ಸುದ್ದಿಒನ್, ಮೈಸೂರು, ಮಾರ್ಚ್. 19 : ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಬೆಳಕು ಗ್ರಾಮೀಣ ಮಹಿಳಾ ಒಕ್ಕೂಟ ಮತ್ತು ಗ್ರಾಮ ಪಂಚಾಯತಿ, ಕೀಳನಪುರ ಇವರ ಸಹಯೋಗದೊಂದಿಗೆ ಇಂದು ಅಂತರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಕೀಳನಪುರ ಗ್ರಾಮದಲ್ಲಿ ನಡೆಸಲಾಯಿತು.

ಪ್ರಾಸ್ತಾವಿಕವಾಗಿ ಶ್ರೀಮತಿ ಸರಸ್ವತಿ ನಿರ್ದೇಶಕರು ಮಾತನಾಡುತ್ತಾ ಸಂಸ್ಥೆಯು ಕಳೆದ 40 ವರ್ಷಗಳಿಂದ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮಹಿಳೆಯರ, ಮಕ್ಕಳ, ಯುವಜನರ ಮತ್ತು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನೇರಳೆ ಬಣ್ಣವು ಮಹತ್ವದ ಬಣ್ಣವಾಗಿದ್ದು, ನ್ಯಾಯ, ಘನತೆ ಮತ್ತು ನಿಷ್ಠೆಯನ್ನು ಸಾಂಕೇತಿಸುತ್ತದೆ ಮತ್ತು ಇದನ್ನು ಮಹಿಳಾ ಹಕ್ಕುಗಳ ಸಂಕೇತವಾಗಿ ಮತ್ತು ಸಮಾನತೆಗಾಗಿ ಹೋರಾಟವನ್ನು ಪ್ರತಿನಿಧಿಸುತ್ತದೆ. ನೇರಳೆ ಬಣ್ಣವನ್ನು ಅಂತರರಾಷ್ಟ್ರೀಯ ಮಹಿಳಾ ದಿನದ ಬಣ್ಣವೆಂದು ವ್ಯಾಪಕವಾಗಿ ಗುರುತಿಸಲಾಗಿದೆ ಮತ್ತು ನೇರಳೆ ಬಣ್ಣವನ್ನು ಧರಿಸುವುದು ಮಹಿಳಾ ಹಕ್ಕುಗಳು ಮತ್ತು ಸಮಾನತೆಯ ಕಾರಣಕ್ಕಾಗಿ ಒಗ್ಗಟ್ಟನ್ನು ತೋರಿಸುವ ಒಂದು ಮಾರ್ಗವಾಗಿದೆ. ನ್ಯಾಯ, ಘನತೆ ಮತ್ತು ನಿಷ್ಟೆಯನ್ನು ಭಾಗವಹಿಸಿರುವ ಎಲ್ಲಾ ಮಹಿಳೆಯರು ಕೈಗೆ ನೇರಳೆ ಬಣ್ಣದ ರಿಬ್ಬನ್ ಕಟ್ಟಿಕೊಂಡು ತೋರಿಸಿದರು.

ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಡಾ. ಪ್ರಸಾದ್ ಕೆ.ಹೆಚ್ ವಿಭಾಗೀಯ ಸಹ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಮೈಸೂರು ವಿಭಾಗ, ಮೈಸೂರು, ಈ ಹಿಂದೆ ಮಹಿಳೆಯರು ಕೇವಲ ಗೃಹ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದರು ಸ್ವಾತಂತ್ರದ ನಂತರ ನಮ್ಮ ಸಂವಿಧಾನವು ಮಹಿಳೆಯರಿಗೆ ಉತ್ತಮವಾದ ಹಕ್ಕು, ಸ್ಥಾನಮಾನವನ್ನು ನೀಡಿದೆ. ಕಾನೂನಿನ ವ್ಯವಸ್ಥೆಯ ಮೂಲಕ ದೌರ್ಜನ್ಯದ ವಿರುದ್ದ ಮಹಿಳೆಯರು ಹೋರಾಡುವುದು ಬಹಳ ಮುಖ್ಯವಾಗಿದ್ದು ಸಂವಿಧಾನದ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಮಹಿಳೆಯರು ಕುಟುಂಬದಲ್ಲಿ ಕೆಲಸ ನಿರ್ವಹಿಸುವುದರೊಂದಿಗೆ ಸಮಾಜದಲ್ಲೂ ಕೆಲಸ ನಿರ್ವಹಿಸಿ, ಮನೆ ಮತ್ತು ಲೋಕದ ದೀಪವನ್ನು ಬೆಳಗಿಸುವ ಶಕ್ತಿಯಾಗಿದ್ದಾರೆ. ಮಹಿಳೆಯರ ಅಭಿವೃದ್ಧಿಗೆ ಬೆಂಬಲ ನೀಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಒದಗಿಸಬೇಕು. ಮಹಿಳೆ ಪ್ರಪಂಚದ ದೊಡ್ಡ ಶಕ್ತಿ. ಮಹಿಳೆಗೆ ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಹಾಗೂ ಇಡೀ ಕುಟುಂಬವನ್ನು ನಿರ್ವಹಿಸುವ ಶಕ್ತಿ ಇದೆ.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮಮತಾ ಯಜಮಾನ್ ಗಮನ ಮಹಿಳಾ ಸಮೂಹ, ಆನೇಕಲ್ ಮಾತನಾಡುತ್ತಾ ಮಹಿಳಾ ಗ್ರಾಮ ಸಭೆ ಮತ್ತು ಅದರ ಮಹತ್ವ, ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿಗಳು, ಒಕ್ಕೂಟವನ್ನು ಮಾಡಿಕೊಳ್ಳಿ ಆ ಮೂಲಕ ನಿಮ್ಮ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು. ಇಂದು ಅಟೋ ರಿಕ್ಷಾದಿಂದ ಅಂತರಿಕ್ಷಾ ತಲುಪುವ ರಾಕೆಟ್ನ್ನು ಉಡಾವಣೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಮಹಿಳೆಯರಲ್ಲಿ ಎಂತಹ ಅಭೂತಪೂರ್ವ ಆತ್ಮವಿಶ್ವಾಸ ಮತ್ತು ಶ್ರದ್ದೆ ಇದೆ ಎಂಬುದನ್ನು ಎತ್ತಿ ತೋರುತ್ತದೆ ಹೆಣ್ಣು ಶಕ್ತಿಯ ಪ್ರತೀಕವಾಗಿದ್ದು, ಯಾರಲ್ಲಿಯೂ ಅವಲಂಬಿತವಾಗದೆ ಸ್ವತಂತ್ರವಾಗಿ, ಆತ್ಮ ವಿಶ್ವಾಸದಿಂದ ಬದುಕುವ ಶಕ್ತಿ ಬೆಳೆಸಿಕೊಳ್ಳಬೇಕು. ಭಯವಿಲ್ಲದೆ ಶೋಷಣೆಯ ವಿರುದ್ಧವಾಗಲಿ, ದೌರ್ಜನ್ಯದ ವಿರುದ್ಧವಾಗಲಿ ದನಿ ಎತ್ತಿ ಎದುರಿಸಬೇಕು ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿದ್ದು, ಮಹಿಳೆಯರು ಯಾವುದಕ್ಕೂ ಎದೆಗುಂದದೆ ಯಾರ ಮೇಲೂ ಅವಲಂಬಿತರಾಗದೆ ಗುರಿ ಇಟ್ಟುಕೊಂಡು ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು ಸಮಾಜದಲ್ಲಿ ಹೆಣ್ಣು ಮಕ್ಕಳೆಂದರೆ ಕೀಳರಿಮೆ ಇದೆ. ಅದನ್ನು ಮೆಟ್ಟಿ ನಿಲ್ಲಲು ಮಹಿಳೆಯರು ಸಿದ್ಧರಿರಬೇಕು. ನಮ್ಮದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು. ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನಕೊಡಬೇಕು. ಜಾಗೃತರಾಗಬೇಕು ಗಟ್ಟಿತನ ಬೆಳೆಸಿಕೊಂಡು ಏನೇ ಕಷ್ಟಬಂದರು ಎದುರಿಸಿ ಮಾನಸಿಕವಾಗಿ ಸದೃಢರಾಗಿ, ಸ್ವಾವಲಂಬಿಗಳಾಗಿ ಬದುಕಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ನಂಜುಂಡಸ್ವಾಮಿ ಅಧ್ಯಕ್ಷರು ಗ್ರಾಮ ಪಂಚಾಯ್ತಿ, ಶ್ರೀ ಮಹದೇವಪ್ಪ ಗ್ರಾಮದ ಮುಖಂಡರು, ಶ್ರೀ ತಿಬ್ಬಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶ್ರೀ ಕೃಷ್ಣ. ಸಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯ್ತಿ ಮೈಸೂರು, ಶ್ರೀ ಮಾಯಪ್ಪ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು, ಡಾ. ಸುರೇಶ್ ವೈಧ್ಯರು, ಶ್ರೀ ಬಿ.ಆರ್. ನಾಗರಾಜ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಪ್ರೋ. ಜೋಸ್ ವಿ.ಕೆ. ಕಾರ್ಯದರ್ಶಿಗಳು ಮೈಸೂರು, ಡಾ. ಶ್ವೇತಾ ಮುಖ್ಯೋಪಧ್ಯಾಯರು, ಮಾಲಂಗಿ ಸುರೇಶ್ ಮುಖ್ಯ ಶಿಕ್ಷಕರು, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮೀಣ ಬಾಗದ ಸುಮಾರು 300 ಕ್ಕೂ ಹೆಚ್ಚಿನ ಮಹಿಳೆಯರು ಬಾಗವಹಿಸಿದ್ದರು.

