ಬಿಜೆಪಿ ಸೇರುವ ಎಲ್ಲಾ ರೌಡಿಗಳ ಕೇಸ್ಗಳನ್ನೂ ಮನ್ನಾ ಮಾಡುವಿರಾ?: ಸಿಎಂಗೆ ಕಾಂಗ್ರೆಸ್ ಪ್ರಶ್ನೆ

1 Min Read

ಬೆಂಗಳೂರು: ಬಿಜೆಪಿ ಪಕ್ಷಕ್ಕೆ ರೌಡಿಗಳನ್ನು ಸೇರಿಸಿಕೊಳ್ಳುತ್ತಿರುವ ವಿಚಾರಕ್ಕೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಈ ಸಂಬಂಧ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಸಂಸ್ಕಾರಿ ಪಕ್ಷದ ನಾಯಕರು ರೌಡಿಯೊಬ್ಬನನ್ನು ಗೋಮೂತ್ರ ಪ್ರೋಕ್ಷಣೆ ಮಾಡಿ ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದಾರಾ?

ಯಾದಗಿರಿಯಿಂದ ಗಡಿಪಾರು,
ಕಲ್ಬುರ್ಗಿಯಿಂದ ಗಡಿಪಾರು,
2 ಮರ್ಡರ್ ಕೇಸ್ಗಳು,
30ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ಗಳು,
ಅನ್ನಭಾಗ್ಯದ ಅಕ್ಕಿ ಕಳ್ಳತನದ ಕೇಸ್ಗಳು ಇರುವ ರೌಡಿ ಬಿಜೆಪಿಗೆ ಬೇಕಾದ ಎಲ್ಲಾ ಅರ್ಹತೆ ಪಡೆದಿದ್ದಾನೆಯೇ?.

ಬಿಜೆಪಿಗೂ ರೌಡಿಗಳಿಗೂ ಹಳೆಯ ಸಂಬಂಧವಿದೆ. ಕಲ್ಬುರ್ಗಿಯಲ್ಲಿ ಬಿಜೆಪಿ ಸೇರಿದ್ದ ಮತ್ತೊಬ್ಬ ರೌಡಿ ಶೀಟರ್ಗೆ ಪೊಲೀಸರೊಂದಿಗೆ ಇರುವ ಹಣಕಾಸಿನ ವ್ಯವಹರವೇನು?. ರೌಡಿ ಶೀಟರ್ಗಳನ್ನು ಹಾಗೂ ಪೊಲೀಸರನ್ನು ಹಫ್ತಾ ವಸೂಲಿಗೆ ಬಳಸಿ ಕೊಳ್ಳುತ್ತಿದೆಯೇ ಬಿಜೆಪಿ? @BSBommai ಅವರೇ, ರೌಡಿಗಳನ್ನು ಪ್ರೋತ್ಸಾಹಿಸುತ್ತಿರುವ ತಮ್ಮದು ಯಾವ ಸೀಮೆಯ ನೈತಿಕತೆ?.

ಯಾವ ರೌಡಿಯನ್ನೂ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದ @BSBommai ಅವರೇ
◆ಸೈಕಲ್ ರವಿ ಸಚಿವ @drashwathcn ಸಮ್ಮುಖದಲ್ಲಿ ಸೇರಿಕೊಂಡಿದ್ದೇನು? ◆ಬೆತ್ತನಗೆರೆ ಶಂಕರನನ್ನು ಸಂಸದ @mepratap ಸೇರಿಕೊಂಡಿದ್ದೇನು?

◆ಆನೇಕಲ್ ಪುರಸಭೆಗೆ ಸರ್ಕಾರವೇ (ಉಪ್ಪಿ) ಮಂಜುನಾಥನನ್ನು ನಾಮನಿರ್ದೇಶನ ಮಾಡಿದ್ದೇಕೆ?.

ರೌಡಿಗಳು ಬಿಜೆಪಿಗೆ ಆಪ್ತರೇಕೆ? ಹಿಂದೆ ರೌಡಿಗಳನ್ನು ಕಂಡರೆ ಪೊಲೀಸರು ಒದ್ದು ಎಳೆದು ತರುತ್ತಿದ್ದರು, ಈಗ ಬಿಜೆಪಿಯ ರೌಡಿ ರಾಜಕೀಯದಿಂದಾಗಿ ಅದೇ ರೌಡಿಗಳಿಗೆ ಪೊಲೀಸರು ಸೆಲ್ಯೂಟ್ ಹೊಡೆಯುವಂತಾಗಿದೆ. ರೌಡಿಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಪೊಲೀಸರ ನೈತಿಕ ಸ್ಥೈರ್ಯವನ್ನೇ ಬಿಜೆಪಿ ಕಿತ್ತುಕೊಂಡಿದೆ. “ಇಂದಿನ ರೌಡಿಗಳೇ ಮುಂದಿನ ಬಿಜೆಪಿ ನಾಯಕರು” ಎಂಬಂತಾಗಿದೆ.

ಕೋಮು ರಾಜಕಾರಣ ಸಾಲದು ಎಂಬಂತೆ ರೌಡಿ ರಾಜಕೀಯ ಮಾಡಲು ಹೊರಟಿದೆ ಬಿಜೆಪಿ. ರಾಮಾರಾಜ್ಯದ ಹೆಸರು ಹೇಳುತ್ತಿದ್ದ ಬಿಜೆಪಿ ನಾಯಕರು ರೌಡಿರಾಜ್ಯ ಮಾಡಲು ಹೊರಟಿದ್ದಾರೆ. ಅಪ್ಪು ಎಂಬ ರೌಡಿ ಮೇಲಿದ್ದ ರೌಡಿ ಶೀಟ್ ತೆಗೆಸಿ ರಾಜಕಾರಿಣಿಯ ಮುಖವಾಡ ತೋಡಿಸಿದ್ದೇಕೆ @BSBommai ಅವರೇ? ಬಿಜೆಪಿ ಸೇರುವ ಎಲ್ಲಾ ರೌಡಿಗಳ ಕೇಸ್ಗಳನ್ನೂ ಮನ್ನಾ ಮಾಡುವಿರಾ? ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *