ಮಾ.13 ರಂದು ಮಹಿಳಾ ಸಮಾವೇಶ : ಶ್ರೀಮತಿ ನಾಗರತ್ನ ಭದ್ರಿನಾಥ್

1 Min Read

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಮಹಿಳಾ ಸಮನ್ವಯ ವೇದಿಕೆ ವತಿಯಿಂದ ಮಾ.13 ರಂದು ಬೆಳಿಗ್ಗೆ 11 ಕ್ಕೆ ತ.ರಾ.ಸು. ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶವನ್ನು ನಡೆಸಲಾಗುವುದೆಂದು ನಾಗರತ್ನ ಭದ್ರಿನಾಥ್ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಿಳೆಯರ ಜೀವನಕ್ಕೆ ಸ್ಪೂರ್ತಿ ತುಂಬುವ ಉದ್ದೇಶದಿಂದ ಹಮ್ಮಿಕೊಂಡಿರುವ ಜಿಲ್ಲಾ ಮಹಿಳಾ ಸಮಾವೇಶದಲ್ಲಿ ಜಿಲ್ಲೆಯ ಮೂವತ್ತಕ್ಕೂ ಹೆಚ್ಚು ಸಂಘಟನೆಗಳು ಕೈಜೋಡಿಸಲಿವೆ.

ಗುಡಿ ಕೈಗಾರಿಕೆಗಳಲ್ಲಿ ತೊಡಗಿರುವ ಹೆಣ್ಣು ಮಕ್ಕಳನ್ನು ಒಟ್ಟುಗೂಡಿಸಿ ಸ್ವಾವಲಂಭಿಗಳಾಗಿ ಬದುಕುವುದಕ್ಕೆ ಪ್ರೋತ್ಸಾಹಿಸಲಾಗುವುದು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಹೆಣ್ಣು ಮಕ್ಕಳ ಸ್ಲೆಡ್ಜ್ ಗಳನ್ನು ಪ್ರದರ್ಶಿಸಲಾಗುವುದು. ಅಕ್ಷಯ್ ಗೋಕಲೆ ಹಾಗೂ ತೇಜಸ್ವಿ ಅನಂತಕುಮಾರ್ ಇವರುಗಳು ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಹೇಳಿದರು.

ಗಾಯತ್ರಿ ಶಿವರಾಂ, ವೀಣಸ್ವಾಮಿ, ರಾಜೇಶ್ವರಿ ಸಿದ್ದರಾಂ, ಜಯಶ್ರಿಷಾ, ಸುಜಾತ ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *