Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಮಕ್ಕಳನ್ನು ಉತ್ತಮ ಕ್ರೀಡಾಪಟುವನ್ನಾಗಿಸಲು ಶ್ರಮವಹಿಸಿ : ಎನ್.ಡಿ.ಕುಮಾರ್

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಆ. 09 : ಇಂದಿನ ದಿನಮಾನದಲ್ಲಿ ಪೋಷಕರು ನಮ್ಮ ಮಕ್ಕಳನ್ನು ಅಂಕಗಳಿಸುವ ಯಂತ್ರಗಳನ್ನಾಗಿ ಮಾಡುವಲ್ಲಿ ಮುಂದಾಗಿದ್ದಾರೆ. ಆದರೆ ಅವರನ್ನು ಉತ್ತಮ ಕ್ರೀಡಾಪಟುವನ್ನಾಗಿಸಲು ಶ್ರಮ ಹಾಕುವುದಿಲ್ಲ ಎಂದು ಅಂತರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಹಾಗೂ ರಾಷ್ಟ್ರೀಯ ತೀರ್ಪುಗಾರರಾದ ಎನ್.ಡಿ.ಕುಮಾರ್ ವಿಷಾಧಿಸಿದ್ದಾರೆ.

ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ವಿಜ್ಞಾನ ಕಾಲೇಜು, ದಾವಣಗೆರೆ ವಿಶ್ವ ವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಕಾಲೇಜಿನ ದೈಹಿಕ ಶಿಕ್ಷಣ ಮತು ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ದಾವಣಗೆರೆ ವಿಶ್ವ ವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ಹಾಗೂ ಮಹಿಳೆಯರ ವೇಟ್‍ಲಿಫ್ಟಿಂಗ್ ಪವರ್‍ಲಿಫ್ಟಿಂಗ್ ಮತ್ತು ಪುರುಷರ ದೇಹರ್ದಾಢ್ಯ ಸ್ಫರ್ದೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ತೀರ್ಪುಗಾರನಾಗಿ ಭಾಗವಹಿಸಿ ಮಾತನಾಡಿದ ಅವರು. ಇಂದಿನ ದಿನಮಾನದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚಿನ ಅಂಕಗಳನ್ನು ಗಳಿಸುವಂತೆ ಪ್ರೇರೇಪಿಸುತ್ತಾರೆ ಹೊರೆತು ಒಳ್ಳೆಯ ಕ್ರೀಡಾಪಟುವಾಗು ಎಂದು ಯಾರೂ ಸಹಾ ಬಯಸುವುದಿಲ್ಲ, ಎಂದ ಅವರು ಪ್ರತಿ ವರ್ಷ ಇಂಜಿನಿಯರಿಂಗ್, ದಂತ ಹಾಗೂ ಮೆಡಿಕಲ್ ಕಾಲೇಜು ಗಳಿಂದ ಸಾವಿರಾರು ಮಕ್ಕಳು ಕಲಿತು ಹೊರಗಡೆ ಬರುತ್ತಾರೆ ನಂತರ ಕಂಪನಿಗಳಲ್ಲಿ ಕೆಲಸಕ್ಕೆ ಸೇರುತ್ತಾರೆ ಉತ್ತಮವಾದ ವೇತನವನ್ನು ಪಡೆಯುತ್ತಾರೆ ಜೀವನ ನಿರ್ವಹಣೆ ಮಾಡುತ್ತಾರೆ ಅವರ ಸಾಧನೆ ಅಷ್ಠೇ ಮುಂದುವರೆಯುವುದಿಲ್ಲ ಆದರೆ ಕ್ರೀಡಾಪಟು ಆದರೆ ಆತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗುತ್ತಾನೆ, ಸಾಧನೆಯನ್ನು ಮಾಡಿ ಪದಕಗಳನ್ನು ಗಳಿಸುತ್ತಾನೆ ಇದು ಒಬ್ಬ ಕ್ರೀಡಾಪಟುವಿನ ಸಾದನೆಯಾಗಿದೆ ಎಂದರು.

 

ಉತ್ತಮ ಕ್ರೀಡಾಪಟುವಾಗಲು ಉತ್ತಮವಾದ ಸಾಧನೆ ಇರಬೇಕಿದೆ. ಯಾವುದೇ ಪಂದ್ಯಾವಳಿ, ಕ್ರೀಡಾಕೂಟ ಇದ್ದಾಗ ಮಾತ್ರ 3-5 ತಿಂಗಳು ಮಾತ್ರ ಸಾಧನೆ ಮಾಡುವುದು ಅಲ್ಲ ಸಾಧನೆ ನಿರಂತರವಾಗಿ ಇರಬೇಕಿದೆ ಆಗ ಮಾತ್ರ ಇಂತಹ ಪಂದ್ಯಾವಳಿಯಲ್ಲಿ ಗೆಲ್ಲಲು ಸಾಧ್ಯವಿದೆ.  ಸಾಧನೆಯ ಸಮಯದಲ್ಲಿ ಬೆವರು ರಕ್ತವನ್ನು ಹರಿಸಿದಾಗ ಮಾತ್ರ ಮುಂದೆ ಪದಕಗಳನ್ನು ಗಳಿಸಲು ಸಾಧ್ಯವಿದೆ ಕ್ರೀಡಾಪಟುವಾದವರು ಯಾವುದೇ ಸಮಯ ದಲ್ಲಿಯೂ ಸಹಾ ಮಾದಕ ವಸ್ತುಗಳ ದಾಸರಾಗಬೇಡಿ ಇದರಿಂದ ನಿಮ್ಮ ದೇಹಕ್ಕೆ ಯಾವುದೇ ಅನುಕೂಲ ಇಲ್ಲ ಆನಾನುಕೂಲ ಹೆಚ್ಚಾಗಿದೆ. ಇದರಿಂದ ನಿಮ್ಮ ಆಯಸ್ಸು ಸಹಾ ಕಡಿಮೆಯಾಗುತ್ತದೆ ನಮ್ಮ ಪುರಾತನ ಪದ್ದತಿಯಂತೆ ಅಭ್ಯಾಸವನ್ನು ಮಾಡುವುದರಿಂದ ನಮ್ಮ ಆಯಸ್ಸು ವೃದ್ದಿಯಾಗುತ್ತದೆ ಎಂದು ಎನ್.ಡಿ.ಕುಮಾರ್ ತಿಳಿಸಿದರು.

2025-26ನೇ ಶೈಕ್ಷಣಿಕ ಸಾಲಿನ ದಾವಣಗೆರೆ ವಿಶ್ವ ವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ಹಾಗೂ ಮಹಿಳೆಯರ ವೇಟ್‍ಲಿಫ್ಟಿಂಗ್ ಪವರ್‍ಲಿಫ್ಟಿಂಗ್ ಮತ್ತು ಪುರುಷರ ದೇಹರ್ದಾಢ್ಯ ಸ್ಫರ್ದೆಗಳ ಉದ್ಘಾಟನೆಯನ್ನು ನಡೆಸಿದ ಗ್ಯಾರೇಂಟಿ ಯೋಜನೆಯ ಜಿಲ್ಲಾಧ್ಯಕ್ಷರಾದ ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಪಡೆಯಬಹುದಾಗಿದೆ, ಉತ್ತಮ ಕ್ರೀಡಾಪಟುವಾದರೆ ಈ ಸೌಲಭ್ಯವನ್ನು ಪಡೆಯಲು ಸಾಧ್ಯವಿದೆ, ಸರ್ಕಾರ ಈ ರೀತಿಯಾದ ಕ್ರೀಡಾಕೂಟವನ್ನು ನಡೆಸುತ್ತಿದೆ ಅದರ ಪ್ರಯೋಜನವನ್ನು ಎಲ್ಲರು ಪಡೆಯಬೇಕಿದೆ,  ಪಠ್ಯದಷ್ಟೇ ಕ್ರೀಡೆಗೂ ಸಹಾ ಮಾನ್ಯತೆಯನ್ನು ನೀಡಬೇಕಿದೆ ಆಗ ಬುದ್ದಿ, ಮಾನಸಿಕ ಹಾಗೂ ದೈಹಿಕವಾಗಿ ಬೆಳೆಯಲು ಸಾಧ್ಯವಿದೆ. ಒಬ್ಬ ಮನುಷ್ಯ ಸದೃಢವಾಗಿರಲು ಕ್ರೀಡೆ ಸಹಕಾರಿಯಾಗಿದೆ. ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿಯನ್ನು ಮೂಡಿಸಬೇಕಿದೆ ಓದಿನಲ್ಲಿ ಸ್ವಲ್ಪ ಹಿಂದೆ ಇದ್ದರೂ ಸಹಾ ಕ್ರೀಡೆಯಲ್ಲಿ ಮುಂದೆ ಇದ್ದರೆ ಸರ್ಕಾರಿ ನೌಕರಿಯನ್ನು ಪಡೆಯಲು ಕ್ರೀಡೆ ಸಹಕಾರಿಯಾಗಲಿದೆ ಎಂದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ರವಿಕಾಂತ್ ವಹಿಸಿದ್ದರು. ಸಮಾರಂಭದಲ್ಲಿ ಗ್ಯಾರೆಂಟಿ ಯೋಜನೆಯ ಉಪಾಧ್ಯಕ್ಷರಾದ ಮೈಲಾರಪ್ಪ, ರಾಷ್ಟ್ರೀಯ ಪವರ್ ಲಿಫ್ಟಿಂಗ್ ತರಬೇತುದಾರರಾದ ಕೆ.ಕುಮಾರ್, ಶಂಕ್ರಪ್ಪ, ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ್, ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆಯ ಉಪಾಧ್ಯಕ್ಷರಾದ ಬಸವರಾಜು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಂಕರಪ್ಪ, ಹನುಮಂತಪ್ಪ, ರೇಖಾ, ದೇವೇಂದ್ರಪ್ಪ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಘವೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ಪಂದ್ಯಾವಳಿಯಲ್ಲಿ ದಾವಣಗೆರೆ ವಿಶ್ವ ವಿದ್ಯಾನಿಲಯದ 40 ಕಾಲೇಜುಗಳಿಂದ ಸುಮಾರು 250 ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳು ಸ್ಪರ್ದೆಯಲ್ಲಿ ಭಾಗವಹಿಸಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...