ಕೊರೊನಾವನ್ನು ಸೃಷ್ಟಿಸಿದ್ದ ಚೀನಾದಲ್ಲಿ ಈಗ ಮತ್ತೆ ಕೊರೊನಾ ಹೆಚ್ಚಾಗುತ್ತಿದೆ. ಕೊರೊನಾ ಹೆಚ್ಚಾದ ಹಿನ್ನೆಲೆ ಅಲ್ಲಿನ ಸರ್ಕಾರ ಜನರ ಜೊತೆ ವರ್ತಿಸುತ್ತಿರುವ ರೀತಿ ಜನರನ್ನು ಉಸಿರುಗಟ್ಟುವಂತೆ ಮಾಡುತ್ತಿದೆ. ಅಲ್ಲಿನ ಕಮ್ಯೂನಿಸ್ಟ್ ಸರ್ಕಾರ ಕೊವೀಡ್ ನೆಪದಲ್ಲಿ ಜನರಿಗೆ ಚಿತ್ರಹಿಂಸೆ ನೀಡುತ್ತಿದೆ ಇದನ್ನು ವಾಯ್ಸ್ ಆಫ್ ಏಪ್ರಿಲ್ ಮತ್ತು ನ್ಯೂಸ್ ಸ್ಕೇವ್ ಆಡಿಯೋ, ವಿಡಿಯೋ ಮಾಡಿ ಹರಿಬಿಡುತ್ತಿದೆ.
ಜನರು ಬೇಡವೆಂದರು ಕೇಳದೆ ಅಲ್ಲಿನ ಸರ್ಕಾರ ಕಂಡ ಕಂಡಲ್ಲಿ ಟೆಸ್ಟ್ ಮಾಡಿ, ಕಂಡ ಕಂಡವರು ಹಿಡಿದು ಕ್ವಾರಂಟೈನ್ ಮಾಡುತ್ತಿದೆ. ಕ್ವಾರಂಟೈನ್ ಸಮಯದಲ್ಲಿ ಸರಿಯಾದ ಆಹಾರ ನೀಡುತ್ತಿಲ್ಲ, ಕುಡಿಯಲು ನೀರು ಇಲ್ಲ, ಔಷಧಿಗಳು ಸಿಗುತ್ತಿಲ್ಲ. ಮಹಿಳೆಯರು ಮಕ್ಕಳು ಎನ್ನದೆ ಒಂದೇ ಕಡೆ ಕೂಡಿ ಹಾಕುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕೊರೊನಾ ಇಲ್ಲದವರಿಗೂ ಕೊರೊನಾ ಬರುವುದು ಗ್ಯಾರಂಟಿ.
ಶಾಂಘೈನಲ್ಲಿ ಸುಮಾರು ಒಂದು ತಿಂಗಳಿನಿಂದ ಲಾಕ್ಡೌನ್ ಮಾಡಲಾಗಿದೆ. ದಿನಸಿ ತರುವುದಕ್ಕೆ ಹೊರಗು ಹೋಗುವ ಹಾಗಿಲ್ಲ. ಮನೆಗಳಿಗೆ ಗಟ್ಟಿ ಕಬ್ಬಿಣವನ್ನು ಹೊಡೆಸಿದ್ದಾರೆ. ಜನ ಹೊರಗೆ ಬಾರದಂತೆ ಬಂದೋಬಸ್ತ್ ಮಾಡಿದ್ದಾರೆ. ಸರ್ಕಾರದ ದೌರ್ಜನ್ಯದ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರಗೀತೆ ಹಾಡುವ ಮೂಲಕ ಚೀನಾ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಗೀತೆ ಮೇಲೆ ಕಮ್ಯುನಿಸ್ಟ್ ಸರ್ಕಾರ ಸೆನ್ಸರ್ ಶಿಪ್ ಹೇರಿದೆ.