ಮುಂಬೈ: ಬಾಬಾ ರಾಮ್ ದೇವ್ ಹೆಣ್ಣು ಮಕ್ಕಳ ಉಡುಪಿನ ಬಗ್ಗೆ ಮಾತನಾಡುತ್ತಾ, ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಹೆಣ್ಣು ಮಕ್ಕಳು ಸೀರೆ ಹಾಕಿದರೂ ಚೆನ್ನಾಗಿ ಕಾಣುತ್ತೀರಾ, ಸಲ್ವಾರ್ ಹಾಕಿದರೂ ಚೆನ್ನಾಗಿ ಕಾಣುತ್ತೀರಾ, ಏನನ್ನೂ ಧರಿಸದೆ ಇದ್ದರೂ ಚೆನ್ನಾಗಿ ಕಾಣುತ್ತೀರಾ ಎಂಬ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳೆಯರಿಗಾಗಿಯೇ ಯೋಗ ಗುರು ಬಾಬಾ ರಾಮ್ ದೇವ್, ಯೋಗ ತರಬೇತಿ ನಡೆಸಿದ್ದಾರೆ. ಯೋಗ ತರಬೇತಿಗೆ ಒಂದು ರೀತಿಯ ಡ್ರೆಸ್ ತಂದಿದ್ದ ಮಹಿಳೆಯುರು, ಕಾರ್ಯಕ್ರಮಕ್ಕಾಗಿ ಸೀರೆಯನ್ನು ತಂದಿದ್ದರಂತೆ. ಆದ್ರೆ ಯೋಗ ತರಬೇತಿ ಮುಗಿದ ಕೂಡಲೇ ಕಾರ್ಯಕ್ರಮ ಆರಂಭವಾಗಿದೆ. ಹೀಗಾಗಿ ಯೋಗ ಅಭ್ಯಾಸ ಮಾಡಿಕೊಂಡ ಡ್ರೆಸ್ ನಲ್ಲಿಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಬಾಬಾ ರಾಮ್ ದೇವ್, ಮಹಿಳೆಯರು ಸೀರೆಯಲ್ಲೂ ಚೆನ್ನಾಗಿ ಕಾಣುತ್ತೀರಾ, ಸಲ್ವಾರ್ ಹಾಕಿದರೂ ಚೆನ್ನಾಗಿ ಕಾಣುತ್ತೀರಾ, ನನ್ನ ಪ್ರಕಾರ ಏನು ಧರಿಸದೆ ಇದ್ದರೂ ಚೆನ್ನಾಗಿ ಕಾಣುತ್ತೀರಾ. ಈಗ ಸೀರೆ ಹಾಕಿಕೊಂಡು ಬರುವುದಕ್ಕೆ ಮನೆಗೆ ಹೋದರೆ ಸಮಯ ವ್ಯರ್ಥ ಎಂದಿದ್ದಾರೆ. ಇನ್ನು ಬಾಬಾ ರಾಮ್ ದೇವ್ ಈ ಹೇಳಿಕೆ ನೀಡುವಾಗ ಡಿಸಿಎಂ ದೇವೆಂದ್ರ ಫಡ್ನವಿಸ್ ಪತ್ನಿ ಅಮೃತಾ ಫಡ್ನವೀಸ್ ವೇದಿಕೆಯಲ್ಲಿಯೇ ಇದ್ದರು.