ಮಳೆಯಿಲ್ಲದೆ.. ಒಳಹರಿವು ಬಾರದೆ ಬತ್ತುತ್ತಿದೆ ಹಿರಿಯೂರಿನ ಗಾಯತ್ರಿ ಜಲಾಶಯ..!

1 Min Read

 

ಹಿರಿಯೂರು: ಮುಂಗಾರು ಮಳೆ ಬಂದ ರೀತಿ ಕಂಡು ಈ ವರ್ಷ ಅತ್ಯದ್ಭುತವಾಗಿ ಮಳೆಯಾಗಲಿದೆ, ಎಲ್ಲಾ ಜಲಾಶಯಗಳು ತುಂಬಲಿವೆ, ಕೆರೆ ಕಟ್ಟೆಗಳು ಭರ್ತಿಯಾಗಲಿವೆ ಎಂದೇ ಭಾವಿಸಿದ್ದರು. ಆದರೆ ಅದ್ಯಾಕೋ ಮಳೆ ಈಗ ಕೈಕೊಟ್ಟಂತೆ ಕಾಣಿಸುತ್ತಿದೆ. ನಿರೀಕ್ಷಿಸಿದ ಮಟ್ಟಕ್ಕೆ ಮಳೆಯೇ ಬಂದಿಲ್ಲ. ಹೀಗಾಗಿ ಹಲವು ಜಲಾಶಯಗಳಿಗೆ ಒಳಹರಿವು ಕಡಿಮೆಯಾದಂತೆ ಆಗಿದೆ. ಅದರಲ್ಲೂ ಹಿರಿಯೂರಿನ ಜವನಗೊಂಡನಹಳ್ಳಿ ಹೋಬಳಿಯ ಗಾಯತ್ರು ಜಲಾಶಯ ನೀರಿಲ್ಲದೆ ಸೊರಗುವ ಸ್ಥಿತಿಗೆ ಬಂದಿದೆ.

ಈ ಜಲಾಶಯವನ್ನು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಾಣ ಮಾಡಿದ್ದರು. ಕರಿಯಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸುವರ್ಣ ಮುಖಿ ನದಿಗೆ ಅಡ್ಡಲಾಗಿ 1963ರಲ್ಲಿ ಗಾಯತ್ರಿ ಜಾಲಾಶಯವನ್ನು ನಿರ್ಮಾಣ ಮಾಡಲಾಗಿತ್ತು. ಗಾಯತ್ರಿ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯವೂ 0.975 ಟಿಎಂಸಿಯಾಗಿದೆ. ಇದರಲ್ಲಿ 0.337 ಟಿಎಂಸಿ ಬಳಕೆಗೆ ಲಭ್ಯವಿದೆ.

ಆದರೆ ಮಳೆಗಾಲ ಮುಗಿಯುವ ಸಮಯ ಬಂದರು ಜಲಾಶಯಕ್ಕೆ ಮಾತ್ರ ಇನ್ನು ಯಾವುದೇ ಒಳಹರಿವು ಬಂದಿಲ್ಲ. ಇನ್ನು ಬಾಕಿ ಉಳಿದಿರುವುದು ಅತ್ತೆ, ಚಿತ್ತೆ, ಸ್ವಾತಿ ಹಾಗೂ ವಿಶಾತಿ ಮಳೆಗಳು ಮಾತ್ರ. ಈಗಾಗಲೇ ಉತ್ತರೆ ಮಳೆಯೂ ಆರಂಭವಾಗಿದೆ. ಆದರೆ ಈಗಿನ ವಾತಾವರಣ ಗಮನಿಸಿದರೆ ಉತ್ತರೆ ಮಳೆ ಉತ್ತಮವಾಗಿ ಬರುವ ನಿರೀಕ್ಷೆ ಇಲ್ಲ. ಯಾಕಂದ್ರೆ ಜೋರು ಬಿಸಿಲು ಕಾಣಿಸಬೇಕು ಆಗ ಮಾತ್ರ ಉತ್ತರೆ ಮಳೆ ಜೋರಾಗಲಿದೆ ಎಂಬ ಮಾತಿದೆ. ವಾತಾವರಣ ಮೋಡ ಕವಿದಂತೆಯೇ ಇದೆ. ಬಿಸಿಲು ಆಗಾಗ ಕಾಣಿಸಿ ಮಾಯವಾಗುತ್ತಿದೆ. ಈ ಒಂದು ಜಲಾಶಯ ಸುಮಾರು 7 ಸಾವಿರ ಎಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜಲಾಶಯವೂ 145 ಅಡಿ ಎತ್ತರ ಹೊಂದಿದೆ. 0.67 ಟಿಎಂಸಿ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುತ್ತದೆ. ಆದರೆ ಈಗ ಜಲಾಶಯಕ್ಕೆ ಒಳ ಹರಿವೇ ಇಲ್ಲದಂತೆ ಆಗಿರುವುದು ಸುತ್ತಮುತ್ತಲಿನ ರೈತರಿಗೂ ಆತಂಕವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *