ಚಿತ್ರದುರ್ಗ ಮೇ. 08 : ವಿಶ್ವ ರೆಡ್‍ಕ್ರಾಸ್ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಿತ್ರದುರ್ಗ ಶಾಖೆ ಹಾಗೂ ಎಸ್.ಜಿ.ಸುರಕ್ಷಾ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಮೇ. 8 ರ ಇಂದು ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಉಪ ವಿಭಾಗಾಧಿಕಾರಿಗಳಾದ ಕಾರ್ತಿಕ್ ರವರು ಉದ್ಘಾಟಿಸಿ ರೆಡ್‍ಕ್ರಾಸ್ ಸಂಸ್ಥೆ ಎನ್ನುವುದು ಸೇವಾ ಮನೋಭಾವ ಸಂಸ್ಥೆಯಾಗಿದೆ. ಇಲ್ಲಿ ಯಾವುದೇ ರೀತಿಯ ಸ್ವಾರ್ಥ ಇಲ್ಲದೆ ಸೇವೆಯನ್ನೇ ಗುರಿಯಾಗಿಸಿಕೊಂಡು ಕಳೆದ 123 ವರ್ಷಗಳಿಂದ ನಿರಂತರವಾಗಿ ಜನರ ಸೇವೆಯನ್ನು ಮಾಡುತ್ತಾ ಬಂದಿದೆ. ರೆಡ್‍ಕ್ರಾಸ್‍ನ ಸದಸ್ಯರು ಸಹಾ ಸಹಾ ಯಾವುದೇ ರೀತಿಯ ಸ್ವಾರ್ಥ ಇಲ್ಲದೆ ಸೇವೆಯನ್ನು ಮಾಡುತ್ತಿದ್ದಾರೆ. ಇವರಿಂದ ಅನೇಕ ಜನರಿಗೆ ಸಹಾಯವಾಗಿದೆ ಇವರ ಸೇವೆ ಹೀಗೇಯೇ ಮುಂದುವರೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಚಿತ್ರದುರ್ಗ ಶಾಖೆಯ ಸಭಾಪತಿಗಳಾದ ಶ್ರೀಮತಿ ಗಾಯತ್ರಿ ಶಿವರಾಂ, ಎಸ್.ಜಿ.ಸುರಕ್ಷಾ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಡಾ.ಸಿದ್ದಲಿಂಗಯ್ಯ ಗುಡೀಮಠ್, ಕಾರ್ಯದರ್ಶಿ ಸಂತೋಷ ಗುಡೀಮಠ್, ಪ್ರಾಂಶುಪಾಲರಾದ ಚಂದ್ರಶೇಖರ್, ಉಪ ಸಭಾಪತಿ ಗಳಾದ ಅರುಣ್ ಕುಮಾರ್, ಕಾರ್ಯದರ್ಶಿ ಮಜಹರ್ ಉಲ್ಲಾ, ನಿರ್ದೇಶಕಾರದ ಕಾರ್ತಿಕ ಶಿವರಾಂ ಗುರುಮೂರ್ತಿ, ಡಾ.ಮಧುಸೂಧನ್ ರೆಡ್ಡಿ ವೀಣಾ ಜಯರಾಂ, ಸುರೇಶ, ಮಹಮ್ಮದ್ ಆಲಿ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ 25ಯೂನಿಟ್‍ಗಿಂತ ಹೆಚ್ಚು ರಕ್ತವನ್ನು ಸಂಗ್ರಹ ಮಾಡಲಾಯಿತು.