ಮಂಡ್ಯ: ಒಂದು ಕಡೆ ಕೊರೊನಾ ಮೂರನೆ ಅಲೆಯ ಆತಂಕ ಹೆಚ್ಚಾಗುತ್ತಿದೆ. ಕೊರೊನಾ ತಡೆಗೆ ವ್ಯಾಕ್ಸಿನ್ ಒಂದೇ ಮಾರ್ಗೋಪಾಯ ಅಂತ ವ್ಯಾಕ್ಸಿನ್ ಬಂದಾಗಿನಿಂದ ಹೇಳಲಾಗುತ್ತಿದೆ. ಆದ್ರೆ ಈಗಲೂ ಜನ ಅದನ್ನ ಅರಿತುಕೊಳ್ಳುತ್ತಿಲ್ಲ. ವ್ಯಾಕ್ಸಿನ್ ಎಂದಾಕ್ಷಣ ಮಾರು ದೂರ ಓಡಿ ಹೋಗ್ತಾರೆ. ಅಲ್ಲೊಬ್ಬ ಮಹಿಳೆ ವ್ಯಾಕ್ಸಿನ್ ಬೇಡವೆಂದು ಓಡಿ ಹೋಗುತ್ತಿದ್ದಾಗ ನಡುಬೀದಿಯಲ್ಲೇ ಉರುಳಿಸಿಕೊಂಡು ಕೊಟ್ಟಿದ್ದಾರೆ.
ಜಿಲ್ಲೆಯ ಹಳ್ಳಿಯೊಂದಕ್ಕೆ ಆರೋಗ್ಯ ಇಲಾಖೆ ಅಧಿಕಾರಿ ಧನಂಜಯ್ ಭೇಟಿ ಕೊಟ್ಟಿದ್ದರು. ಮನೆ ಮನೆಗೆ ತೆರಳಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂತ ತಾಳ್ಮೆಯಿಂದಲೇ ಹೇಳುತ್ತಿದ್ದರು. ಆದ್ರೆ ಹಳ್ಳಿಯಲ್ಲಿ ಒಬ್ಬಬ್ಬರದ್ದು ಒಂದೊಂದು ವಿಚಿತ್ರ ನಾಟಕ. ಅಧಿಕಾರಿಗಳಿಗೆ ಅವಾಜ್ ಹಾಕಿದ್ದಾರೆ. ಜೊತೆಗೆ ಒಂದಷ್ಟು ಮಹಿಳೆಯರು ಮನೆ ಬಿಟ್ಟು ಓಡಿ ಹೋಗಲು ಯತ್ನಿಸಿದ್ದಾರೆ.
ಆಗ ಆಕೆಯ ಮನೆಯವರೇ ಆಕೆಯನ್ನ ಹಿಡಿದಿದ್ದಾರೆ. ನೆಲಕ್ಕೆ ಕೆಡವಿಕೊಂಡು ಆರೋಗ್ಯ ಅಧಿಕಾರಿಗಳ ಬಳಿ ಲಸಿಕೆ ಹಾಕಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ನೆಪ ಹೇಳುವವರು ಹೆಚ್ಚಾಗಿದ್ದಾರೆ. ಸದ್ಯ ಮೂರನೆ ಅಲೆ ಆತಂಕದ ಜೊತೆಗೆ ಓಮಿಕ್ರಾನ್ ಭಯವೂ ಶುರುವಾಗಿದೆ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳದವರಿಗೆ ಆರೋಗ್ಯ ಇಲಾಖೆ ವಿವರಿಸಲು ಪ್ರಯತ್ನಿಸುತ್ತದೆ. ಅದಕ್ಕೂ ಬಗ್ಗದೆ ಹೋದರೆ ಬಲವಂತವಾಗಿ ಹಾಕಲಾಗುತ್ತಿದೆ.