ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಇರಲ್ಲ. ಲೋಕಸಭಾ ಚುನಾವಣೆಯ ಬಳಿಕ ಪತನಗೊಳ್ಳುತ್ತದೆ ಎಂದು ಸಿಟಿ ರವಿ ಭವಿಷ್ಯ ನುಡಿದಿದ್ದಾರೆ. ಶಾಸಕರ ಒಳಬೇಗುದಿಯಿಂದಾನೆ ಪತನವಾಗುತ್ತೆ ಎಂದಿದ್ದಾರೆ.
ಜಾಸ್ತಿ ಪಂಚರ್ ಹಾಕಿದರೂ ಅದು ಕಷ್ಟವೇ. ಲೋಕಸಭಾ ಚುನಾವಣೆಯ ತನಕ ಬ್ಯಾಲೆನ್ಸ್ ಮಾಡುತ್ತಾರೆ ಅಷ್ಟೇ. ಸಿಎಂ ಸಿದ್ದರಾಮಯ್ಯ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ಪಂಕ್ಚರ್ ಆಗೋದು ಗ್ಯಾರಂಟಿ. ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರು ಬರೆದ ಪತ್ರ ನಕಲಿ ಎಂದು ಹೇಳಿದ್ರು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಂಡು ಸಿಎಂ ಸಿದ್ದರಾಮಯ್ಯ ಅವರು ಸರಣಿ ಸಭೆ ನಡೆಸುತ್ತಿದ್ದಾರೆ.
ಈ ರೀತಿಯ ಅಸಮಾಧಾನ ನೋಡಿದ್ರೆ ಲೋಕಸಭಾ ಚುನಾವಣೆ ತನಕ ಸರ್ಕಾರ ಉಳಿಯುತ್ತಾ..? ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಬರೆದು ಪತ್ರ ನಕಲಿ ಎನ್ನುತ್ತಾರೆ. ಇದರ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇರಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ನಕಲಿ ಎಂದು ಹೇಳಿದಾಗಲೇ ಅವರು ಎಡವಿದ್ದು. ನಕಲಿ ಎಂದು ಯಾರೂ ಹೇಳಬೇಕು..? ತನಿಖೆ ನಡೆಸಿದ ಬಳಿಕ ಹೇಳಬೇಕು ಎಂದು ತಿಳಿಸಿದ್ದಾರೆ.