ಅಹಮದಬಾದ್: ವಂದೇ ಭಾರತ್ ರೈಲು ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯ ಅವಘಡಗಳು ಸಂಭವಿಸುತ್ತಲೇ ಇದೆ. ಹಸುಗಳಿಗೆ, ಎಮ್ಮೆಗಳಿಗೆ ರೈಲು ಡಿಕ್ಕಿಯಾದ ಮೇಲೆ ಇದೀಗ ಮಹಿಳೆಗೂ ಡಿಕ್ಕಿಯಾಗಿದೆ. ಗುಜರಾತ್ ನ ಆನಂದ್ ಬಳಿ ಈ ದುರ್ಘಟನೆ ನಡೆದಿದ್ದು, 54 ವರ್ಷದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆ ಗುಜರಾತ್ ನ ಆನಂದ್ ಎಂಬಲ್ಲಿ ಹಳಿ ದಾಟುತ್ತಿದ್ದಾಗ, ಎಕ್ಸ್ಪ್ರೆಸ್ ರೈಲು ಹರಿದು ಮಹಿಳೆ ಸಾವನ್ನಪ್ಪಿದ್ದಾರೆ. ಈ ಮಹಿಳೆ ಸಂಬಂಧಿಕರ ಮನೆಗೆ ತೆರಳುತ್ತಿದ್ದರಂತೆ. ಇನ್ನು ರೈಲು ಗಾಂಧಿನಗರದಿಂದ ಮುಂಬೈಗೆ ತೆರಳುತ್ತಿತ್ತು. ಆನಂದ್ ಬಳಿ ಸ್ಟಾಪ್ ಇಲ್ಲದೆ ಇದ್ದ ಕಾರಣ, ರೈಲು ಸ್ಪೀಡ್ ನಲ್ಲಿಯೇ ಇತ್ತು. ಹೀಗಾಗಿ ಈ ದರ್ಘಟನೆ ನಡೆದಿದೆ.
ಕಳೆದ 1 ತಿಂಗಳಲ್ಲಿ ವಂದೇ ಭಾರತ್ ರೈಲು ನಾಲ್ಕು ಬಾರಿ ಡಿಕ್ಕಿ ಹೊಡೆದಿದೆ. ಮೊದಲ ಬಾರಿಗೆ ಹಸುಗಳಿಗೆ ಡಿಕ್ಕಿ ಹೊಡೆದಾಗ ಹಸುಗಳು ಸಾವನ್ನಪ್ಪಿದ್ದವು. ಎರಡನೇ ಬಾರಿಯೂ ಗೂಳಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ಎಮ್ಮೆಗಳ ಸಾವಾಗಿತ್ತು. ಇದೀಗ ಮಹಿಳೆಗೂ ಡಿಕ್ಕಿ ಹೊಡೆದಿದೆ.