ಮಹಿಳೆಯರೆ ಎಚ್ಚರ : ಚಿತ್ರದುರ್ಗದಲ್ಲಿ ಕಾಂಪೌಂಡ್ ಗೆ ನುಗ್ಗಿ ಚಿನ್ನದ ಸರ ಕದ್ದ ಖದೀಮರು..!

1 Min Read

ಚಿತ್ರದುರ್ಗ: ಚಿನ್ನದ ಸರ ಕದಿಯುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪೊಲೀಸರು ಕೂಡ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ, ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಆದರೂ ಕಳ್ಳರು ಮಾತ್ರ ತಮ್ಮ ಕೈಚಳಕವನ್ನು ತೋರಿಸುತ್ತಲೆ ಇದ್ದಾರೆ. ರಸ್ತೆಯಲ್ಲಿ ಹೋಗುವಾಗ, ಒಂಟಿ ಹೆಂಗಸರನ್ನ ಟಾರ್ಗೆಟ್ ಮಾಡ್ತಿದ್ದ ಸರಗಳ್ಳರು, ಈಗ ಕಾಂಪೌಂಡ್ ಹಾರಿಯೂ ಸರ ಕದ್ದಿದ್ದಾರೆ. ಈ ಘಟನೆ ಚಿತ್ರದುರ್ಗದ ವಿದ್ಯಾನಗರದಲ್ಲಿ ನಡೆದಿದೆ.

ಚಿತ್ರದುರ್ಗದಲ್ಲಿ ಮಹಿಳೆಯ ಚಿನ್ನದ ಸರ ಕದ್ದು ಆರೋಪಿ ಪರಾರಿಯಾಗಿದ್ದಾನೆ. ವಿದ್ಯಾನಗರ ಬಡಾವಣೆಯಲ್ಲಿ ಸರಗಳ್ಳತನವಾಗಿದೆ. ಮನೆಯ ಕಂಪೌಂಡ್ ಒಳಗೆ ನುಗ್ಗಿ ಮಹಿಳೆಯ ಚಿನ್ನದ ಸರಗಳ್ಳತನ ಮಾಡಿದ ಆರೋಪಿ, ಅಲ್ಲಿಂದ ಓಡಿ ಹೋಗಿದ್ದಾನೆ. ಸೌಮ್ಯ ಮಂಜುನಾಥ್ ಕೊರಳಲ್ಲಿದ್ದ ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದಾನೆ.

ಸೌಮ್ಯ ಮಂಜುನಾಥ್ ತಮ್ಮ ಮನೆಯ ಅಂಗಳಕ್ಕೆ ನೀರು ಹಾಕಲೆಂದು ಹೊರಗೆ ಬಂದಿದ್ದರು. ಇದನ್ನು ಗಮನಿಸಿದ್ದ ಖತರ್ನಾಕ್ ಸರಗಳ್ಳ, ಮಾಸ್ಕ್ ಧರಿಸಿ ಬಂದಿದ್ದ. ಆ ಕಡೆ ಈ ಕಡೆ ನೋಡೊ, ಕಾಂಪೌಂಡ್ ಹಾರಿ, ಸರವನ್ನು ಕಿತ್ತುಕೊಂಡು ಓಡಿ ಹೋಗಿದ್ದಾನೆ. ಸೌಮ್ಯ ಧರಿಸಿದ್ದ ಸರ 2.50 ಲಕ್ಷ ಮೌಲ್ಯ ಬೆಲೆಬಾಳುವುದಾಗಿದೆ. 40 ಗ್ರಾಂ ಚಿನ್ನದ‌ ಸರ ಅದಾಗಿದೆ. ಕದ್ದು ಕಳ್ಳ ಪರಾರಿಯಾಗಿದ್ದು, ಸೌಮ್ಯ ಕೂಡ ಗಾಬರಿಯಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ದಿನಕರ್, ಸಿಪಿಐ ತಿಪ್ಪೇಸ್ವಾಮಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದ್ದು, ದೂರು ದಾಖಲಿಸಿಕೊಂಡು ಸರಗಳ್ಳನಿಗಾಗಿ ಹುಡುಕಾಟ ಶುರುವಾಗಿದೆ. ಮನೆಯ ಅಂಗಳದಲ್ಲೂ ಚಿನ್ನ ಸೇಫ್ ಇಲ್ಲ ಅಂದ್ರೆ ಹೆಣ್ಣು ಮಕ್ಕಳು ಇನ್ನೇನು ಮಾಡಬೇಕು. ಆದಷ್ಟು ಎಚ್ಚರದಿಂದ ಇರಲೇಬೇಕಾದ ಅನಿವಾರ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *