Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಖಾಸಗಿ ಬಸ್, ಪ್ಯಾಸೆಂಜರ್ ಆಟೋಗಳ ಮೊರೆ ಹೋಗದ ಮಹಿಳೆಯರು.!

Facebook
Twitter
Telegram
WhatsApp

 

* ಆಧಾರ್ ಕಾರ್ಡ್ ಹೀಡುಕೊಂಡು ಸರಕಾರಿ ಬಸ್ ಗಾಗಿ ತಾಸು ಗಟ್ಟಲೆ ಕಾದು ಕುಳಿತುಕೊಳ್ಳುತ್ತಿರುವ ಮಹಿಳೆಯರು.

ಕುರುಗೋಡು. ಜೂ.12

ಕಾಂಗ್ರೆಸ್ ಸರಕಾರ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ಬಸ್ ಪ್ರಯಾಣವು ಅಧಿಕೃತವಾಗಿ ಘೋಷಣೆಯಾಗಿದ್ದು, ಇದರಿಂದ ಖಾಸಗಿ ಬಸ್ ಮತ್ತು ಟಾಟಾ ಎಸಿ ಪ್ಯಾಸೆಂಜರ್ ವಾಹನಗಳ ಮಾಲೀಕರಿಗೆ ಬಿಸಿ ತಟ್ಟಿದೆ.

ಹೌದು ಸುಮಾರು ವರ್ಷಗಳಿಂದ ಖಾಸಗಿ ಬಸ್ ಗಳು ಹಾಗೂ ಟಾಟಾ ಎಸಿ ಪ್ಯಾಸೆಂಜರ್ ವಾಹನಗಳನ್ನು ಓಡಾಡಿಸುತ್ತಾ ಇದೆ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತಿದ್ದ ವಾಹನಗಳ ಮಾಲೀಕರ ಬದುಕು ಸದ್ಯ ಅಡ್ಡಕತ್ರಿಯಲ್ಲಿ ಸಿಲುಕಿಕೊಂಡಂತಾಗಿದೆ.

ಈಗಾಗಲೇ ಸರಕಾರ ಜೂ 11 ರಂದು ರಾಜ್ಯದ ಮಹಿಳೆಯರಿಗೆ ಉಚಿತ ವಾಗಿ ಪ್ರಯಾಣ ಮಾಡಲು ಗ್ರೀನ್ ಸಿಂಗಲ್ ದೊರಕಿದ ಬೆನ್ನಲೇ ಮಹಿಳೆಯರು ಖಾಸಗಿ ಬಸ್ ಗಳಿಗೆ ಹಾಗೂ ಟಾಟಾ ಎಸಿಗಳಿಗೆ ಹೋಗಲು ನಿರಾಕರಿಸುತ್ತಿದ್ದಾರೆ. ಮಹಿಳೆಯರು ತಮ್ಮ ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದುಕೊಂಡು ಸರಕಾರಿ ಬಸ್ ಗಳು ಬರುವವರಿಗೆ ತಾಸು ಗಟ್ಟೆಲೆ ಕಾದು ಕುಳಿತುಕೊಂಡು ಅದರಲ್ಲೇ ಪ್ರಯಾಣ ಮಾಡುತ್ತಿದ್ದಾರೆ ಆದ್ರೂ ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡಲು ಮುಂದಾಗುತ್ತಿಲ್ಲ ಇದರಿಂದ ಖಾಸಗಿ ವಾಹನಗಳ ಮಾಲೀಕರ ಮೈ ಮೇಲೆ ಬರೆ ಬಿದ್ದಂತಾಗಿ.

ಬಸ್ ಗಳಿಗಾಗಿ ಕಾದು ಕುಳಿತುಕೊಳ್ಳುವ ಮಹಿಳೆಯರು ಕೇವಲ ನಗರ, ಪಟ್ಟಣಗಳಲ್ಲಿ ಅಲ್ಲದೆ ಗ್ರಾಮೀಣ ಭಾಗದಲ್ಲಿ ಕೂಡ ಇಂತಹ ಪರಿಸ್ಥಿತಿ ಉಲ್ಬಾಣಗೊಂಡಿದೆ.

ಮುಷ್ಟಗಟ್ಟೆ, ವೀರಾಪುರ, ಎಮ್ಮಿಗನೂರು, ಕಲ್ಲುಕಂಬ ಸೇರಿದಂತೆ ಅನೇಕ ಗ್ರಾಮೀಣ ಭಾಗದಲ್ಲಿ ಓಡಾಡುವ ಖಾಸಗಿ ವಾಹನಗಳ ಸ್ಥಿತಿ ಅದೋಗತಿಗೆ ತಲುಪಿದೆ.

ಖಾಸಗಿ ವಾಹನಗಳು ಕುರುಗೋಡು ಟು ಬಳ್ಳಾರಿ ಹಾಗೂ ಕುರುಗೋಡು ಟು ಕಂಪ್ಲಿ ಮಾರ್ಗಕ್ಕೆ ನಿತ್ಯ 3 ರಿಂದ 4 ಬಾರಿ ಓಡಾಡಿ 1000 ರಿಂದ 1500 ವರೆಗೆ ದುಡಿಯುತ್ತಿದ್ದು, ಸದ್ಯ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸಿಕ್ಕಾ ಕಾರಣಕ್ಕಾಗಿ ಸರಿಯಾಗಿ ವಾಹನಗಳು ಓಡಾಡಲು ಆಗುತ್ತಿಲ್ಲ ಪರಿಣಾಮ ಖಾಸಗಿ ವಾಹನಗಳ ಮಾಲೀಕರ ಸ್ಥಿತಿ ಸದ್ಯ ಚಿಂತಾಜನಕ ವಾಗಿದೆ.

ಇದರಿಂದ ಖಾಸಗಿ ವಾಹನಗಳ ಮಾಲೀಕರು ಸರಕಾರ ಯಾವುದೇ ಯೋಜನೆ ಜಾರಿಗೆ ಮಾಡಲಿ ಆದ್ರೆ ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ ನೀಡಬಾರದಿತ್ತು ಎಂದು ಸರಕಾರದ ವಿರುದ್ಧ ಕಿಡಿ ಕಾರುತಿದ್ದಾರೆ.

ಪೈನಾನ್ಸ್ ಮೂಲಕ ಖಾಸಗಿ ವಾಹನಗಳನ್ನು ಖರೀದಿ ಮಾಡಿ ಸಣ್ಣ ಪುಟ್ಟ ಜೀವನ ಸಾಗಿಸುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಚಿಟಿ ಕಟ್ಟುವುದು, ಸಂಸಾರ ನಿರ್ವಹಣೆ ತೂಗಿಸುತಿದ್ದ ವಾಹನಗಳ ಮಾಲೀಕರಿಗೆ ಸದ್ಯ ಸಂಕಷ್ಟ ಎದುರಾಗಿದ್ದು, ಇನ್ಮೇಲೆ ಜೀವನ ನಿರ್ವಹಣೆ ಮಾಡುವುದು ಹೇಗೆ ಅಂತ ಚಿಂತೆಗೆ ಹಿಡಾಗಿದ್ದಾರೆ.

ಬ್ಯಾಂಕ್ ನಲ್ಲಿ ಸಾಲ ಸುಲ ಮಾಡಿ ಖಾಸಗಿ ವಾಹನಗಳನ್ನು ಖರೀದಿ ಮಾಡಿ ಅವುಗಳನ್ನು ಓಡಾಡಿಸುತ್ತಾ ಅದರಿಂದ ಬರುವ ಹಣದಿಂದ ಸಣ್ಣ ಪುಟ್ಟ ಜೀವನ ಸಾಗಿಸಿ ಸಾಲ ಕಟ್ಟುತಿದ್ದ ಮಾಲೀಕರಿಗೆ ಇದರಿಂದ ಜೀವನ ನಿರ್ವಹಣೆಗೆ ಕಷ್ಟಕರ ವಾಗಿದೆ.

ಕುಟುಂಬಗಳಲ್ಲಿ ಅತಿಹೆಚ್ಚು ಹೊರಗಡೆ ಸಂಚಾರಿಸುವುದು ಮತ್ತು ಜವಾಬ್ದಾರಿ ಯನ್ನು ಹೊತ್ತುಕೊಂಡು ಸಂತೆಗೆ, ಸಾಮಾನುಗಳನ್ನು ಖರೀದಿ ಮಾಡಲು ಸೇರಿದಂತೆ ಇತರೆ ಚಟುವಟಿಕೆಗಳಿಗೆ ಬರುವುದು ಮಹಿಳೆಯರು ಅಂತದ್ರಲ್ಲಿ ಅವರಿಗೆ ಸರಕಾರ ಉಚಿತ ಪ್ರಯಾಣ ಮಾಡಲು ಅವಕಾಶ ಕೊಟ್ಟಿರುವುದರಿಂದ ಖಾಸಗಿ ವಾಹನಗಳ ಕಳೆ ಕಳಚಿ ಬಿದ್ದಂತಾಗಿದೆ ಇನ್ನೂ ವಿದ್ಯಾರ್ಥಿಗಳು ಸರಿಯಾಗಿ ಬಸ್ ಗಳು ಬರದೆ ಇರುವ ಸಂದರ್ಭದಲ್ಲಿ ಖಾಸಗಿ ವಾಹನಗಳಲ್ಲಿ ದುಡ್ಡು ಕೊಟ್ಟು ಪ್ರಯಾಣ ಮಾಡುತಿದ್ರು ಇನ್ಮೇಲೆ ಅದು ಕೂಡ ಇಲ್ಲದಂತಾಗಿದ್ದು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಪೈನಾನ್ಸ್ ಮೇಲೆ ಲೋನ್ ತೆಗೆದುಕೊಂಡು ಟಾಟಾ ಎಸಿ ಪ್ಯಾಸೆಂಜರ್ ವಾಹನಗಳನ್ನು ಖರೀದಿ ಮಾಡಿ ಒಂದುರಿಂದ ಇನ್ನೊಂದುರಿಗೆ ಓಡಾಡಿಸುತ್ತಾ ಅದರಿಂದ ಕುಟುಂಬ ನಿರ್ವಹಣೆ ಮಾಡುವುದರ ಜೊತೆಗೆ ಅದರಿಂದ ಬರುವ ಹಣದಿಂದ ಮಕ್ಕಳ ಶಿಕ್ಷಣಕ್ಕೆ ಹಾಗೂ ಸಣ್ಣ ಪುಟ್ಟ ಸಾಲ ತೀರಿಸುತಿದ್ವಿ ಇವಾಗ ಮಹಿಳೆಯರು ನಮ್ಮ ವಾಹನಗಳ ಅತ್ತಿರ ಬರುತ್ತಿಲ್ಲ ಇನ್ಮೇಲೆ ನಮ್ಮ ಜೀವನ ಹೇಗೆ ಎಂಬಂತಾಗಿದೆ ಎಂದು ಶ್ರೀಹರಿ ಮಣ್ಣೂರು, ಆಟೋ ಚಾಲಕ ಹೇಳಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!