ಚಿಕ್ಕಮಗಳೂರು: ಕಡೂರು ಕ್ಷೇತ್ರದ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ. ಕಡೂರು ಕ್ಷೇತ್ರದ ಮಾಜಿ ಶಾಸಕ ವೈ ಎಸ್ ವಿ ದತ್ತಾ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಆಡಿಯೋವೊಂದು ವೈರಲ್ ಆಗಿದೆ.
ವೈ ಎಸ್ ವಿ ದತ್ತಾ ಅವರು ಡಿಸೆಂಬರ್ 11 ರಂದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಆಡಿಯೋ ಅವರ ಆಪ್ತವಲಯದಲ್ಲಿಯೇ ವೈರಲ್ ಆಗಿದೆ. ಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣ ಯಟಗೇರಿ ಅವರ ಆಡಿಯೋ ವೈರಲ್ ಆಗಿದ್ದು,ವೈರಲ್ ಆದ ಆಡಿಯೋದಲ್ಲಿ ಈಗ ತಾನೇ ದೂರವಾಣಿ ಮೂಲಕ ಸಂದೇಶ ಕಳುಹಿಸಿದ್ದಾರೆ. ಜೆಡಿಎಸ್ ಮುಖಡಂರು, ಮತದಾರರು ಮತ್ತು ಕಾಂಗ್ರೆಸ್ ಮುಖಂಡರ ವಿಶ್ವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತೇನೆ. ಅಂದೇ ಕಾಂಗ್ರೆಸ್ ಸೇರುವುದನ್ನು ಖಚಿತಪಡಿಸುತ್ತೇನೆ. ಡಿಸೆಂಬರ್ 17ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತೇನೆ ಎಂದು ಹೇಳಿರುವ ಆಡಿಯೋ ಅದಾಗಿದೆ.
ವೈ ಎಸ್ ವಿ ದತ್ತಾ ಅವರು ಈ ಹಿಂದೆ ಒಮ್ಮೆ ಕಾಂಗ್ರೆಸ್ ಸೇರುತ್ತೇನೆ ಎಂಬ ಆಡಿಯೋವೊಂದು ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಅದೇ ರೀತಿಯ ಆಡಿಯೋ ವೈರಲ್ ಆಗಿದ್ದು, ಒಂದು ವೇಳೆ ವೈ ಎಸ್ ವಿ ದತ್ತಾ ಅವರು ಕಾಂಗ್ರೆಸ್ ಸೇರಿ, ಕಡೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ನೇರ ಹಣಾಹಣಿಯಾಗಲಿದೆ. ಜೊತೆಗೆಜೆಡಿಎಸ್ ಗೆ ಬಾರೀ ಹಿನ್ನಡೆಯಾಗುವುದರಲ್ಲಿ ನೋ ಡೌಟ್ ಎನ್ನುತ್ತಿದ್ದಾರೆ ಬಲ್ಲವರು.