ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಬಿಡಿಸಲಾಗದ ಕಗ್ಗಟ್ಟಾಗಿರೋದು, ಬಗೆಹರಿಯಲಾಗದ ಸಮಸ್ಯೆ ಆಗಿ ಕಾಡುತ್ತಾ ಇರೋದು ಸಿಎಂ ಬದಲಾವಣೆ ವಿಚಾರ. ಈ ವರ್ಷವಾದರೂ ಅದಕ್ಕೊಂದು ಅಂತ್ಯ ಸಿಗುತ್ತಾ, ಉತ್ತರ ಸಿಗುತ್ತಾ ಎಂಬುದನ್ನ ನೋಡಬೇಕಿದೆ. ಸಿಎಂ ಆಗುವ ಕನಸು ಹೊತ್ತಿರುವ ಡಿಕೆ ಶಿವಕುಮಾರ್ ಅವರು ಹೊಸ ವರ್ಷದ ಬಗ್ಗೆ ಮಾತನ್ನಾಡಿದ್ದಾರೆ.
ಹೊಸ ವರ್ಷ 2026 ಒಳ್ಳೆ ಶುಭ ಲಗ್ನದಲ್ಲಿ ಪ್ರಾರಂಭವಾಗಿದೆ. 2025 ಈ ದೇಶದಲ್ಲಿ ಬಹಳ ಉತ್ತಮವಾದ ಆಡಳಿತವನ್ನ ಕೊಟ್ಟಿದ್ದೇವೆ. ನಾವೂ ಕರ್ನಾಟಕ ರಾಜ್ಯವನ್ನ ಗ್ಲೋಬಲ್ ಇನ್ವೆಸ್ಟರ್ ಮೀಟ್, ಟೆಕ್ ಸಮ್ಮಿಟ್ ಇರಬಹುದು ಮತ್ತು ನಾವೇನ್ ಮಾತನ್ನ ಕೊಟ್ಟಿದ್ದೆವು, ಇರಿಗೇಷನ್ ನಲ್ಲಿ ತೆಗೆದುಕೊಂಡ ನಿರ್ಧಾರರಗಳು ತುಂಗಾಭದ್ರಾ, ಕಾವೇರಿಯಲ್ಲಿ ಸಿಗದ ನ್ಯಾಯ, ಮೇಕೆದಾಟು ವಿಚಾರ, ಇತಿಹಾಸ ಪುಟಕ್ಕೆ ಸೇರುವಂತಹ ಒಂದು ಪವಿತ್ರವಾದ ನಿರ್ಣಯಗಳು. ಇದೆಲ್ಲ ನಂಗೆ ಆತ್ಮಶಕ್ತಿ ತುಂಬಿದೆ. ಜನ ಏನು ನಮ್ಮ ಮೇಲೆ ವಿಶ್ವಾಸವನ್ನ ಇಟ್ಟಿದ್ದರು. ವಿಶ್ವಾಸವಿಟ್ಟಂತ ಜನರಿಗೆ ನಂಬಿಕೆ ಉಳಿಸಿಕೊಳ್ಳುವಂತಹ ಕೆಲಸವನ್ನ ಮಾಡಿದ್ದೇವೆ. ಇನ್ನು ಮುಂದಕ್ಕೆ ಅನೇಕ ಕಾರ್ಯಕ್ರಮಗಳನ್ನ ರೂಪಿಸುವುದಕ್ಕೆ ಯೋಜನೆಯನ್ನ ಜಾರುಗೆ ತರ್ತೇವೆ.
ಬೆಂಗಳೂರು ನಗರಕ್ಕೆ ಬಹುಶಃ ನನ್ನ 35 ವರ್ಷದ ರಾಜಕಾರಣ, ಶಾಸಕನಾಗಿ 36 ವರ್ಷ. ಅಲ್ಲಿಂದ ಇಲ್ಲಿಯ ತನಕ ಲೆಕ್ಕ ಹಾಕಿಕೊಂಡರೆ ಯಾರು ಕೂಡ ಇಂಥ ಐತಿಹಾಸಿಕ ಕಾರ್ಯಕ್ರಮವನ್ನ ಮಾಡುವುದಕ್ಕೆ ಆಗಿಲ್ಲ. ಪಿಎಂ ಕೂಡ ಇಲ್ಲಿಗೆ ಮೆಟ್ರೋ ಸಂಬಂಧ ಬಂದಾಗ ಯಾವ ರೀತಿ ಹಾಡಿ ಹೊಗಳಿದ್ರು, ನಮ್ಮ ಯೋಜನೆಗೆ ಹಣ ಕೊಡದೆ ಹೋದರು, ನಾವೂ ಹೊಸ ರೂಪವನ್ನ, ಭಾರತಕ್ಕೆ ಗೌರವ ಕೊಡುವ ರೀತಿಯಲ್ಲಿ ನಡೆಸಿಕೊಂಡಿದ್ದೀವಿ ಎಂದಿದ್ದಾರೆ.






