ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದು, ಇದೀಗ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ನೋಟೀಸ್ ಜಾರಿ ಮಾಡಿದೆ. ಐದಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳಿಗೆ ನೋಟೀಸ್ ನೀಡಿದೆ.
ಸರ್ಕಾರಿ ಅಧಿಕಾರಿಗಳಿಗೆ ಎಸ್ಐಟಿ ಪೊಲೀಸರು 41A ಅಡಿಯಲ್ಲಿ ನೋಟೀಸ್ ಜಾರಿ ಮಾಡಿದ್ದಾರೆ. ವಿಚಾರಣೆಯಲ್ಲಿ ಈ ವಿಡಿಯೋದಲ್ಲಿ ಇರೋದು ನೀವೇನಾ ಅಂತ ಪ್ರಶ್ನೆ ಮಾಡಲಾಗಿದೆ. ಸಂತ್ರಸ್ತೆಯರು ಒಂದು ವೇಳೆ ವಿಡಿಯೋದಲ್ಲಿರೋದನ್ನು ಒಪ್ಪಿಕೊಂಡರೆ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆ ಆಗುವುದು ಕಟ್ಟಿಟ್ಟ ಬುತ್ತಿ. ಜೊತೆಗೆ ಮಹಿಳಾ ಅಧಿಕಾರಗಳಿಗೂ ಶಿಕ್ಷೆಯಾಗಲಿದೆ.
ಈಗಾಗಲೇ ನಾಲ್ಕು ಜನ ಸಂತ್ರಸ್ತೆಯರು ಎಸ್ಐಟಿ ಕಚೇರಿಯಲ್ಲಿದ್ದು, ಅವರಿಗೆಲ್ಲಾ ಮೆಡಿಕಲ್ ಚೆಕಪ್ ಮಾಡಿಸಲಾಗಿದೆ. ಈಗಾಗಲೇ ಲೈಂಗಿಕ ದೌರ್ಜನ್ಯ ನಡೆದಿರುವುದ ಸಾಬೀತಾಗಿದೆ. ನಾಲ್ಕು ಮಂದಿಯಿಂದ 164 ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಎಸ್ಐಟಿ ವಶದಲ್ಲಿರುವ ನಾಲ್ಕು ಮಹಿಳೆಯರಿಗೆ ರಕ್ಷಣೆ ನೀಡಲಾಗಿದೆ. ಆದರೆ ಮತ್ತಷ್ಟು ಮಂದಿ ಸಂತ್ರಸ್ತೆಯರು ಪೊಲೀಸರನ್ನು ಸಂಪರ್ಕಿಸುವ ಸಾಧ್ಯತೆ ಇದೆ. ದೂರು ನೀಡುವ ಸಾಧ್ಯತೆಯೂ ಇದೆ. ಆದರೆ ಆರೋಪಿಗಳು ಪೊಲೀಸರಿಗೆ ಸಂತ್ರಸ್ತೆಯರು ಸಿಗದಂತೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ. ಎಸ್ಐಟಿ ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಲ್ಲಾ ರೀತಿಯ ರಕ್ಷಣೆಯನ್ನು ಕೊಡುವುದಕ್ಕೆ ಎಸ್ಐಇ ಮುಂದಾಗಿದೆ. ಆದ್ರೆ ಸಂತ್ರಸ್ತೆಯರು ಧೈರ್ಯವಾಗಿ ಬಂದು ದೂರು ನೀಡಬೇಕಾಗಿದೆ.