ರಾಯಚೂರು: ಇಲ್ಲಿನ ಇಂದಿರಾ ನಗರದಲ್ಲಿ ಕಲುಷಿತ ನೀರು ಕುಡಿದು 60ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ನಗರಸಭೆ ಸರಬರಾಜು ಮಾಡಿದ ನೀರು ಕುಡಿದು, 40 ವರ್ಷದ ಮಲ್ಲಮ್ಮ ನಿಧನರಾಗಿದ್ದಾರೆ.
ರಿಮ್ಸ್ ಆಸ್ಪತ್ರೆ ಅಸ್ವಸ್ಥರಿಂದ ತುಂಬಿ ಹೋಗಿದೆ. 60ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುದ್ಧೀಕರಣ ಮಾಡದೆ ನೀರು ಬಿಟ್ಟಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಮಾತ್ರವಲ್ಲ ಖಾಸಗಿ ಆಸ್ಪತ್ರೆಯಲ್ಲೂ ಅಸ್ವಸ್ಥ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೆಲವೆಡೆ ಕುಡಿಯುವ ನೀರಿಗೆ ಚರಂಡಿ ನೀರು ಸೇರಿದೆ. ಆದರೆ ಅದನ್ನು ಶುದ್ಧೀಕರಣ ಮಾಟದೆ ಹಾಗೇ ಸರಬರಾಜು ಮಾಡುತ್ತಿರುವುದು ರಾಯಚೂರು ಜನತೆಯ ಆತಂಕಕ್ಕೆ ಕಾತಣವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಡ್ಮಿಟ್ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.