Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿಂದುಳಿದವರನ್ನು ಪಕ್ಷಕ್ಕೆ ಕರೆತರುವ ಕೆಲಸ ಮಾಡಬೇಕು : ಎಂ.ಕೆ.ತಾಜ್‍ಪೀರ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ  ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಕಾಂಗ್ರೆಸ್ ಪಕ್ಷದ ತ್ಯಾಗ, ಬಲಿದಾನ, ಹಿಂದುಳಿದ ವರ್ಗಗಳಿಗೆ ನೀಡಿರುವ ಯೋಜನೆ ಕೊಡುಗೆಗಳನ್ನು ತಿಳಿಸಿ ಹಿಂದುಳಿದವರನ್ನು ಪಕ್ಷಕ್ಕೆ ಕರೆತರುವ ಕೆಲಸ ಮಾಡಬೇಕೆಂದು ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಸೂಚಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಸ್.ಮಧುಬಂಗಾರಪ್ಪನವರ ಆದೇಶದಂತೆ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಚಿತ್ರದುರ್ಗ ಬ್ಲಾಕ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಚರಣ್‍ಕುಮಾರ್ ಜಿ.ವಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕವಾಗಿರುವ ಮೊಳಕಾಲ್ಮುರು ತಾಲ್ಲೂಕಿನ ಜಿ.ಬಿ.ಪರಮೇಶ್ವರಪ್ಪ, ಆರ್.ಬಸವರಾಜ್ ಹಾಗೂ ಚಿತ್ರದುರ್ಗದ ಫಾರ್ಥರಾಜೇಂದ್ರ ಒಡೆಯರ್ ಇವರುಗಳಿಗೆ ಕಾಂಗ್ರೆಸ್ ಕಚೇರಿಯಲ್ಲಿ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.

ಪಕ್ಷದಲ್ಲಿ ಹುದ್ದೆಗಳನ್ನು ತೆಗೆದುಕೊಂಡು ಸುಮ್ಮನೆ ಕುಳಿತುಕೊಂಡರೆ ಪ್ರಯೋಜನವಿಲ್ಲ. ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಮಾತ್ರ ಪಕ್ಷ ಸಂಘಟನೆಗೊಳಿಸಲು ಸಾಧ್ಯ. ವಿಶ್ವವಿದ್ಯಾನಿಲಯ, ಅಣೆಕಟ್ಟೆಗಳನ್ನು ಕಟ್ಟಿಸಿ ಕೃಷಿಗೆ ಒತ್ತು ನೀಡಿದ್ದು, ಕಾಂಗ್ರೆಸ್. ನಾಲ್ವರು ಹಿಂದುಳಿದವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಏನು ಮಾಡದ ಕೋಮುವಾದಿ ಬಿಜೆಪಿ. ಕಾಂಗ್ರೆಸ್ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತ ಯುವ ಜನಾಂಗವನ್ನು ದಿಕ್ಕು ತಪ್ಪಿಸುತ್ತಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಶಾಸಕರಾಗಿ, ಸಚಿವರಾಗಿ, ಲೋಕಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿಯಾಗಿ ಈಗ ಎ.ಐ.ಸಿ.ಸಿ.ಅಧ್ಯಕ್ಷ ಹುದ್ದೆಯನ್ನ ಅಲಂಕರಿಸಿದ್ದಾರೆಂದರೆ ಕಮ್ಮಿ ಸಾಧನೆಯಲ್ಲ. ಕಾಂಗ್ರೆಸ್‍ನಿಂದ ಮಾತ್ರ ಎಲ್ಲಾ ಜಾತಿ, ಧರ್ಮದವರಿಗೆ ಸಾಮಾಜಿಕ ನ್ಯಾಯ ಸಿಗುವುದು. ಇವನ್ನೆಲ್ಲಾ ನೀವುಗಳು ಜನತೆಗೆ ತಿಳಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಜಾತಿ, ಧರ್ಮದ ಹೆಸರಿನಲ್ಲಿ ಹಿಂದೂ ಮುಸಲ್ಮಾನರನ್ನು ವಿಭಜನೆ ಮಾಡಲು ಬಿಜೆಪಿ.ಹೊರಟಿರುವ ಇಂದಿನ ಸಂದಿಗ್ದ ಪರಿಸ್ಥಿತಿಯಲ್ಲಿ ದೇಶಕ್ಕೆ ಕಾಂಗ್ರೆಸ್ ಪಕ್ಷದ ಅವಶ್ಯಕತೆಯಿರುವುದರಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಶ್ರಮಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ನೂತನ ಪದಾಧಿಕಾರಿಗಳಿಗೆ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ. ಡಬಲ್ ಇಂಜಿನ್ ಸರ್ಕಾರ ಹಿಂದುಳಿದವರನ್ನು ಶೋಷಣೆ ಮಾಡುತ್ತಿದೆ. ನಲವತ್ತು ಪರ್ಸೆಂಟ್ ಕಮೀಷನ್ ಸರ್ಕಾರದ ನಡೆಯಿಂದ ಜನ ಬೇಸತ್ತಿದ್ದು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ಹಿಂದುಳಿದ ವಿಭಾಗಕ್ಕೆ ನೇಮಕಗೊಂಡಿರುವ ನೀವುಗಳು ಜಿಲ್ಲೆಯಾದ್ಯಂತ ಹಿಂದುಳಿದವರನ್ನು ಸಂಘಟಿಸುವಂತೆ ತಿಳಿಸಿದರು.

ಕಾಂಗ್ರೆಸ್ ಮುಖಂಡ ರಾಂಪುರದ ಮಂಜುನಾಥ್, ಗುರುರಾಜ್, ಸಂದೀಪ್ ಈ ಸಂದರ್ಭದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ : ಕ್ಷೇತ್ರವಾರು ಮಾಹಿತಿ…!

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 :   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌. ವಿಧಾನ ಸಭಾ ಕ್ಷೇತ್ರವಾರು ಮತಾದನ ವಿವರ ಚಳ್ಳಕೆರೆ – 72.19%, ಚಿತ್ರದುರ್ಗ-70.42%, ಹಿರಿಯೂರು-71.49% ,

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ

error: Content is protected !!