ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಈ ಯುದ್ಧದಲ್ಲಿ ಸಾಕಷ್ಟು ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಮಕ್ಕಳು ಅನಾಥರಾಗಿದ್ದಾರೆ. ಆದರೂ ಯುದ್ಧ ನಿಲ್ಲುತ್ತಿಲ್ಲ. ಈ ಮಧ್ಯೆ ರಷ್ಯಾ ಸೇನೆ ದಾಳಿಯಲ್ಲಿ ಇಲ್ಲಿವರೆಗೆ 202 ಶಾಲೆಗಳು, 34 ಆಸ್ಪತ್ರೆಗಳು ಧ್ವಂಸಗೊಂಡಿವೆ ಎಂದು ಉಕ್ರೇನ್ ಮಾಹಿತಿ ಹಂಚಿಕೊಂಡಿದೆ.
ವಿಶ್ವ ಬ್ಯಾಂಕ್‌ನಿಂದ ಉಕ್ರೇನ್ ಗೆ 700 ಮಿಲಿಯನ್ ಡಾಲರ್ ನೆರವು ನೀಡಲಾಗಿದೆ. ಅಗತ್ಯ ಸೇವೆಗಾಗಿ ಈ ಸಹಾಯ ಮಾಡಿದೆ ವಿಶ್ವ ಬ್ಯಾಂಕ್. ಈ ಮಧ್ಯೆ ಅಧ್ಯಕ್ಷ ಝೆಲನ್ ಸ್ಕಿ ನಾಪತ್ತೆಯಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಝೆಲೆನ್ ಸ್ಕಿ ಅವರೇ ಪ್ರತಿಕ್ರಿಯೆ ನೀಡಿದ್ದು, ನಾನು ಯಾರಿಗೂ ಹೆದರಲ್ಲ. ಎಲ್ಲಿಯೂ ಹೋಗಿಲ್ಲ. ನಾನು ಕೀವ್ ನಲ್ಲಿಯೇ ಇದ್ದೇನೆ ಎಂದಿದ್ದಾರೆ.
ಇನ್ನು ರಷ್ಯಾ ವಿರುದ್ಧ ಇತರ ರಾಷ್ಟ್ರಗಳ ನಿರ್ಬಂಧ ಮುಂದುವರೆದಿದೆ. ರಷ್ಯಾಗೆ ತೈಲ ಶೋಧನೆ ಉಪಕರಣಗಳ ರಫ್ತಿಗೆ ನಿರ್ಬಂಧ ಹೇರಲಾಗಿದೆ. ಶೋಧನಾ ಉಪಕರಣ ರಫ್ತು ಮಾಡಲ್ಲ ಎಂದು ಜಪಾನ್ ಹೇಳಿದೆ. ಈ ನಡುವೆ ಉಕ್ರೇನ್ ಮೇಲೆ ರಷ್ಯಾ ಯುದ್ಧದ ತೀವ್ರತೆ ಹೆಚ್ಚಿಸಿದೆ.