ಬೆಂಗಳೂರು: ಕಾಂಗ್ರೆಸ್ ಹೊತ್ತಿಸಿದ ಟೆಂಡರ್ ಕಿಡಿ ಈಗ ಬಿಜೆಪಿ ನಾಯಕರಿಗೆ ತಲೆ ಕೆಡಿಸಿದೆ. ಕಾಂಗ್ರೆಸ್ ನಾಯಕರ ಮಾತಿಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಿಟಿ ರವಿ ಮಾತನಾಡಿ, ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ದಾಖಲೆಗಳು ಇಲ್ಲದೆ ಇರುವಂತ ಆರೋಪ ನಿಮ್ಮದು. ಗಾಳಿಯಲ್ಲಿ ಗುಂಡು ಆರಿಸುವುದರಲ್ಲಿ ನಿಸ್ಸೀಮರು. ದಾಖಲೆಗಳಿದ್ದರೆ ಕೊಡಿ. ಇಷ್ಟೆಲ್ಲಾ ದಾಖಲೆಗಳಿದ್ದರೆ ವಿಧಾನಸೌಧದಲ್ಲಿ ಯಾಕೆ ಹೇಳಲಿಲ್ಲ. ವಿಧಾನಸೌಧದಲ್ಲಿ ಮಾತನಾಡಿ ಎಂದರೆ ಮಾತನಾಡಲ್ಲ. ಸುಮ್ಮನೆ ಹೊರಗೆ ಬಂದು ಮಾತನಾಡುತ್ತಾರೆ. ವಿಕ್ಷಗಳ ಬಳಿ ದಾಖಲೆ ಇದ್ದರೆ, ಎಸಿಬಿ, ಲೋಕಾಯುಕ್ತಕ್ಕೆ ದೂರು ಕೊಡಲಿ. ಅವರಿಗೂ ಸ್ವತಂತ್ರ್ಯವಿದೆ. ಯಾರಿಗೂ ನಾವೂ ನಿರಾಕರಿಸುತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಯಡಿಯೂರಪ್ಪ ಮಾತನಾಡಿ, ಕಳೆದ ಎಂಟು ವರ್ಷದಲ್ಲಿ ಪ್ರಧಾನಿ ಮೋದಿಯವರು ದೇಶ ವಿದೇಶ ಸುತ್ತಿ ಬಂದರು ವಿಶ್ರಾಂತಿ ತೆಗೆದುಕೊಳ್ಳದೆ ದೇಶ ಸೇವೆ ಮಾಡುತ್ತಿರುವ ಪ್ರಧಾನಿ ಮೋದಿಯವರು ನಮ್ಮ ಜೊತೆ ಇದ್ದಾರೆ. ಇದ್ಯಾರೋ ಯಂಕ – ನಾಣಿ – ಸೀನನಿಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಮೋದಿಯವರ ಬಗ್ಗೆ ಜನ ಎಷ್ಟು ಭರವಸೆ ಇಟ್ಟಿದ್ದಾರೆ ಗೊತ್ತಿದೆ. ರಾಹುಲ್ ಗಾಂಧಿ ಬಿಜೆಪಿಗೆ ಸವಾಲು ಆಗುವುದಕ್ಕೆ ಸಾಧ್ಯವಾ. ಈ ಕಾಂಗ್ರೆಸ್ ನವರು ಯಂಕ, ನಾಣಿ, ಸೀನಾ ಅಂತಾರೆ. ಯಾರೋ ಏನೋ ಹೇಳುತ್ತಾರೆ ಅಂತ ತಲೆಕೆಡಿಸಿಕೊಳ್ಳವೇಡಿ. ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ.
ನಾನು ಕಾಂಗ್ರೆಸ್ ನವರುಗೆ ಒಂದು ಪ್ರಶ್ನೆ ಕೇಳುತ್ತೇನೆ. ನಿಮ್ಮ ನಾಯಕ ಯಾರು..? ರಾಹುಲ್ ಗಾಂಧಿಯನ್ನು ಕರೆದುಕೊಂಡು ಬಂದು ಮೋದಿ ಅವರ ಎದುರು ಮತ ಕೇಳುತ್ತೀರಾ..? ಯಾರು ಭಯ ಪಡುವುದು ಬೇಡ. ಈ ಬಾರಿಯೂ ನಾವೇ ಅಧಿಕಾರಕ್ಕೆ ಬರುವುದು ಎಂದಿದ್ದಾರೆ.