾತ್ತೆಯಾದ ವಿಮಾನ ಹಿಮಾಚಲ ತಪ್ಪಲಿನಲ್ಲಿ ಪತ್ತೆಯಾಗಿದೆ. ಇದು ಎರಡನೇ ಮಹಾಯುದ್ಧದ ವೇಳೆ ನಾಪತ್ತೆಯಾಗಿದ್ದ ವಿಮಾನ ಎಂದೇ ಹೇಳಲಾಗಿದೆ. ಅಂದು ಚೀನಾ ಮತ್ತು ಮಯನ್ಮಾರ್ ನಡುವೆ ನಡೆದ ಯುದ್ಧದಲ್ಲಿ ಅನೇಕ ವಿಮಾನಗಳು ನಾಪತ್ತೆಯಾಗಿದ್ದವು ಎಂದೇ ಹೇಳಲಾಗಿದೆ.

ದಕ್ಷಿಣ ಚೀನಾದ ಕುನ್ಮಿಂಗ್ ನಿಂದ 1945ರಲ್ಲಿ ಸುಮಾರು 13 ಜನರನ್ನ ಈ ವಿಮಾನ ಹೊತ್ತೊಯ್ದಿತ್ತಂತೆ. ಆದ್ರೆ ಅಂದು ಹವಮಾನ ವೈಪರೀತ್ಯದಿಂದಾಗಿ ವಿಮಾನ ಕಣ್ಮರೆಯಾಗಿತ್ತು. ಇದೀಗ ಬರೋಬ್ಬರಿ 77 ವರ್ಷಗಳ ಬಳಿಕ ವಿಮಾನ ಪತ್ತೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಸಾಕಷ್ಟು ಶೋಧನೆಯ ನಂತರ ಸಿ-46 ಹೆಸರಿನ ವಿಮಾನ ಪತ್ತೆಯಾಗಿದೆ. ವಿಮಾನದ ಮೇಲಿದ್ದ ಟೇಲ್ ನಂಬರ್ ಮೇಲೆ ಇದನ್ನ ಪತ್ತೆ ಮಾಡಲಾಗಿದೆ. ಒಟ್ಟಾರೆ 77 ವರ್ಷಗಳ ಬಳಿಕ ಪತ್ತೆಯಾಗಿದ್ದು, ಸಂತಸ ತಂದಿದೆ.
