ನಟ ನಾಗಭೂಷಣ್ ಕಾರು ಆಕ್ಸಿಡೆಂಟ್ ನಲ್ಲಿ ಮಹಿಳೆ ಸಾವು : ರಾತ್ರಿಯ ಘಟನೆ ಬಿಚ್ಚಿಟ್ಟ ನಟ..!

1 Min Read

ಬೆಂಗಳೂರು: ನಟ ನಾಗಭೂಷಣ್ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಇದೀಗ ಎಫ್ಐಆರ್ ದಾಖಲಾಗಿದೆ. ನಾಗಭೂಷಣ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸೆಉ ತನಿಖೆ ನಡೆಸುತ್ತಿದ್ದು, ಪೊಲೀಸರ ಮುಂದೆ ರಾತ್ರಿ ಏನಾಯಿತು ಎಂಬ ವಿಚಾರವನ್ನು ನಟ ನಾಗಭೂಷಣ್ ವಿವರವಾಗಿ ತಿಳಿಸಿದ್ದಲ್ಲದೆ, ಕಾರನ್ನು ತಾನೇ ಡ್ರೈವ್ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ.

ಪೊಲೀಸರ ಮುಂದೆ ಈ ಬಗ್ಗೆ ಮಾತನಾಡಿರುವ ನಾಗಭೂಷಣ್, ‘ನಾನು ನನ್ನ ಸ್ನೇಹಿತನನ್ನು ಭೇಟಿ ಮಾಡಿ ಆರ್ ಆರ್ ನಗರದಿಂದ ಬರುತ್ತಿದ್ದೆ. ನನ್ನ ಕಿಯಾ ಕಾರಿ‌ಲ್ಲಿ ಜೆಪಿ ನಗರಕ್ಕೆ ತೆರಳಿದ್ದೆ. ಉತ್ತರಹಳ್ಳಿಯಿಂದ ಕೋಣನಕುಂಟೆಗೆ ಪ್ರಯಾಣ ಅದಾಗಿತ್ತು. ಈ ವೇಳೆ ಫುಟ್ ಪಾತ್ ಮೇಲಿದ್ದ ದಂಪತಿ ಕೆಳಗಿಳಿದು ಬಂದಿದ್ದಾರೆ. ಗಾಬರಿಯಿಂದ ರಸ್ತೆಗಿಳಿದ ದಂಪತಿಗೆ ಕಾರು ಡಿಕ್ಕಿ ಹೊಡೆದಿದೆ. ನಂತರ ಮುಂದೆ ಇದ್ದ ವಿದ್ಯುತ್ ಕಂಬಕ್ಕೂ ಕಾರು ಡಿಕ್ಕಿಯಾಗಿದೆ.

ಅಲ್ಲಿದ್ದ ಜನರು, ಅಪಾರ್ಟ್ಮೆಂಟ್ ನಿವಾಸಿಗಳು ತಕ್ಷಣ ಅಲ್ಲಿಗೆ ಧಾವಿಸಿದರು. ಆ ದಂಪತಿಯನ್ನು ಮೇಲೆತ್ತಿ ಕಿಉರಿಸೊದರು. ನಾನು ಅಲ್ಲಿಗೆ ಹೋದೆ. ಕಾರಿನಲ್ಲಿಯೇ ಆಸ್ಪತ್ರೆ ಸೇರಿಸಲು ಹೋದಾಗ ಕಾರು ಸ್ಟಾರ್ಟ್ ಆಗಲಿಲ್ಲ. ಆಟೋದಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಗಂಡಸಿಗೆ ಕಾಲು, ಹಿಟ್ಟೆ, ಬೆನ್ನು, ತಲೆ ಭಾಗಕ್ಕೆ ಏಟಾಗಿದೆ. ಹೆಂಗಸಿಗೆ ಜಾಸ್ತಿ ಏಟಾಗಿ ಮಾತನಾಡದ ಸ್ಥಿತಿಯಲ್ಲಿದ್ದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಹೆಂಗಸು ಪ್ರಾಣ ಬಿಟ್ಟಿದ್ದರು. ಮತ್ತೊಬ್ಬ ಗಾಯಾಳನ್ನು ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ, ಚಿಜಿತ್ಸೆ ಕೊಡಿಸಲಾಗುತ್ತಿದೆ. ಕಾರನ್ನ ನಾನೇ ಚಾಲನೆ ಮಾಡುತ್ತಿದ್ದೆ ಎಂದು ನಾಗಭೂಷಣ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks