ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ತೆಗೆದುಕೊಂಡವರ ಸಾಧಕರ ಸಾಲಿನಲ್ಲಿ ನಟಿ ಕಂಗನಾ ಕೂಡ ನಿಂತಿದ್ರು. ಪ್ರಶಸ್ತಿಯನ್ನು ತೆಗೆದುಕೊಂಡ್ರು. ಆದ್ರೆ ಸಾಕಷ್ಟು ಜನ ಅದೇ ಸಮಯದಲ್ಲೇ ಕಂಗನಾಗೆ ಯಾಕೆ ಈ ಪ್ರಶಸ್ತಿ ಎಂಬ ಪ್ರಶ್ನೆಯನ್ನು ಕೇಳಿದ್ರು. ಇದೀಗ ಆ ಬೆನ್ನಲ್ಲೇ ಕಾಂಗ್ರೆಸ್ ಕೂಡ ಕಂಗಾನ ವಿರುದ್ಧ ಕ್ಯಾಂಪೇನ್ ಆರಂಭಿಸಿದೆ.
ಇತ್ತೀಚೆಗಷ್ಟೇ ಕಂಗನಾ ಬಿಜೆಪಿ ಹೊಗಳುವ ಭರದಲ್ಲಿ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ಬಗ್ಗೆ ಮಾತನಾಡಿದ್ರು. 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014 ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ ಅಂತ ಹೇಳಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ರು. ಅದೇ ವಿಚಾರಕ್ಕೆ ರೊಚ್ಚುಗೆದ್ದಿರುವ ಕಾಂಗ್ರೆಸ್ ಈಗ ಕಂಗಾನಾಗೆ ತಿರುಗೇಟು ನೀಡಿದೆ.
ಕಂಗನಾಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನ ವಾಪಾಸ್ಸು ಮಾಡಲೇಬೇಕೆಂದು ಪಟ್ಟು ಹಿಡಿದುಕೊಂಡು ಕುಳಿತಿದೆ. ಪದ್ಮಶ್ರೀ ಪ್ರಶಸ್ತಿಯನ್ನ ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಟ್ವಿಟ್ಟರ್ ನಲ್ಲಿ ಒತ್ತಾಯಿಸಿ.
ಟ್ವಿಟ್ಟರ್ ನಲ್ಲಿ ಕ್ಯಾಂಪೇನ್ ಶುರು ಮಾಡಿರುವ ಕಾಂಗ್ರೆಸ್ ಇಂಥ ಮಹತ್ವದ ಪ್ರಶಸ್ತಿಯನ್ನ ಯಾರಿಗೆ ಕೊಡುತ್ತಿದ್ದೇವೆ ಅಂತ ಕೇಂದ್ರ ಸರ್ಕಾರ ಮತ್ತು ಆಯ್ಕೆ ಸಮಿತಿ ಕ್ರಾಸ್ ಚೆಕ್ ಮಾಡಬೇಕು ಎಂದಿದೆ.