ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಈ ಬೆನ್ನಲ್ಲೇ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಯ ವಿಚಾರ ಸದ್ದು ಮಾಡುತ್ತಿದೆ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗುವ ಸಾಧ್ಯತೆ ಇದೆ. ವಿ ಸೋಮಣ್ಣ ಅವರು ರಾಜ್ಯಾಧ್ಯಕ್ಷ ಸ್ಥಾನವನ್ನು ಕೇಳಿದ್ದಾರೆ.
ನಾನೂ ಕೂಡ ಪಕ್ಷದಲ್ಲಿ ಹಿರಿಯ. ಅನುಭವಿ ರಾಜಕಾರಣಿ ಇದ್ದೀನಿ. ನಾನೇ ರಾಜ್ಯಾಧ್ಯಕ್ಷ ಹುದ್ದೆ ಕೊಡಿ ಎಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ನಾಯಕರಾದ ಅಮಿತ್ ಶಾ, ಜೆ.ಪಿ.ನಡ್ಡಾರಿಗೆ ಪತ್ರ ಬರೆದು ವಿನಂತಿ ಮಾಡಿದ್ದೇನೆ. ನನಗೆ 6 ತಿಂಗಳು ಬೇಡ, ಬರೀ 100 ದಿನ ರಾಜ್ಯಾಧ್ಯಕ್ಷನಾಗಿ ಅವಕಾಶ ಕೊಡಲಿ. ಹಿನ್ನಡೆಯಾಗಿರುವುದನ್ನು ಮುನ್ನಡೆಗೆ ತರುವುದು ನನ್ನ ಜವಾಬ್ದಾರಿ. ಹಾಗೇ ಆಗಿಲ್ಲ ಎಂದಾಗ ನನ್ನ ರಾಜೀನಾಮೆ ಪಡೆಯಲಿ. ನನಗೆ ಪಕ್ಷ ಕೊಟ್ಟಂತಹ ಎಲ್ಲಾ ಟಾಸ್ಕ್‌ಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಅದೆಲ್ಲವೂ ಪರಿಗಣಿಸಿ, ನನಗೆ ಸ್ಥಾನ ನೀಡಲಿ ಎಂದಿದ್ದಾರೆ.
ಇನ್ನೂ ವಿ ಸೋಮಣ್ಣ ಅವರು ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ನಡೆಸಿದರು.ಆದರೆ ಎರಡು ಕಡೆಯೂ ಸೋಲು ಕಂಡಿದ್ದರು. ಚಾಮರಾಜನಗರ ಹಾಗೂ ವರುಣಾದಲ್ಲಿ ಸೋಲು ಕಂಡಿದ್ದರು. ಇದೀಗ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.