Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ವಿಶ್ವಪರಿಸರ ದಿನಾಚರಣೆ : ಮನುಷ್ಯನ ದುರಾಸೆಯಿಂದ ಜೀವನದ ಮೇಲೆ ಪ್ರತಿಕೂಲ ಪರಿಣಾಮ : ರವೀಂದ್ರನಾಥ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಜೂ.05 :  ಮನುಷ್ಯ ಪರಿಸರದ ಒಂದು ಭಾಗ ಮನುಷ್ಯನ ದುರಾಸೆಯಿಂದ ಇಂದು ನಾವು ತಿನ್ನುವಂತಹ ಆಹಾರವು ವಿಷಪೂರಿತವಾಗಿದೆ. ಹೆಚ್ಚು ಹೆಚ್ಚು ಬೆಳೆಯನ್ನು ಬೆಳೆಯಲು ರಾಸಾಯನಿಕಯುಕ್ತ ರಸಗೊಬ್ಬರಗಳನ್ನು ಬಳಸಿ ಬೆಳೆಗಳನ್ನು ಬೆಳೆಯುತ್ತಿದ್ದು, ಇದರಿಂದ ಮಣ್ಣಿನ ನೈಸರ್ಗಿಕ ಫಲವತ್ತತೆ ಕಡಿಮೆಯಾಗಿ ಮಣ್ಣಿನಲ್ಲಿ ರಾಸಾಯನಿಕ ಅಂಶಗಳು ಹೆಚ್ಚುತ್ತಿರುವುದರಿಂದ ಮಾನವ ಜೀವನದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ರವೀಂದ್ರನಾಥ ಹೇಳಿದರು.

ನಗರದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ‌ ಮಾತನಾಡಿದರು.

ಆದ್ದರಿಂದ ಮಣ್ಣಿನ ನೈಸರ್ಗಿಕ ಫಲವತ್ತತೆಯನ್ನು ಕಾಪಾಡುವ ದೃಷ್ಟಿಯಿಂದ ನಮ್ಮ ರೈತರು ಹೆಚ್ಚು ಹೆಚ್ಚು ಸಾವಯವ ಗೊಬ್ಬರಗಳನ್ನು ಬಳಸಿ ಬೆಳೆಗಳನ್ನು ಬೆಳೆಯಬೇಕು. ಪರಿಸರ ನಾಶದಿಂದ ಜಾಗತಿಕ ತಾಪಮಾನವು ಹೆಚ್ಚಳವಾಗಿದ್ದು, ಇದರಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಮನೆಗಳ ಮುಂದೆ ಒಂದು ಗಿಡವನ್ನು ನೆಡುವುದರ ಮುಖಾಂತರ ಜಾಗತಿಕ ತಾಪಮಾನ ಕಡಿಮೆ ಮಾಡಲು ತಾವೆಲ್ಲರೂ ಕೈ ಜೋಡಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಗಿಡಮರಗಳನ್ನು ಬೆಳೆಸುವುದರಿಂದ ಪರಿಸರದಲ್ಲಿ ತಂಪು ವಾತಾವರಣ ನಿರ್ಮಾಣವಾಗುತ್ತದೆ. ವಾತಾವರಣದಲ್ಲಿನ ಕಾರ್ಬನ್ ಡೈಯಾಕ್ಸೈಡ್ ಅನ್ನು ಹೀರಿಕೊಂಡು ಗಿಡಗಳು ಉತ್ತಮವಾದ ಆಮ್ಲಜನಕವನ್ನು ಹೊರಹಾಕುತ್ತವೆ. ಇದರಿಂದ ಮನುಷ್ಯನಿಗೆ ಅನೇಕ ಶ್ವಾಸಕೋಶ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಶಾಲೆಯ ಕಾರ್ಯದರ್ಶಿಗಳಾದ ಡಾ.ಕೆ.ರಾಜೀವಲೋಚನ್ ಅವರು ಮಾತನಾಡುತ್ತಾ ಇಂದು ಮಲೆನಾಡು ತಪ್ಪಲಿನಲ್ಲಿ ಇರುವಂತಹ ಅನೇಕ ದಟ್ಟ ಅರಣ್ಯಗಳು ಇಂದು ಕಣ್ಮರೆಯಾಗುತ್ತಿರುವುದು ವಿಷಾದನೀಯ  ಸಂಗತಿ. ಮನುಷ್ಯ ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಕಾಡಿನಲ್ಲಿರುವ ಅನೇಕ ಬೆಲೆಬಾಳುವಂತಹ ಮರಗಳನ್ನು ಕಡಿದು ನಾಶ ಮಾಡುತ್ತಿರುವುದರಿಂದ ಕಾಡನ್ನೇ ನಂಬಿಕೊಂಡು ಜೀವನ ಸಾಗಿಸುವ ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಇಂದು ಅಪಾಯಕಾರಿ ಘಟ್ಟ ತಲುಪಿವೆ. ಆದ್ದರಿಂದ ‘ಕಾಡನ್ನು ಬೆಳೆಸಿ, ನಾಡನ್ನು ಉಳಿಸಿ’, ‘ಮನೆಗೊಂದು ಮರ ಊರಿಗೊಂದು ವನ’ ಎಂಬಂತೆ ನಾವೆಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿಗಳಾದ ಶ್ರೀ ಹನುಮೇಶ್ ಪದಕಿ, ಶಿಕ್ಷಕವೃಂದದವರು ಹಾಗೂ ಪೋಷಕ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಪಟ್ಟ ಪರಿಸರ ಗೀತೆಯ ನೃತ್ಯ ಕಾರ್ಯಕ್ರಮ ಮನೋಮೋಹಕವಾಗಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಚಲಪತಿ ನಿಧನ

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 :ನಗರದ ತುರುವನೂರು ರಸ್ತೆ ನಿವಾಸಿ, ಶಿಕ್ಷಣ ಇಲಾಖೆ ನಿವೃತ್ತ ನೌಕರ ಚಲಪತಿ (66) ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ವಿಜಯಕರ್ನಾಟಕ ಚಿತ್ರದುರ್ಗ ಜಿಲ್ಲಾ ಪ್ರಸರಾಂಗ

ಮನು ಕುಲದ ಆಯಸ್ಸನ್ನು ಹೆಚ್ಚಿಸಿದ್ದು ವೈದ್ಯರು: ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ

ಮೈಸೂರು ಸೆ 28 : ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.   ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ

ಈ ಬಾರಿಯ ಬಿಗ್ ಬಾಸ್ ಗೆ ಹೋಗ್ತಿದ್ದಾರೆ ಈ ಸ್ಟಾರ್ ಗಳು : ಕನ್ಫರ್ಮ್ ಸುದ್ದಿ ಇದು..!

ಬೆಂಗಳೂರು : ಬಿಗ್ ಬಾಸ್ ಕನ್ನಡ‌ ಸೀಸನ್ 11ಗೆ ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗೋದು ಯಾರು ಎಂಬ ಕುತೂಹಲ ಇಡೀ ಕರ್ನಾಟಕದ ಜನತೆಗೆ ಇದೆ. ಇಂದು ಸಂಜೆ ಅದಕ್ಕೆ ಕೊಂಚ ತೆರೆ

error: Content is protected !!