ಬೆಂಗಳೂರು: ಮಹಿಳಾ ಮೀಸಲಾತಿ ಬಿಲ್ ಅನುಮೋದನೆ ಸಾಧ್ಯವಾಗಿಲ್ಲ. ಹಿನ್ನೆಲೆ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಅಲ್ಲಿಂದ ಮಹಿಳೆಯರೆಲ್ಲ ಹೊರಗೆ ಬನ್ನಿ ಎಂಬ ಮಾತನ್ನು ಹೇಳ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಮಾತನ್ನಾಡಿದ್ದಾರೆ. ನಾವೂ ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ ಎಂದಿದ್ದಾರೆ.
2023ರಲ್ಲಿಯೇ ಆ ಬಿಲ್ ಪಾರ್ಲಿಮೆಂಟ್ ನಲ್ಲಿ ಪಾಸಾಗಿದೆ. ಅವರು ಇಂಪ್ಲಿಮೆಂಟ್ ಮಾಡಬೇಕು ಅಷ್ಟೇ. ಇಂಪ್ಲಿಮೆಂಟ್ ಮಾಡಲಿ. ಕಾನ್ಸ್ಟಿಟ್ಯೂಷನ್ ಅಮೆಡ್ಮೆಂಟ್ ತಂದಿದ್ದಕ್ಕೆ ಬಿದ್ದೋಯ್ತು. ಮಹಿಳಾ ಮೀಸಲಾತಿ ಒಂದೇ ಮಾಡಿದ್ರೆ ಲಿಮಿಟೇಷನ್ ಮಾಡದೆ, ಮಿಕ್ಸ್ ಮಾಡಿ ಮಾಡುದ್ರು ಅದಕ್ಕೆ ಬಿದ್ದೋಯ್ತು. ಇದೆಲ್ಲಾ ರಾಜಕಾರಣ ಅಷ್ಟೇ. ಡಿಲಿಮಿಟೇಷನ್ಸ್ ಮತ್ತು ಮಹಿಳಾ ಮೀಸಲಾತಿ ಎರಡನ್ನು ಒಟ್ಟಿಗೆ ತೆಗೆದುಕೊಂಡು ಬಂದಿದ್ದರು. ನಾವೂ ವಿರೋಧ ಮಾಡ್ತಾ ಇರೋದು ಕೇವಲ ಡಿ ಲಿಮಿಟೇಷನ್ಸ್ ಬಗ್ಗೆ. ನಾವೂ ಮಹಿಳಾ ಮೀಸಲಾತಿಯನ್ನ ವಿರೋಧಿಸ್ತಾ ಇಲ್ಲ ಎಂದಿದ್ದಾರೆ.
ಇತ್ತೀಚೆಗೆ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ರಾಜಣ್ಣ ಅವರು ಕೂಡ ಗುರುತಿಸಿಕೊಂಡಿದ್ದಾರೆ. ಆದರೆ ಸರ್ಕಾರದ ವಿರುದ್ಧ ಮಾತನ್ನಾಡಿದರು ಎಂಬ ಕಾರಣಕ್ಕೆ ಅವರನ್ನ ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ. ಈಗ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದವರನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಮಾತು ಇದೆ. ಇದಕ್ಕೆ ರಾಜಣ್ಣ ಅವರು, ಸಿಎಂ ಅವರ ಆಪ್ತರ ಪರವಾಗಿ ನಿಲ್ಲಬೇಕು. ಆದರೆ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಎಂಬ ಮಾತನ್ನ ಹೇಳಿದ್ದರು. ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ರಾಜಣ್ಣನ್ನ ನಿನ್ನೆನೆ ಕರೆದು ಮಾತನ್ನಾಡಿದ್ದೀನಿ ಎಂದಿದ್ದಾರೆ.









