ಮಹಿಳೆ ಹಾಗೂ ಯುವತಿ ಕಾಣೆ : ಪತ್ತೆ ನೆರವಿಗೆ ಮನವಿ

1 Min Read

ಚಿತ್ರದುರ್ಗ. ಫೆ.9: ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ನಿಂಗಮ್ಮ ಗಂಡ ಶಿವರಾಜ್(26) ಮತ್ತು ಹೇಮಲತಾ ತಂದೆ ಗುರುಸ್ವಾಮಿ(16) ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದೆ.

ಕಾಣೆಯಾದ ನಿಂಗಮ್ಮ ಸುಮಾರು 5.1 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈ ಕಟ್ಟು, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಚೂಡಿಧಾರ್ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ.

ಕಾಣೆಯಾದ ಹೇಮಲತಾ ಸುಮಾರು 5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಟೀ ಶರ್ಟ್ ಕೆಂಪು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾಳೆ ಹಾಗೂ ಕನ್ನಡ ಮತ್ತು ಲಂಬಾಣಿ ಮಾತನಾಡುತ್ತಾಳೆ.
ಕಾಣೆಯಾದವರ ಗುರುತು ಪತ್ತೆಯಾದವರು, ಹೊಳಲ್ಕೆರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08191-275233, ಹೊಳಲ್ಕೆರೆ ವೃತ್ತ ನಿರೀಕ್ಷಕರವರ ಕಛೇರಿ ಸಂಖ್ಯೆ 08191-275376, ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕರವರ ಕಛೇರಿ ಸಂಖ್ಯೆ 08194-222430, ಚಿತ್ರದುರ್ಗ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08194-222782, ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Share This Article
Enable Notifications OK No thanks