ಮಹಿಳೆಯರು ಕೇವಲ ಕುಟುಂಬಕ್ಕೆ ಸೀಮಿತವಾಗಿರದೆ ಕೌಶಲ್ಯಾಭಿವೃದ್ಧಿಗೆ ಯತ್ನಿಸಿ : ಶ್ರೀಮತಿ ಪ್ರೇಮಾವತಿ ಮನಗೊಳಿ

1 Min Read

ಸುದ್ದಿಒನ್, ಚಿತ್ರದುರ್ಗ, (ಡಿ.08) : ಮಹಿಳೆಯರು ಕೇವಲ ಕುಟುಂಬಕ್ಕೆ ಸೀಮಿತವಾಗಿರದೆ ಕೌಶಲ್ಯಾಭಿವೃದ್ಧಿಗೊಳಿಸಿಕೊಳ್ಳಲು ಯತ್ನಿಸಬೇಕು.  ತಮ್ಮ ಕೌಶಲ್ಯಗಳನ್ನು ಉಪಯೋಗಿಸಿ, ಸ್ವಉದ್ಯೋಗವನ್ನು ಮಾಡಿ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಲು ಗಮನ ಹರಿಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪ್ರೇಮಾವತಿ ಮನಗೊಳಿ ಹೇಳಿದರು.

ನಗರದ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ನಿರುದ್ಯೋಗಿ ಯುವತಿಯರಿಗಾಗಿ ಉದ್ಯಮಶೀಲತಾಭಿವೃದ್ಧಿಯಲ್ಲಿ ಮಹಿಳೆಯರ ಟೈಲರಿಂಗ್ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಮಹಿಳೆಯರು ಯಾರೊಬ್ಬರ ಮೇಲೂ ಅವಲಂಬಿಗಳಾಗದೆ, ಮಹಿಳೆಯರು ಸ್ವಾವಲಂಬಿಗಳಾಗಬೇಕು. ಈ ಟೈಲರಿಂಗ್ ಉದ್ಯೋಗ ಒಂದು ಸಾರ್ವತ್ರಿಕ ಉದ್ಯಮ, ಮನೆಯಲ್ಲಿ ಒಂದು ಚಿಕ್ಕದಾಗಿ ಉದ್ಯಮವನ್ನು ಆರಂಭ ಮಾಡಿದರೂ ಮನೆಯನ್ನು ನಡೆಸುವಷ್ಟು ಆದಾಯ ಗಳಿಸಬಹುದು.

ಈ ಉದ್ಯಮದಲ್ಲಿ ಸಮಯಪಾಲನೆ ಮತ್ತು ಬದ್ಧತೆಯೊಂದಿಗೆ ಆಧುನಿಕ ಜೀವನ ಶೈಲಿಗನುಗುಣವಾಗಿ ನಿಮ್ಮ ಉದ್ಯಮದಲ್ಲಿ ನೂತನ ವಿನ್ಯಾಸಗಳನ್ನು ಅಳವಡಿಸಿಕೊಂಡಾಗ ತಾಂತ್ರಿಕವಾಗಿ ಬದಲಾಗುತ್ತಿರುವ ಉದ್ಯಮದಲ್ಲಿ ಮುಂದುವರಿಯಲು ಸಾದ್ಯವಾಗುತ್ತದೆ.

ಸಕಾರಾತ್ಮಕ ಮನೋಭಾವದೊಂದಿಗಿನ ಕೆಲಸ ಮತ್ತು ನಗು ಮುಖದ ಸೇವೆ ಇವು ಯಶಸ್ವಿ ಉದ್ಯೋಗಿಗಳ ಗುಟ್ಟು ಎಂದು ತಿಳಿಸುತ್ತಾ ಮಾಡುವ ವೃತ್ತಿಯನ್ನು ಪ್ರೀತಿಯಿಂದ ಹಾಗೂ ಶ್ರದ್ಧೆಯಿಂದ ಮಾಡಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ರುಡ್‌ಸೆಟ್ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮಂಜುಳಾ.ಜಿ. ರವರು ಮಾತನಾಡಿ, ತರಬೇತಿ ಅವಧಿಯಲ್ಲಿ ಕಲಿತ ಜ್ಞಾನವನ್ನು ಕೆಲಸದಲ್ಲಿ ಅಳವಡಿಸಿಕೊಂಡು ಯಶಸ್ವಿ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ ಶ್ರೀಮತಿ ಶೋಭಾ.ಎಸ್. ಮತ್ತು  ಯೋಗಿಶ್ ಉಪಸ್ಥಿತರಿದ್ದರು.

ಸಂಸ್ಥೆಯ ಉಪನ್ಯಾಸಕರಾದ ತೋಟಪ್ಪ ಎಸ್. ಗಾಣಿಗೇರ, ಕಾರ್ಯಕ್ರಮ ನಿರೂಪಿಸಿದರು.  ಶ್ರೀಮತಿ ಲತಾಮಣಿ ವಂದನಾರ್ಪಣೆ ಮಾಡಿದರು. ಒಟ್ಟು ಕಾರ್ಯಕ್ರಮದಲ್ಲಿ 60 ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *